ಮೂರು ದಿನಗಳ ಅಮಿತ್ ಶಾ ರಾಜ್ಯ ಪ್ರವಾಸದ ವಿವರ
ಬೆಂಗಳೂರು, ಆಗಸ್ಟ್ 6: ಆಗಸ್ಟ್ 12ರಿಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯ ಪ್ರವಾಸ ಮಾಡಲಿದ್ದಾರೆ. ಅವರ ಮೂರು ದಿನಗಳ ಪ್ರವಾಸದ ವೇಳಾಪಟ್ಟಿಯನ್ನು ರಾಜ್ಯ ಬಿಜೆಪಿ ವಕ್ತಾರ ಎಸ್. ಸುರೇಶ್ ಕುಮಾರ್ ಇಂದು ಬಿಡುಗಡೆ ಮಾಡಿದರು.
- ಅಮಿತ್ ಶಾ ಪ್ರವಾಸದ ವೇಳಾಪಟ್ಟಿ ಹೀಗಿದೆ,
- ಮೊದಲ ದಿನ - ಆಗಸ್ಟ್ 12, ಶನಿವಾರ
- 10-45: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ

- ಬೆಂಗಳೂರು-ಬಳ್ಳಾರಿ ಹೆದ್ದಾರಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಬೃಹತ್ ಸ್ವಾಗತ ಕಾರ್ಯಕ್ರಮ
- ಮಲ್ಲೇಶ್ವರಂ ರಾಜ್ಯ ಬಿಜೆಪಿ ಕಚೇರಿಗೆ ಆಗಮನ
- ರಾಜ್ಯ ಬಿಜೆಪಿ ಕಚೇರಿಯಲ್ಲಿ ಗ್ರಂಥಾಲಯ ಉದ್ಘಾಟನೆ
- ರಾಜ್ಯ ಬಿಜೆಪಿ ಪದಾಧಿಕಾರಿಗಳು, ಉಸ್ತುವಾರಿ, ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ವಿಭಾಗೀಯ ಸಂಘಟನಾ ಕಾರ್ಯದರ್ಶಿಗಳು ಮತ್ತು ವಿವಿಧ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳನ್ನು ಉದ್ದೇಶಿಸಿ ಭಾಷಣ
- ಶಾಸಕರು ಮತ್ತು ಸಂಸದರ ಜತೆ ಸಂವಾದ
- ಬುದ್ದಿಜೀವಿಗಳು, ಚಿಂತಕರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರ ಜತೆ ಸಮಾಲೋಚನೆ
ಎರಡನೇ ದಿನ - ಆಗಸ್ಟ್ 13, ಭಾನುವಾರ
- ರಾಜಕೀಯ ವ್ಯವಹಾರ ಸಮಿತಿ ಸಭೆಯಲ್ಲಿ ಭಾಗಿ
- ಮಂಡ್ಯದ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭೇಟಿ
- ಸಂಜೆ ಪಕ್ಷದ ವಿವಿಧ ಯೋನೆಗಳು ಮತ್ತು ವಿಭಾಗಗಳ ಸಂಚಾಲಕರನ್ನು ಉದ್ದೇಶಿಸಿ ಭಾಷಣ
- ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ, ಶ್ರೀ ಶ್ರೀ ರವಿಶಂಕರ್ ಜತೆ ಸಮಾಲೋಚನೆ
ಮೂರನೇ ದಿನ - ಆಗಸ್ಟ್ 14, ಸೋಮವಾರ
- ವಿಸ್ತಾರಕರನ್ನುದ್ದೇಶಿಸಿ ಭಾಷಣ
- ಕಳೆದ ಬಾರಿ ಸೋತ ಲೋಕಸಭಾ ಕ್ಷೇತ್ರಗಳ ವಿವಿಧ ಕಾರ್ಯಕ್ರಮಗಳ ಬಗ್ಗೆ ಸಂವಾದಕ್ಕಾಗಿ ಸಮಯ ಮೀಸಲು
- ಪಕ್ಷದ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ತಂಡಗಳ ಜತೆ ಸಂವಾದ
- ಇತ್ತೀಚೆಗೆ ಪಕ್ಷ ಸೇರಿದ ಮುಖಂಡರ ಜತೆ ಸಂವಾದ
- ಎಸ್.ಸಿ ಮತ್ತು ಎಸ್.ಟಿ ಸಮುದಾಯದ ನಾಯಕರ ಜತೆ ಪ್ರತ್ಯೇಕ ಸಂವಾದ
- ಒಬಿಸಿ ನಾಯಕರ ಜತೆ ಪ್ರತ್ಯೇಕ ಸಂವಾದ
ಇವಿಷ್ಟು ಕಾರ್ಯಕ್ರಮಗಳು ಪ್ರವಾಸದ ವೇಳೆ ನಿರ್ಧಾರವಾಗಿವೆ. ನಂತರ ಅಮಿತ್ ಶಾ ಕರ್ನಾಟಕದಿಂದ ನಿರ್ಗಮಿಸಲಿದ್ದಾರೆ.












Click it and Unblock the Notifications