ಕಲಬುರಗಿಯಲ್ಲಿ ಮರಳು ದಂಧೆ: ತಹಸೀಲ್ದಾರ್ ಕೊಲೆಗೆ ಯತ್ನ

Posted By:
Subscribe to Oneindia Kannada

ಕಲಬುರಗಿ, ಫ್ರೆಬ್ರವರಿ 13: ಇಲ್ಲಿನ ಅಫಜಲ್ ಪುರದಲ್ಲಿ ಮರಳು ಮಾಫಿಯಾ ಮಟ್ಟಹಾಕಲು ಮುಂದಾದ ತಹಸೀಲ್ದಾರ್ ಅನ್ನು ಟ್ರ್ಯಾಕ್ಟರ್ ಹರಿಸಿ ಕೊಲೆ ಮಾಡಲು ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಲಾಗಿದೆ.

ಕಲಬುರಗಿಯ ಅಫಜಲ್ ಪುರ ತಾಲ್ಲೂಕಿನ ತಹಸೀಲ್ದಾರ್ ಶಶಿಕಲಾ ಅವರ ಮೇಲೆ ಫೆಬ್ರವರಿ 11 ರಂದು ತೆಗಳ್ಳಿ ಗಾಮದ ಬಳಿ ಶರಣಪ್ಪ ಎನ್ನುವವರು ಟ್ಯಾಕ್ಟರ್ ಹರಿಸಿ ಕೊಲೆ ಮಾಡಲು ಯತ್ನಿಸಿದ್ದರು ಎನ್ನಲಾಗಿದೆ.[ಮೈಸೂರಲ್ಲಿ ಎಗ್ಗಿಲ್ಲದೆ ಸಾಗಿರುವ ಮರಳು ದಂಧೆ]

Sand smugglers attempt to kill the Tahasildar of Aphjalpur, kalburagi

ತಹಸೀಲ್ದಾರ್ ಶಶಿಕಲಾ ಅವರು ಅಫಜಲ್ ಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಹೆಚ್ಚಾಗಿದ್ದ ಮರಳು ದಂಧೆಯನ್ನು ಮಟ್ಟಹಾಕಲು ಕ್ರಮಕೈಗೊಂಡಿದ್ದರು. ಅಲ್ಲದೆ ಕೆಲವು ಮರಳುಗಾಡಿಗಳನ್ನು ತಡೆದು ಮಾಲೀಕರನ್ನು ಪೊಲೀಸ್ ಠಾಣೆ ಮೆಟ್ಟಿಲನ್ನು ಹತ್ತಿಸಿದ್ದರು. ಈ ಹಿನ್ನೆಲೆ ಕ್ರೋಧಗೊಂಡಿದ್ದ ಆರೋಪಿ ಶರಣಪ್ಪ ಶನಿವಾರ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ತಹಸೀಲ್ದಾರ್ ಶಶಿಕಲಾ ಅವರು ಅಫಜಲ್ ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಆರೋಪಿ ಶರಣಪ್ಪ ಅವರನ್ನು ಬಂಧಿಸಲಾಗಿದೆ. ಪೊಲೀಸರು ಆರೋಪಿಯನ್ನು ವಿಚಾರಣೆಗೊಳಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sand smugglers attempt to kill the Tahasildar of Aphjalpur, by running a tractor on him near Telagi of the Kalaburagi district. Incident came to light when Tahasildar gave a official complaint to police.
Please Wait while comments are loading...