Salma Murder Case: 4 ಮಕ್ಕಳ ತಾಯಿ ಸಲ್ಮಾ ಕೊಲೆ: ತ್ರಿಕೋನ ಅಕ್ರಮ ಸಂಬಂಧ ಬಯಲು!, ರೋಚಕ ಕಾರ್ಯಾಚರಣೆ ಹೇಗಿತ್ತು ?
Salma Murder Case: ಬೆಂಗಳೂರಿನಲ್ಲಿ ತ್ರಿಕೋನ ಅಕ್ರಮ ಸಂಬಂಧವೊಂದು ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ತಿಲಕ್ನಗರದಲ್ಲಿ ನಡೆದಿದ್ದ ಘಟನೆಯು ಬೆಂಗಳೂರಿಗರನ್ನು ಬೆಚ್ಚಿಬೀಳಿಸಿತ್ತು. ನಗರದಲ್ಲಿ ನಡೆದಿರುವ ಈ ಕ್ರೈಂನ ಬೆನ್ನತ್ತಿರುವ ಪೊಲೀಸರು ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಈ ಪ್ರಕರಣದಲ್ಲಿ ಪ್ರಾರಂಭದ ಹಂತದಲ್ಲಿ ಕಂಡು ಬಂದ ಅನುಮಾನಗಳು ನಿಜವಾಗಿದೆಯಾದರೂ 4 ಮಕ್ಕಳ ತಾಯಿ ಇಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ಕೇಸ್‌ನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ನಗರದಲ್ಲಿ ಈಚೆಗೆ ನಡೆದ 4 ಮಕ್ಕಳ ತಾಯಿಯ ಕೊಲೆ ಕೇಸ್ ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿತ್ತು. 35 ವರ್ಷದ ಮಹಿಳೆ ಸಲ್ಮಾ ಎನ್ನುವವರನ್ನು ಕೊಲೆ ಮಾಡಿ ಆಟೋದಲ್ಲಿ ಮೃತದೇಹವನ್ನು ಇರಿಸಲಾಗಿತ್ತು. ಇದೀಗ ಈ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಕೆಲವೊಂದು ಮಹತ್ವದ ವಿಷಯಗಳು ಬೆಳಕಿಗೆ ಬಂದಿವೆ. ಮೃತ ಸಲ್ಮಾ ಪತಿಯು ಈಚೆಗೆ ಮೃತಪಟ್ಟಿದ್ದರು. ಪತಿಯ ಸಾವಿನ ನಂತರ ಸಲ್ಮಾ ಸುಬ್ರಹ್ಮಣಿ ಎನ್ನುವರೊಂದಿಗೆ ಅಕ್ರಮ ಸಂಬಂಧದಲ್ಲಿದ್ದರು. ಈ ವ್ಯಕ್ತಿಯೇ ಕೊಲೆ ಮಾಡಿರಬಹುದು ಎಂದು ಮೊದಲು ಪೊಲೀಸರು ಅಂದಾಜಿಸಿ, ಆತನ ಬಂಧನಕ್ಕೆ ಬಲೆ ಬೀಸಿದ್ದರು.

ಇದೀಗ ಸಲ್ಮಾ ಪ್ರಕರಣದಲ್ಲಿ ಕೇವಲ ಸುಬ್ರಹ್ಮಣಿ ಮಾತ್ರವಲ್ಲ ಮತ್ತೊಬ್ಬ ವ್ಯಕ್ತಿಯೂ ಶಾಮೀಲಾಗಿದ್ದಾನೆ ಎನ್ನುವ ವಿಷಯ ಬಹಿರಂಗವಾಗಿದೆ. ಅಲ್ಲದೇ ಸಲ್ಮಾ ಆತನೊಂದಿಗೂ ಅಕ್ರಮ ಸಂಬಂಧ ಹೊಂದಿದ್ದರು ಎಂದು ಹೇಳಲಾಗುತ್ತಿದೆ. ಈ ಕೊಲೆ ಪ್ರಕರಣದಲ್ಲಿ ಸೆಂಥಿಲ್ ಎನ್ನುವ ವ್ಯಕ್ತಿಯ ಹೆಸರು ಸಹ ಕೇಳಿ ಬಂದಿದೆ. ಈ ಮರ್ಡರ್ ಕೇಸ್‌ಗೆ ಸಂಬಂಧಿಸಿದಂತೆ ಬೆಂಗಳೂರಿನ ತಿಲಕ್ನಗರ ಪೊಲೀಸರು ಇನ್ನಿಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ನಡೆಯುತ್ತಿದೆ.
ಏನದು ಸಲ್ಮಾ ಕೊಲೆ ಪ್ರಕರಣ ?
ಬೆಂಗಳೂರಿನ ತಿಲಕ ನಗರದ ರಸ್ತೆಯೊಂದರಲ್ಲಿ ಆಟೋವೊಂದರಲ್ಲಿ ಮಹಿಳೆಯ ಶವ ಪತ್ತೆ ಆಗಿತ್ತು. ಇನ್ನು ಪ್ರಕರಣ ದಾಖಲಾಗುವ ಮುನ್ನವೇ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳ ಬಂಧನವಾಗಿದ್ದೇ ರೋಚಕವಾಗಿದೆ. ಬೆಂಗಳೂರು ಪೊಲೀಸರು, ಕೊಲೆ ಮಾಡಿ ತುಮಕೂರಿಗೆ ಎಸ್ಕೇಪ್ ಆಗಿದ್ದ ಆರೋಪಿಗಳ ಬೆನ್ನತ್ತಿದ್ದರು. ಕೊಲೆ ಮಾಡಿ ಕೆಟ್ಟು ನಿಂತಿದ್ದ ಆಟೋವೊಂದರಲ್ಲಿ ಶವ ಇರಿಸಿ ಆರೋಪಿಗಳು ಪರಾರಿಯಾಗಿದ್ದರು. ಕೊಲೆಯಾದ ಒಂದು ದಿನದ ನಂತರವಷ್ಟೇ ಮಹಿಳೆಯ ಶವ ಪತ್ತೆಯಾಗಿತ್ತು.
ಈ ವೇಳೆಗಾಗಲೇ ಆರೋಪಿಗಳು ಬೆಂಗಳೂರು ಗಡಿ ದಾಟಿ ತುಮಕೂರಿಗೆ ತೆರಳಿದ್ದರು. ಅಲ್ಲಿಂದ ಪುದುಚೇರಿಗೆ ಹೋಗುವ ಪ್ಲಾನ್ ಅನ್ನು ಆರೋಪಿಗಳು ಮಾಡಿಕೊಂಡಿದ್ದರು. ಕೊಲೆ ಮಾಡಿದ ದಿನ ಆರೋಪಿಗಳು ಮೆಜೆಸ್ಟಿಕ್ ವರೆಗೂ ನಡೆದುಕೊಂಡೆ ಹೋಗಿದ್ದರು. ಮೆಜೆಸ್ಟಿಕ್ ನಿಂದ ತುಮಕೂರಿಗೆ ಬಸ್ಸಿನಲ್ಲಿ ತೆರಳಿದ್ದಾರೆ.
ಈ ವೇಳೆ ಆರೋಪಿಗಳ ಮೊಬೈಲ್ ಲೊಕೇಶನ್ ಪರಿಶೀಲನೆ ಮಾಡಿದ್ದ ಪೊಲೀಸರಿಗೆ ಆರೋಪಿಗಳ ಲೊಕೇಶನ್ ತುಮಕೂರಿನಲ್ಲಿ ಪತ್ತೆಯಾಗಿತ್ತು.
ಕೂಡಲೇ ತಮ್ಮ ಜೊತೆ ಈ ಹಿಂದೆ ಕೆಲಸ ಮಾಡಿದ್ದ ತುಮಕೂರಿನ ಪೊಲೀಸರಿಗೆ ಡಿಸಿಪಿ ಸಾರಾ ಫಾತಿಮಾ ಅವರು ಪೋನ್ ಮಾಡಿದ್ದರು ಎನ್ನಲಾಗಿದ್ದು, ಕೂಡಲೇ ಇಬ್ಬರು ಆರೋಪಿಗಳನ್ನು ತುಮಕೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದು ಆರೋಪಿಗಳ ಬಟ್ಟೆ ಮತ್ತು ಉಗುರು ಪರಿಶೀಲನೆ ಮಾಡಲಾಗಿದ್ದು ಈ ವೇಳೆ ಆರೋಪಿಗಳ ಬಟ್ಟೆ ಹಾಗೂ ಉಗುರುಗಳಲ್ಲಿ ರಕ್ತದ ಕಲೆ ಇರುವುದು ಖಚಿತವಾಗಿದೆ.
ವಿಚಾರಣೆ ನಡೆಸಿದ ಸಂದರ್ಭದಲ್ಲಿ ಸುಬ್ರಹ್ಮಣಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಮತ್ತೊಬ್ಬ ಆರೋಪಿ ಸೆಂಥಿಲ್ ಕೊಲೆ ನಂತರ ಸುಬ್ರಹ್ಮಣಿ ಎಸ್ಕೇಪ್ ಆಗಲು ಸಹಾಯ ಮಾಡಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ ಕೊಲೆಯಾದ ಸಲ್ಮಾ ಜೊತೆ ಸುಬ್ರಹ್ಮಣಿಗೆ ಅನೈತಿಕ ಸಂಬಂಧ ಇತ್ತು ಎನ್ನುವುದು ಸಹ ಇದೇ ವೇಳೆ ಬೆಳಕಿಗೆ ಬಂದಿದೆ.
ಮೂವರು ಸೇರಿ ಕುಡಿದಿದ್ದರು: ಇನ್ನು ಕೊಲೆಯಾಗಿರುವ ಮಹಿಳೆ ಸಲ್ಮಾ ಹಾಗೂ ಸುಬ್ರಹ್ಮಣಿ ಮತ್ತು ಸೆಂಥಿಲ್ ಕೊಲೆಯಾದ ದಿನ ಮೂವರು ಒಟ್ಟಿಗೆ ಕುಡಿದು ಒಂದೇ ಮನೆಯಲ್ಲಿ ಇದ್ದರು. ಈ ವೇಳೆ ಸಲ್ಮಾ ಜೊತೆ ಸೆಂಥಿಲ್ ಸಲುಗೆಯಿಂದ ಇದ್ದಿದ್ದನ್ನು ನೋಡಿ ಸುಬ್ರಹ್ಮಣಿಗೆ ಕೋಪ ಬಂದಿತ್ತು. ಈ ವೇಳೆ ಕೋಪಗೊಂಡು ರಾಗಿ ಮುದ್ದೆ ತಿರುಗಿಸುವ ಹಿಟ್ಟಿನ ಕೋಲಿನಲ್ಲಿ ತಲೆಗೆ ಹಲ್ಲೆ ಮಾಡಿದ್ದು, ಈ ವೇಳೆ ಸಲ್ಮಾ ಸ್ಥಳದಲ್ಲೇ ಮೃತಪಟ್ಟಿದ್ದಳು ಎಂದು ಹೇಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.












Click it and Unblock the Notifications