Menstrual leave: ಹೆಣ್ಣು ಮಕ್ಕಳಿಗೆ ಮುಟ್ಟಿನ ರಜೆ: ಮಹತ್ವದ ಹೇಳಿಕೆ ಕೊಟ್ಟ ಸಚಿವ ಸಂತೋಷ್ ಲಾಡ್
ಧಾರವಾಡ, ಸೆಪ್ಟೆಂಬರ್ 23: ಹೆಣ್ಣು ಮಕ್ಕಳಿಗೆ ವರ್ಷದಲ್ಲಿ 6 ದಿನ ಮುಟ್ಟಿನ ರಜೆ ಕೊಡಬೇಕು ಎಂದು ಪ್ರಸ್ತಾವಣೆ ಬಂದಿದ್ದು, ಆದಷ್ಟು ಬೇಗ ಎಲ್ಲ ಇಲಾಖೆಗಳ ಅಭಿಪ್ರಾಯ ಸಂಗ್ರಹ ಮಾಡಲಾಗುವುದು ಎಂದು ಧಾರವಾಡ ಜಿಲ್ಲಾ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಧಾರವಾಡ ನಗರದಲ್ಲಿ ಭಾನುವರ ಮಾಧ್ಯಮಗಳ ಜೊತೆಗೆ ಅಚಿವ ಸಂತೋಷ್ ಲಾಡ್ ಅವರು ಮಾತನಾಡಿ, ಎಲ್ಲ ಇಂಡಸ್ಟ್ರಿಜ್ ಗಳ ನ್ನ ಕರೆಸಿ ಸಭೆ ಮಾಡಿ ಅಭಿಪ್ರಾಯ ತೆಗೆದುಕ್ಕೊಳ್ಳಬೇಕು. ರಾಜ್ಯದಲ್ಲಿ ಎಲ್ಲ ಹೆಣ್ಣು ಮುಟ್ಟಾದಾಗ ಆರು ದಿನ ರಜೆ ಕೊಡಬೇಕು ಎಂದು ಪ್ರಸ್ತಾಪ ವಿಚಾರ ತಮ್ಮ ಮುಂದಿದೆ ಎಂದ ಅವರು ರಜೆ ಕೊಡಬೇಕು ಎಂದು ಪ್ರಸ್ತಾಪ ಈಗಾಗಲೇ ಚರ್ಚಾ ಹಂತದಲ್ಲಿ ಇದೆ.

ಹೆಣ್ಣು ಮಕ್ಕಳಿಗೆ ವರ್ಷದಲ್ಲಿ ಆರು ದಿನ ರಜೆ ಕೊಡಬೇಕು ಎಂದು ಪ್ರಸ್ತಾವಣೆ ಬಂದಿದ್ದು, ಎಲ್ಲ ಇಲಾಖೆಗಳ ಅಭಿಪ್ರಾಯ ಬೇಕು ಎಲ್ಲ ಇಂಡಸ್ಟ್ರಿಜ್ ಗಳ ನ್ನ ಕರೆಸಿ ಸಭೆ ಮಾಡಿ ಅಭಿಪ್ರಾಯ ತೆಗೆದುಕ್ಕೊಳ್ಳಬೇಕು ಒಪ್ಪಿಗೆ ಪಡೆದುಕ್ಕೊಂಡು ಸರಕಾರದ ಹತ್ರ ಹೋಗುತ್ತೆವೆ, ಸರಕಾರ ಎನ್ ತಿರ್ಮಾನ ತಗೊತ್ತದೆ ನೋಡಬೇಕು ಎಂದರು.
ತಿರುಪತಿ ಲಡ್ಡುವಿನಲ್ಲಿ ಮಾಂಸ ಬೆರಸಿಕೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನಾನು ಇವತ್ತು ನೋಡಿದ್ದೆನೆ ಸತ್ಯಾಸತ್ತತೆ ಹೊರಗೆ ಬರಲಿ ನೋಡೋಣ ಎಂದು ಧಾರವಾಡ ಜಿಲ್ಲಾ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದರು.
ಇನ್ನೂ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಗೈರು ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನಾನು ಈ ಕುರಿತು ಯಾವುದನ್ನು ಮಾತನಾಡಲ್ಲ ವಿಸಿ ಅವರು ಸಿಎಂ ಅವರಿಗೆ ಭೇಟಿ ಆಗಿದ್ದಾರೋ ಗೊತ್ತಿಲ್ಲ,ಕೃಷಿ ಸಚಿವ ವಾರಣಾಸಿಗೆ ಹೋಗಿದ್ದಾರೆ. ಇವಾಗ ನಾವು ಕೃಷಿ ಮೇಳವನ್ನ ಉದ್ಘಾಟನೆ ಮಾಡಿದ್ದೆವೆ ಕೃಷಿ ವಿವಿ ವಿ ಸಿ ಅವರು ಇದರಲ್ಲಿ ರಿಸರ್ಚ ಮಾಡಿದ್ದಾರೆ ಅವರು ಇಗ್ನೋರೆಂಟ್ ಇದಾರೆ ಎಲ್ಲ ಇಲಾಖೆಗಳ ಅಂಕಿ ಸಂಖ್ಯೆ ಗಳ ಬಗ್ಗೆ ವಿಸಿ ಅವರ ಹತ್ರ ಇರಬೇಕು. ಕೃಷಿ ವಿವಿ ಎಷ್ಟು ಮೇಳೆಯಾಗಿದೆ ಎಷ್ಟು ಜನ ರೈತರು ಆತ್ಮಹತ್ಯೆ ಮಾಡಿಕ್ಕೊಂಡಿದ್ದಾರೆ, ಇದರ ಬಗ್ಗೆ ಮಾಹಿತಿ ಇರಬೇಕು. ನಾವು ವಿ ಸಿ ಅವರಿಗೆ ಬುದ್ದಿ ಹೇಳುವಷ್ಟು ದೊಡ್ಡವರಲ್ಲ ಎಂದರು.












Click it and Unblock the Notifications