ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತ್ಯ ಸಮ್ಮೇಳನದ ಮೆರವಣಿಗೆಗೆ ಚಾಲನೆ ನೀಡಿದ ತನ್ವೀರ್ ಸೇಠ್

ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೆರವಣಿಗೆಗೆ ಅದ್ದೂರಿ ಚಾಲನೆ ನೀಡಿದರು. ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಉಪಸ್ಥಿತಿರಿದ್ದರು.

By Prithviraj
|
Google Oneindia Kannada News

ರಾಯಚೂರು, ಡಿಸೆಂಬರ್, 2: ರಾಯಚೂರಿನಲ್ಲಿ ನಡೆಯುತ್ತಿರುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ ನಗಾರಿ ಬಾರಿಸುವ ಮೂಲಕ ಅಧಿಕೃತ ಚಾಲನೆ ನೀಡಿದರು. ಕಸಾಪ ಅಧ್ಯಕ್ಷ ಮನುಬಳಿಗಾರ ಮತ್ತು ಇತರೆ ಗಣ್ಯರು ಹಾಜರಿದ್ದರು.

ಸಮ್ಮೇಳನದ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪ ನಾಡದೇವಿ ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಬಳಿಕ ಕುದುರೆ ಗಾಡಿಯ ಸಾರೋಟು ಏರಿದರು. [ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ಕನ್ನಡ ಹಬ್ಬ ಆರಂಭ]

33 ಜಾನಪದ ಕಲಾ ತಂಡಗಳು, 3550 ಅಡಿ ಉದ್ದದ ಕನ್ನಡ ಧ್ವಜ ಹೊತ್ತು ಸಾಗಿ 7 ಸಾವಿರಕ್ಕೂ ಅಧಿ ವಿದ್ಯಾರ್ಥಿಗಳು, ಮೆರವಣಿಗೆಯ ಹಿಂದೆ ಮುಂದೆ ಕನ್ನಡ ಧ್ವಜ ಹಿಡಿದ ಕನ್ನಡ ಕಾವಲುಗಾರರು, ಭತ್ತದ ಪೈರು ಹಿಡಿದವರು, ಕುಂಭ ಹೊತ್ತವರು ಮೆರವಣಿಗೆಗೆ ಮೆರುಗು ನೀಡಿದರು.[82ನೇ 'ರಾಯಚೂರು' ಕನ್ನಡ ಸಾಹಿತ್ಯ ಸಮ್ಮೇಳನದ ಚಿತ್ರಸಂಪುಟ]

ಕನ್ನಡ ಜಾತ್ರೆ ಮೆರವಣಿಗೆ ಆರಂಭ

ಕನ್ನಡ ಜಾತ್ರೆ ಮೆರವಣಿಗೆ ಆರಂಭ

ಕರ್ನಾಟಕ ಸಂಘದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭಗೊಂಡಿತು. ಹೈದ್ರಾಬಾದ್ ಮುಲದ ಮೊಹಮ್ಮದ್ ಅಸ್ಲಾಂ ಮಾಲೀಕತ್ವದ ಬಾಬಾ ನವಾಬ್ ಮತ್ತು ಫನ್ನಾ ಕುದುರೆ ಸಾರೋಟಿನಲ್ಲಿ ರಾಮಚಂದ್ರಪ್ಪ ಅವರು ಜನರತ್ತ ಕೈ ಬೀಸುತ್ತಾ ಸಮ್ಮೇಳಾನ ಸ್ಥಳಕ್ಕೆ ಹೊರಟರು.

ಮುಖ್ಯ ವೇದಿಕೆಗೆ ಸಾಹಿತಿ ಶಾಂತರಸರ ಹೆಸರು ನಾಮಕರಣ

ಮುಖ್ಯ ವೇದಿಕೆಗೆ ಸಾಹಿತಿ ಶಾಂತರಸರ ಹೆಸರು ನಾಮಕರಣ

ಕನ್ನಡ ಸಾಹಿತ್ಯ ಸಮ್ಮೇಳನ್ನೆ ಚಾಲನೆ ನೀಡುವ ಮುಖ್ಯವೇದಿಕೆಗೆ ಸಾಹಿತಿ ಶಾಂತರಸರ ಹೆಸರನ್ನು ನಾಮಕರಣ ಮಾಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ.

ಧ್ವಜಾರೋಹಣ ನೆರವೇರಿಸಿದ ತನ್ವೀರ್ ಸೇಠ್

ಧ್ವಜಾರೋಹಣ ನೆರವೇರಿಸಿದ ತನ್ವೀರ್ ಸೇಠ್

ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ನಡೆಯುತ್ತಿರು ಸಮ್ಮೇಳನದ ಆರಂಭಕ್ಕೂ ಮುನ್ನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ರಾಷ್ಟ್ರ ಧ್ವಜಾರೋಹಣ, ನೆರವೇರಿಸಿದರು. ಡಾ.ಬಸವನ ಪ್ರಭು ಪಾಟೀಲ್, ಪರಿಷತ್ ಧ್ವಜವನ್ನು ಡಾ.ಮನುಬಳಿಗಾರ್ ನೆರವೇರಿಸಿದರು.

ಮುಖ್ಯವೇದಿಕೆಯಲ್ಲಿ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳು

ಮುಖ್ಯವೇದಿಕೆಯಲ್ಲಿ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳು

ಮುಖ್ಯ ವೇದಿಕೆಯಲ್ಲಿ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಕ್ಕೆ ದೀಪಗಳ ಅಲಂಕಾರ, ವೇದಿಕೆ ಸುತ್ತಲೂ ನಾಡಿನ ಸಾಹಿತಿಗಳ ಪರಿಚಯದ ಬ್ಯಾನರಗಳ ಸಾಲುಗಳನ್ನು ರಾರಾಜಿಸುವಂತೆ ಮಾಡಲಾಗಿದೆ.

ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಸಿದ್ದರಾಮಯ್ಯ

ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಯಚೂರಿನಲ್ಲಿ ನಡೆಯುತ್ತಿರುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಚಿವ ತನ್ವೀರ್ ಸೇಠ್ ಹಾಗೂ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

English summary
Minister for Primary and secondary education, Tanveer sait inaugurated the 82nd Sahitya sammelana Meravanige on Friday, Sahitya sammelana president Baraguru Ramachndrappa, Kannada sahitya parishat president Manubaligar were present.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X