Property Good News: ಗ್ರಾಮೀಣ ಭಾಗದ ಆಸ್ತಿದಾರರಿಗೆ ಬಂಪರ್ ಜಾಕ್‌ಪಾಟ್ & ಗುಡ್‌ನ್ಯೂಸ್ ಕೊಟ್ಟ ಸರ್ಕಾರ!
Property Good News: ಕರ್ನಾಟಕ ಸರ್ಕಾರವು ಗ್ರಾಮೀಣ ಭಾಗದ ಆಸ್ತಿದಾರರಿಗೆ ಬಂಪರ್ ಗುಡ್‌ನ್ಯೂಸ್ ಕೊಟ್ಟಿದೆ. ಈಗಾಗಲೇ ಇ ಖಾತಾ, ಇ ಸ್ವತ್ತು ಹಾಗೂ ಬಿ ಖಾತಾ ಹಾಗೂ ಎ ಖಾತಾ ವಿಚಾರದಲ್ಲಿ ಆಸ್ತಿದಾರರಿಗೆ ಕರ್ನಾಟಕ ಸರ್ಕಾರವು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದು, ಇದೀಗ ಗ್ರಾಮೀಣ ಭಾಗದ ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್ ಕೊಡಲಾಗಿದೆ. ಏನಿದು ಸರ್ಕಾರದ ಹೊಸ ಅಪ್ಡೇಟ್ಸ್ ಹಾಗೂ ಗ್ರಾಮೀಣ ಭಾಗದ ಜನರಿಗೆ ಸರ್ಕಾರದ ಹೊಸ ಅಪ್ಡೇಟ್ಸ್‌ನಿಂದ ಹೇಗೆಲ್ಲಾ ಸಹಕಾರಿ ಆಗಲಿದೆ ಎನ್ನುವ ವಿವರ ನೋಡೋಣ.
ಹಳ್ಳಿಗಳ ಅಭಿವೃದ್ಧಿಯಲ್ಲಿ ದೇಶದ ಅಭಿವೃದ್ಧಿ ಅಡಗಿದೆ. ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರಿಗೂ ಉತ್ತಮ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಮುಖ್ಯ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಗ್ರಾಮೀಣ ಜನರ ಆಸ್ತಿಗಳ ಭದ್ರತೆಗಾಗಿ ಇ-ಸ್ವತ್ತು ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಗ್ರಾಮೀಣ ಜನರು ಆಸ್ತಿಗಳ ಇ-ಖಾತಾ ಪಡೆಯುವುದು ಈಗ ಮತ್ತಷ್ಟು ಸುಲಭವಾಗಿದೆ. https://eswathu.karnataka.gov.in ಪೋರ್ಟಲ್‌ಗೆ ಲಾಗಿನ್ ಆಗಿ ನಿಮ್ಮ ಆಸ್ತಿ ವಿವರಗಳನ್ನು ತುಂಬಿಸಿ, ಅರ್ಜಿ ಸಲ್ಲಿಸಿ ಇ-ಖಾತಾ ಪಡೆಯಬಹುದು. ಅದಕ್ಕಾಗಿ ನಮ್ಮ ಇಲಾಖೆಯಿಂದ ಇ-ಸ್ವತ್ತು ಸಹಾಯವಾಣಿ 9483476000 ಅನ್ನು ಪ್ರಾರಂಭಿಸಿದ್ದು ನಿಮ್ಮ ಯಾವುದೇ ಗೊಂದಲಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದಿದ್ದಾರೆ.
ಮುಂದುವರಿದು ಗ್ರಾಮೀಣ ಭಾಗದ ಜನರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸುಲಭವಾಗಿ ಮತ್ತು ಡಿಜಿಟಲ್ ರೂಪದ ಇ - ಖಾತಾ ಪಡೆಯಲು ಇಲಾಖೆಯು ಅವಕಾಶ ಕಲ್ಪಿಸಿದೆ. ಇದನ್ನು ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸುತ್ತೇವೆ ಎಂದು ಹೇಳಿದ್ದಾರೆ.
ಡಿಜಿಟಲ್ ರೂಪದ ಇ - ಖಾತಾ
ಇನ್ನು ಸರ್ಕಾರವು ಡಿಜಿಟಲ್ ರೂಪದ ಇ - ಖಾತಾ ಪರಿಚಯಿಸಿದೆ. ಈಚೆಗೆ ಡಿಜಿಟಲ್ ಇ ಸ್ಟ್ಯಾಂಪ್ ಸಹ ಪರಿಚಯಿಸಲಾಗಿದೆ. ಇನ್ನು ಇ - ಸ್ವತ್ತು ಪಡೆಯಲು ಇರುವ ಎಲ್ಲಾ ಆಡಳಿತಾತ್ಮಕ, ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ನೀಡಲು ಇ - ಸ್ವತ್ತು ಸಹಾಯವಾಣಿ 9483476000 ಸ್ಥಾಪಿಸಲಾಗಿದೆ. ಗ್ರಾಮೀಣ ಭಾಗದ ಜನರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸುಲಭವಾಗಿ ಮತ್ತು ಡಿಜಿಟಲ್ ರೂಪದ ಇ - ಖಾತಾ ಪಡೆಯಲು ಇಲಾಖೆಯು ಅವಕಾಶ ಕಲ್ಪಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.












Click it and Unblock the Notifications