ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5,8ನೇ ತರಗತಿ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ಅನಗತ್ಯ:ಆರ್‌ಟಿಇ ಕಾರ್ಯಕರ್ತರು

|
Google Oneindia Kannada News

ಬೆಂಗಳೂರು, ಡಿಸೆಂಬರ್ 27: ಕರ್ನಾಟಕದಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಶಿಕ್ಷಣ ಇಲಾಖೆ ನಿರ್ಧಾರವನ್ನು ಆರ್‌ಟಿಇ ಕಾರ್ಯಕರ್ತರು ಖಂಡಿಸಿದ್ದಾರೆ.

5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ಸಂಬಂಧ ಕೆಲವು ದಿನಗಳ ಹಿಂದೆ ದುಂಡು ಮೇಜಿನ ಸಭೆ ನಡೆದಿದೆ. ಅಲ್ಲಿ ಶಿಕ್ಷಣತಜ್ಞ ನಿರಂಜನಾರಾಧ್ಯ ಪಿ.ವಿ. ಮತ್ತು ಕುಮಾರಸ್ವಾಮಿ, ಕರ್ನಾಟಕ ಶಾಲಾ ಕಾಲೇಜು ಪಾಲಕರ ಸಂಘದ ಅಧ್ಯಕ್ಷ ಬಿ.ಎಸ್.ಯೋಗಾನಂದ, ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ನಿರ್ವಹಣಾ ಸಂಘದ ಅಧ್ಯಕ್ಷ ಲೋಕೇಶ್ ಚರ್ಚಿಸಿದ ಬಳಿಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಅದರಲ್ಲಿ ಐದು ಮತ್ತು ಎಂಟನೇ ತರಗತಿಗಳಿಗೆ ನಿರಂತರ ಮತ್ತು ಸಮಗ್ರ ಮೌಲ್ಯಮಾಪನ ನಡೆಸಬೇಕೇ?. ಅವೈಜ್ಞಾನಿಕ ಪಬ್ಲಿಕ್ ಪರೀಕ್ಷೆ ಬೇಡ. ಅವರು ಕೇಂದ್ರೀಕೃತ ಪರೀಕ್ಷೆಯಲ್ಲಿ ವೈಫಲ್ಯವು ವಿದ್ಯಾರ್ಥಿಗಳನ್ನು ದುರ್ಬಲಗೊಳಿಸಬಹುದು. ಮಕ್ಕಳು ಶಾಲೆ ಬಿಡಲು ಈ ನಿರ್ಧಾರ ಕಾರಣವಾಗಬಹುದು ಎಂದು ನಿರಂಜನಾರಾಧ್ಯ ಪಿ.ವಿ.ಅವರು ತಿಳಿಸಿದರು.

RTE activists condemn decision of public examination for classes 5 and 8 students

ಪಬ್ಲಿಕ್ ಪರೀಕ್ಷೆ ಅಲ್ಲ ಮಕ್ಕಳ ಕಲಿಕೆಯ ಮೌಲ್ಯಮಾಪನ ಮಾಡುವುದಷ್ಟೇ ಎಂದು ಹೇಳಿದ್ದಾರೆ. ಸ್ವತಃ ಸಚಿವರೇ ಮೌಲ್ಯಮಾಪನ ಬಗ್ಗೆ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅವೈಜ್ಞಾನಿಕ ನಿರ್ಧಾರ ಹಾಗೂ ಮಕ್ಕಳ ವಿರೋಧಿ ತೀರ್ಮಾನ ಸಮರ್ಥಿಸಿಕೊಳ್ಳುವ ಭರದಲ್ಲಿ ಶಿಕ್ಷಣ ಸಚಿವರೇ ಈ ರೀತಿ ತಪ್ಪು ಸಂದೇಶ ರವಾನಿಸಿದ್ದಾರೆ ಎನ್ನುವ ಮೂಲಕ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ನಿರ್ಧಾರವನ್ನು ಅವರು ಆಕ್ಷೇಪಿಸಿದರು.

ಮೊಟ್ಟೆ ವಿತರಣೆ 10ನೇ ತರಗತಿ ಮಕ್ಕಳಿಗೆ ವಿಸ್ತರಿಸಿ

ಮಕ್ಕಳ ಪೌಷ್ಠಿಕಾಂಶ ಕುರಿತು ಗಮನ ಕೇಂದ್ರೀಕರಿಸಿರುವ ಸರ್ಕಾರ 8ನೇ ತರಗತಿಗೆ ಸೀಮಿತಗೊಳಿಸುವ ಬದಲು 10ನೇ ತರಗತಿಯವರೆಗಿನ ಮಕ್ಕಳಿಗೂ ಊಟದಲ್ಲಿ ಮೊಟ್ಟೆಗಳನ್ನು ನೀಡಬಹದು. ಆದರೆ ಸರ್ಕಾರ ಎಂಟನೇ ತರಗತಿವರೆಗೆ ಮಾತ್ರ ಮೊಟ್ಟೆ ವಿತರಣೆ ನಿರ್ಧರಿಸಿದೆ ಎಂದರು.

RTE activists condemn decision of public examination for classes 5 and 8 students

ಕೇಂದ್ರದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಮತ್ತು ಅಲ್ಪಸಂಖ್ಯಾತರಿಗೆ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಫೆಲೋಶಿಪ್ ಅನ್ನು ಮುಂದುವರಿಸುವಂತೆ ಇದೇ ವೇಳೆ ಶಿಕ್ಷಣ ತಜ್ಞರು, ಪಾಲಕರ ಸಂಘದ ಸದಸ್ಯರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ಡಿಸೆಂಬರ್ 12 ರಂದು, ಸಾರ್ವಜನಿಕ ಶಿಕ್ಷಣ ಇಲಾಖೆಯು 8 ಮತ್ತು 5 ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ಮಾರ್ಗಸೂಚಿಗಳನ್ನು ಹೊರಡಿಸಿತು.

English summary
Right To Education (RTE) activists condemn decision of public examination for classes 5 and 8 students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X