ಲೋಕಾಯುಕ್ತದಲ್ಲಿ ಭ್ರಷ್ಟಾಚಾರ : ಭಾಸ್ಕರರಾವ್‌ಗೆ ಸಂಕಟ?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಫೆಬ್ರವರಿ 23 : ಕರ್ನಾಟಕ ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ನ್ಯಾ.ವೈ.ಭಾಸ್ಕರರಾವ್ ಅವರ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡಬೇಕು ಎಂದು ಕರ್ನಾಟಕ ಸರ್ಕಾರವನ್ನು ಕೋರಿದೆ.

ನ್ಯಾ.ವೈ.ಭಾಸ್ಕರರಾವ್ ಅವರು ಕರ್ನಾಟಕ ಲೋಕಾಯುಕ್ತರಾಗಿದ್ದಾಗಲೇ ಅವರ ಪುತ್ರ ಅಶ್ವಿನ್ ರಾವ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ವಿನ್ ರಾವ್ ಅವರನ್ನು ಎಸ್‌ಐಟಿ ಬಂಧಿಸಿತ್ತು. ನಂತರ ಭಾಸ್ಕರರಾವ್ ಅವರು ರಾಜೀನಾಮೆ ನೀಡಿದ್ದರು. [ಲೋಕಾಯುಕ್ತದಲ್ಲಿ ಭ್ರಷ್ಟಾಚಾರ : ಭಾಸ್ಕರರಾವ್ ಆರೋಪಿ?]

y bhaskar rao

ಭ್ರಷ್ಟಾಚಾರ ಪ್ರಕರಣಕ್ಕೆ ಭಾಸ್ಕರರಾವ್ ಅವರು ಸಹಕಾರ ನೀಡಿರುವ ಕುರಿತು ವಿಶೇಷ ತನಿಖಾ ದಳಕ್ಕೆ ಸಾಕ್ಷಿಗಳು ಸಿಕ್ಕಿವೆ. ಈ ಹಿನ್ನಲೆಯಲ್ಲಿ ಅವರ ವಿರುದ್ಧ ಮೊಕದ್ದಮೆ ದಾಖಲು ಮಾಡಲು ಅನುಮತಿ ನೀಡುವಂತೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.[ಲೋಕಾಯುಕ್ತದಲ್ಲಿ ಏನಿದು ಹಗರಣ?]

ಅಶ್ವಿನ್ ರಾವ್ ಅವರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸುವಾಗ ಎಸ್‌ಐಟಿ ಲೋಕಾಯುಕ್ತರ ಕಚೇರಿ ಮತ್ತು ನಿವಾಸದಿಂದ ಕರೆಗಳನ್ನು ಮಾಡಲಾಗಿತ್ತು ಎಂದು ಹೇಳಿತ್ತು. ಆದರೆ, ಭಾಸ್ಕರರಾವ್ ಅವರು ಈ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದ್ದರು. [ಲೋಕಾಯುಕ್ತ ಪದಚ್ಯುತಿ ಹೇಗೆ ನಡೆಯುತ್ತದೆ?]

ಭಾಸ್ಕರರಾವ್ ಅವರ ವಿರುದ್ಧ ತನಿಖೆಯನ್ನು ಮುಂದುವರೆಸಲು ಎಸ್ಐಟಿ ತೀರ್ಮಾನಿಸಿದೆ. ಆದ್ದರಿಂದ, ಮೊಕದ್ದಮೆ ದಾಖಲು ಮಾಡಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆ. ಸರ್ಕಾರ ಒಪ್ಪಿಗೆ ನೀಡಿದರೆ ತನಿಖೆ ಮುಂದುವರೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a bid to prosecute former Lokayukta, Justice Bhaskar Rao, the Special Investigating Team has sought sanction of the state government. The SIT is probing corruption charges against Ashwin Rao, the son of Justice Rao.
Please Wait while comments are loading...