ಲಿಂಗಾಯತರಲ್ಲಿ ಪಂಚಮಸಾಲಿ ಬಳಿಕ ಮತ್ತೊಂದು ಪ್ರಮುಖ ಪಂಗಡ ಮುನ್ನೆಲೆಗೆ: ಯಾವುದು ತಿಳಿಯಿರಿ- ಅಂಕಿಅಂಶ, ವಿಶ್ಲೇಷಣೆ
ರಾಜಕೀಯದಲ್ಲಿ ಪ್ರಚಾರದಲ್ಲಿದ್ದ ಸಮುದಾಯ ಪೈಕಿ ಪಂಚಮಸಾಲಿ ವೀರಶೈವ ಲಿಂಗಾಯತ ಸಮುದಾಯವು ಒಂದು. ಇದರ ಉಪಪಂಗಡ ಸಾದರ ಲಿಂಗಾಯತ ಮುಂಬರಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಹೆಚ್ಚು ಪ್ರಾಮುಖ್ಯತೆ ಪಡೆಯತ್ತಿದೆ.
ಬೆಂಗಳೂರು, ಮಾರ್ಚ್ 08: ರಾಜಕೀಯವಾಗಿ ಇಲ್ಲವೇ ಮತಗಳಿಕೆ ವಿಚಾರದಲ್ಲಿ ಪ್ರಚಾರದಲ್ಲಿದ್ದ ಸಮುದಾಯ ಪೈಕಿ ಪಂಚಮಸಾಲಿ ವೀರಶೈವ ಲಿಂಗಾಯತ ಸಮುದಾಯವು ಒಂದು. ಈ ಸಮುದಾಯದ ಉಪಪಂಗಡ ಸಾದರ ಲಿಂಗಾಯತ ಮುಂಬರಲಿರುವ ವಿಧಾನಸಭಾ ಚುನಾವಣೆ 2023ರಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯತ್ತಿದೆ.
ಜಾತಿ ರಾಜಕಾರಣ ಎಲ್ಲೆಡೆ ಸಕ್ರಿಯವಾಗಿದೆ. ಚುನಾವಣೆ ವೇಳೆ ಅದರ ಕಾವು ಇನ್ನು ಹೆಚ್ಚಿರುತ್ತದೆ. ಕರ್ನಾಟಕದ 6.5 ಕೋಟಿ ಜನಸಂಖ್ಯೆಯಲ್ಲಿ ಸುಮಾರು 10% ರಷ್ಟಿರುವ ಲಿಂಗಾಯತರಲ್ಲಿ ಸಣ್ಣ ಸಂಖ್ಯೆಯಲ್ಲಿ ಅಂದರೆ ಅಂದಾಜು ಶೇಕಡಾ 3ರಷ್ಟು ಸಾದರ ಲಿಂಗಾಯತರಿದ್ದಾರೆ. ಅವರೆಲ್ಲ ಮಧ್ಯ ಕರ್ನಾಟಕ ಭಾಗದ ದಾವಣಗೆರೆ, ಶಿವಮೊಗ್ಗ, ಹಾವೇರಿ ಜಿಲ್ಲೆಗಳು ಇನ್ನೂ ಕೆಲವರು ಚಿತ್ರದುರ್ಗ, ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 53 ಶಾಸಕರು ಲಿಂಗಾಯತರೇ ಆಗಿದ್ದಾರೆ.

ಈ ಸಾದರ ಲಿಂಗಾಯತ ಸಮುದಾಯದವರು ಆರ್ಥಿಕವಾಗಿ ಮುಂದಿದ್ದಾರೆ. ಅವರು ವ್ಯಾಪಾರ ವಹಿವಾಟಿನಲ್ಲಿ ಸಕ್ರಿಯರಾಗಿದ್ದಾರೆ. ಅದರಲ್ಲೂ ಹತ್ತಿ ಗಿರಣಿಗಳು ಮತ್ತು ಜವಳಿ ವ್ಯಾಪಾರ ಮಾಡುತ್ತಿದ್ದಾರೆ. ಈ ಉಪಪಂಗಡಕ್ಕೆ ಮುಂಬರುವ ಚುನಾವಣೆಯಲ್ಲಿ ಚಿತ್ರದುರ್ಗದ ಬೃಹನ್ಮಠವು ಬೆಂಬಲ ನೀಡಲಿದೆ ಎಂದು ಆ ಸಮುದಾಯದ ಮುಖಂಡರು ಹೇಳಿದ್ದಾರೆ. ಕಾರಣ ಕರ್ನಾಟಕದ ರಾಜಕಾರಣದಲ್ಲಿ ಅಸ್ತಿತ್ವ ಹೊಂದಿರುವ ಪ್ರಮುಖ ಜನಾಂಗದಲ್ಲಿ ಸಾದರ ಸಮುದಾಯವು ಹೌದು. ಹೀಗಾಗಿಯೇ ಲಿಂಗಾಯತ ನಾಯಕರು ಚುನಾಯಿತರಾಗುವಲ್ಲಿ ಅವರ ಪಾತ್ರವು ಇದೆ. ಇದಕ್ಕೆ ಸಮುದಾಯದ ಉದ್ಯಮಶೀಲ ಮನೋಭಾವ ಮತ್ತು ಆರ್ಥಿಕ ಶಕ್ತಿಯೇ ಕಾರಣ ಎಂದು ಅಖಿಲ ಭಾರತ ವೀರಶೈವಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಬಿ.ಎಸ್.ಸಚ್ಚಿದಾನಂದಮೂರ್ತಿ ವಿಶ್ಲೇಷಿಸಿದ್ದಾರೆ.
ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಕೃಷಿ ಸಚಿವ ಬಿ.ಸಿ.ಪಾಟೀಲ್, ಬಿಜೆಪಿಯ ಹಿರಿಯ ಶಾಸಕ ಎಸ್.ಎ.ರವೀಂದ್ರನಾಥ್ ಅಷ್ಟೇ ಅಲ್ಲದೇ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮುದಾಯದ ಮುಂಚೂಣಿ ನಾಯಕರಾಗಿ, ಸಮುದಾಯದ ಮುಖವಾಗಿ ಆಡಳಿತ ನಡೆಸಿದವರೆ ಆಗಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸುತ್ತಿರುವುದರಿಂದ ಸಮುದಾಯಕ್ಕೆ ರಾಜಕೀಯ ಪ್ರಾಮುಖ್ಯತೆ ದೊರೆತಿದೆ. ಸಾದರ ಲಿಂಗಾಯತ ಉಪಪಂಗಡದ ಜನರಲ್ಲಿ ವ್ಯಾಪಾರದ ಜೊತೆಗೆ ಕೃಷಿ ಕ್ಷೇತ್ರದಲ್ಲಿ ಹೆಚ್ಚು ಮಂದಿ ತೊಡಗಿದ್ದಾರೆ. ಅವರಲ್ಲೂ ಬಡವರು ಇದ್ದಾರೆ ಎಂದು ಸಮೀಕ್ಷೆಯೊಂದು ಹೇಳುತ್ತದೆ.
ಇನ್ನೂ ಲಂಚ ಪ್ರಕರಣದಲ್ಲಿ ಲೋಕಾಯುಕ್ತರಿಂದ ಬಂಧಿತರಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಸ್ಖಪ್ಪ ಕೂಡ ಇದೇ ಸಮುದಾಯದವರು. ಲೋಕಾಯುಕ್ತ ದಾಳಿ ರಾಜಕೀಯ ವಲಯದಲ್ಲಿ ಸಂಚಲನೆ ಮೂಡಿಸಿದ್ದು ಸುಳ್ಳಲ್ಲ. ಇದು ರಾಜಕೀಯ ಪಿತೂರಿಯ ಊಹಾಪೋಹವನ್ನು ಪ್ರಚೋದಿಸಲು ಕಾರಣವಾಗಿದೆ. ಬೊಮ್ಮಾಯಿ ಅವರು ಪ್ರತಿನಿಧಿಸುವ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಿಂದ ಸೋಲನುಭವಿಸಲು ಪ್ರಯತ್ನಗಳು ನಡೆಯುತ್ತಿವೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬಂದಿವೆ.

ಚುನಾವಣೆ: ಕ್ಷೇತ್ರ ಬದಲಿಸುವರೇ ಸಿಎಂ ಬೊಮ್ಮಾಯಿ?
ಬೊಮ್ಮಾಯಿಯವರ ಕ್ಷೇತ್ರದಲ್ಲಿ ಪಂಚಮಸಾಲಿಗಳು ಬಹುಸಂಖ್ಯಾತರಾದರೆ, ಮುಸ್ಲಿಮರು ಸಹ ಮತದಾರರ ಪಟ್ಟಿಯಲ್ಲಿ ಗಮನಾರ್ಹ ಸ್ಥಾನ ಪಡೆದಿದ್ದಾರೆ. ರಾಜಕೀಯ ಕುತಂತ್ರಗಳ ಬಗ್ಗೆ ಎಚ್ಚರದಿಂದಿರುವ ಬೊಮ್ಮಾಯಿ ಅವರು ಮಾಡಾಳ್ ವಿರೂಪಾಕ್ಷಪ್ಪ ಅವರು ಪ್ರತಿನಿಧಿಸುವ ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರ ಅಥವಾ ದಾವಣಗೆರೆ ಉತ್ತರಕ್ಕೆ (ರವೀಂದ್ರನಾಥ್ ಪ್ರತಿನಿಧಿಸುತ್ತಿದ್ದಾರೆ) ಎರಡಕ್ಕೂ ಸ್ಥಳಾಂತರಗೊಳ್ಳಲು ಯೋಚಿಸುತ್ತಿದ್ದಾರೆ ಎಂದು ವರದಿ ಆಗಿದೆ.
ಆದರೆ ಸಮುದಾಯದ ಮುಖಂಡರು ಸಿಎಂ ಕ್ಷೇತ್ರದ ಮೇಲೆ ಹುಟ್ಟಿಕೊಂಡ ಈ ವದಂತಿಗಳನ್ನು ಸ್ವೀಕರಿಸದೇ ಅಲ್ಲಗಳೆದಿದ್ದಾರೆ. ವಿರೂಪಾಕ್ಷಪ್ಪ ಅವರನ್ನು ರಾಜಕೀಯ ಕಾರಣಕ್ಕೆ ಗುರಿ ಮಾಡಲಾಗಿದೆ ಎಂದು ಹೇಳುವುದು ತಪ್ಪು. ಅವರ ಪುತ್ರ ಲಂಚ ಪಡೆದು ಸಿಕ್ಕಿಬಿದ್ದಿದ್ದು ನಿಜ. ರಾಜಕೀಯ ಪ್ರಾಬಲ್ಯಕ್ಕಾಗಿ ಸಮುದಾಯಗಳು ಕಿತ್ತಾಡುವುದು ಸಹಜ ಎಂದು ಲಿಂಗಾಯತ ಸಮುದಾಯದ ಮುಖಂಡರು ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications