ಹನಿಟ್ರ್ಯಾಪ್ ಸದ್ದು : ಮಹಾ ನಾಯಕ ಯಾರು ಎಂಬ ಬಗ್ಗೆ ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಹುಬ್ಬಳ್ಳಿ, ಮಾರ್ಚ್ 31: :ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಬಲೆಗೆ ಬೀಳಿಸಲು ಹನಿ ಟ್ರ್ಯಾಪ್ ಸಾಕಷ್ಟು ಸದ್ದು ಮಾಡುತ್ತಿದೆ. ಈ ಹಿಂದೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹನಿಟ್ರ್ಯಾಪ್ ಪ್ರಕರಣದ ಹಿಂದೆ ಮಹಾನಾಯಕನ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಮತ್ತೆ ಹನಿಟ್ರ್ಯಾಪ್ ಪ್ರಕರಣ ಸದ್ದು ಮಾಡಿದ್ದು, ಸಚಿವ ರಾಜಣ್ಣ ಅವರ ಹನಿಟ್ರ್ಯಾಪ್ ಹಿಂದೆ ಯಾವ ಕೈವಾಡವಿದೆ ಎನ್ನುವ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ಗೆ ಸಂಬಂಧಪಟ್ಟಂತೆ ರಾಜಣ್ಣ, ರಾಜೇಂದ್ರ ದೂರು ನೀಡಿದ್ದು, ಅದು ಪೊಲೀಸ್ ತನಿಖೆ ಮಾಡಬೇಕು, ನಾವೇನು ಹೇಳೋದು. ತನಿಖೆ ಮಾಡಲಿ ಕಾದು ನೋಡೋಣ. ಈ ಹನಿಟ್ರ್ಯಾಪ್ ಹಿಂದೆ ಮಹಾಯನಾಯಕ ಯಾರು ಎಂಬ ವಿಚಾರಕ್ಕೆ ಅವೆಲ್ಲ ನಮಗೆ ಹೇಗೆ ಗೊತ್ತು. ನಾವು ಯಾರು ಅಂತ ಹೇಳಲಿಕ್ಕೆ ಆಗುತ್ತೆ, ಏಜೆನ್ಸಿ ಅವರು ಹೇಳ್ಬೇಕು ನಾವು ಹೇಳೋಕೆ ಆಗಲ್ಲ. ಸಮಯ ಬಂದಾಗ ಹೇಳೋಣ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ದಲಿತ ಸಚಿವರ ಮಾತಿಗೆ ಹೈಕಮಾಂಡ್ ಮಣ್ಣನೇ ಇಲ್ಲ ಎಂಬ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅದೆಲ್ಲ ಇವತ್ತೂ ಬೇಡ, ಇವತ್ತು ಒಂದು ದಿನ ರೆಸ್ಟ್ ತಗೊಳೋಣ. ಇವತ್ತು ಯುಗಾದಿ ಎಲ್ಲರೂ ರೆಸ್ಟ್ ತೆಗೆದುಕೊಳ್ಳಬೇಕು. ಅವಕಾಶ ಸಿಕ್ಕಾಗ ಹೇಳಿ ಹೇಳುತ್ತೇವೆ. ರಂಜಾನ್, ಯುಗಾದಿ ಇದೆ ರೆಸ್ಟ್ ತಗೊಳೋಣ ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಪ್ರತಿಕ್ರಿಯಿಸಿದ ಅವರು, ಅದು ನಮ್ಮ ಮಟ್ಟದಲ್ಲಿಲ್ಲ, ನಾವು ಅನಿರ್ಣಯ ತೆಗೆದುಕೊಳ್ಳುವಂತಿಲ್ಲ. ಕಾಂಗ್ರೆಸ್ ಹೈಕಮಾಂಡ್ ಗೆ ಈಗಾಗಲೇ ಸಾಕಷ್ಟು ಬಾರಿ ಹೇಳಿದ್ದೇವೆ. ಹೈಕಮಾಂಡ್ ಅವರೇ ನಿರ್ಧಾರ ಮಾಡುತ್ತಾರೆ ಕಾದು ನೋಡೋಣ. ಇನ್ನು ಸಾಕಷ್ಟು ಸಮಯ ಇದೆ
ಕೆ ಜೆ ಜಾರ್ಜ್ ನಿವಾಸದಲ್ಲಿ ಸುದೀರ್ಘ ಚರ್ಚೆ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿ, ನಮ್ಮ ಜಿಲ್ಲೆ ಹಾಗೂ ಅವರ ಇಲಾಖೆಗೆ ಸಂಬಂಧಪಟ್ಟ ಕೆಲಸ ಇರುತ್ತದೆ. ಅವರು ನಮ್ಮ ಮಂತ್ರಿಗಳು, ನಾವು ಭೇಟಿಯಾಗಿರ್ತೀವಿ ಎಲ್ಲದಕ್ಕೂ ರಾಜಕೀಯ ಬೇರೆಸಲು ಆಗುವುದಿಲ್ಲ. ಅಭಿವೃದ್ಧಿಗಾಗಿ ಭೇಟಿಯಾಗಿರುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಸಂಪುಟ ವಿಸ್ತರಣೆಗೆ ಡಿಸಿಎಂ ಒಲವು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರಾಸಕ್ತಿ ತೋರಿಸುತ್ತಿರುವ ವಿಚಾರವಾಗಿ ಸಚಿವ ಎಂ ಬಿ ಪಾಟೀಲ್ ಅವರು ಮಾತನಾಡಿ, ಸಚಿವ ಸಂಪುಟ ಪುನರ್ ರಚನೆ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಕೇಳಬೇಕು. ಯಾರು ಆಸಕ್ತಿ ಹೊಂದಿದ್ದಾರೋ? ಯಾರು ಹೊಂದಿಲ್ಲವೊ ಅವರನ್ನೆ ಕೇಳಬೇಕು. ಎಲ್ಲವೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು, ನಾವು ಮಾತನಾಡೋದರಲ್ಲಿ ಅರ್ಥ ಇಲ್ಲ. ನಾವು ಬೇಡವೆಂದರೂ ಬಿಡಲ್ಲ ಬೇಕೆಂದರೂ ಕೊಡಲ್ಲ ಎಂದು ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರು ತಿಳಿಸಿದರು.
ಸಚಿವರ ದೆಹಲಿ ಪ್ರವಾಸ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಾ ಸಚಿವರು ಕಾರ್ಯ ನಿಮಿತ್ಯ ದೆಹಲಿ ಹೋಗುತ್ತಾರೆ. ಪಕ್ಷದ ವರಿಷ್ಠರನ್ನ ಭೇಟಿ ಮಾಡಲು ಹೋಗುತ್ತಾರೆ, ಹೈಕಮಾಂಡ್ ಭೇಟಿ ಮಾಡಿ ಮಾತನೋಡೋದು ಇರುತ್ತದೆ. ಹೇಳೋದು ಕೇಳೋದು ಇರುತ್ತದೆಅಭಿಪ್ರಾಯ, ಸಲಹೆ ಪಡೆಯೋದು ಇರುತ್ತದೆ ಎಂದ ಎಂ ಬಿ ಪಾಟೀಲ್ ಅವರು ಹೇಳಿದರು.












Click it and Unblock the Notifications