ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ: ರೋಹಿತ್ ಚಕ್ರತೀರ್ಥ ಐಐಟಿ ಪ್ರೊಫೆಸರ್ ಎಂದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್

|
Google Oneindia Kannada News

ಬೆಂಗಳೂರು, ಮೇ25: ಕರ್ನಾಟಕ ರಾಜ್ಯದಲ್ಲಿ ಪಠ್ಯಪುಸ್ತಕ ವಿವಾದ ತಾರಕಕ್ಕೇರಿದೆ. ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಬಗ್ಗೆ ಶಿಕ್ಷಣ ಸಚಿವರ ಮಾತು ನಗೆಪಾಟಲಿಗೆ ಈಡಾಗಿದೆ. ಸದ್ಯ ಈ ವೀಡಿಯೊ ಎಲ್ಲೆಡೆ ವೈರಲ್ ಆಗುತ್ತಿದೆ.

ಐಐಟಿ ಪ್ರಾಧ್ಯಾಪಕ, ಸಿಇಟಿ ಪ್ರಾಧ್ಯಾಪಕ

ಶಿಕ್ಷಣ ಸಚಿವರಿಗೆ ಪತ್ರಕರ್ತರಿಂದ ಪ್ರಶ್ನೆಗಳು ತೂರಿ ಬರುತ್ತಿದ್ದವು. ಶಿಕ್ಷಣ ಸಚಿವರು ಪಠ್ಯ ಪರಿಷ್ಕರಣೆಯನ್ನು ಮಾಡಿದ್ದನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಕಾಂಗ್ರೆಸ್ ಅನ್ನು ಟೀಕಿಸುತ್ತಿದ್ದರು. ಇದೇ ವೇಳೆಯಲ್ಲಿ ರೋಹಿತ್ ಚಕ್ರತೀರ್ಥ ಅವರ ಹಿನ್ನೆಲೆ ಏನು ಎಂದು ಕೇಳಲಾಗಿತ್ತು. ಸಚಿವರು ಇಲ್ಲಿ ಕುಳಿತವರು ಯಾರಿಗೆ ರೋಹಿತ್ ಚಕ್ರತೀರ್ಥ ಹಿನ್ನೆಲೆ ಗೊತ್ತಿದೆ. ಅವರು ಪ್ರಾಧ್ಯಾಪಕರು, ಪ್ರೊಫೆಸರ್ ಆಗಿದ್ದರು ಎಂದು ಉದ್ವೇಗವಾಗಿಯೇ ಮಾತನಾಡುತ್ತಾ, "ಐಐಟಿ ಪ್ರೊಫೆಸರ್ ಮತ್ತು ಸಿಇಟಿ ಪ್ರಾಧ್ಯಪಕ," ಎಂದು ಹೇಳಿದರು. ಸಚಿವರ ಈ ಮಾತುಗಳು ಈಗ ನಗೆಪಾಟಲಿಗೀಡಾಗುವಂತೆ ಮಾಡಿದೆ.

Rohith chakrathirtha IIT, CET professor - Karnataka Education minister BC Nagaesh Video viral

ಅಸಲಿಗೆ ರೋಹಿತ್ ಚಕ್ರತೀರ್ಥ ಕಂಪ್ಲೀಟ್ ಪ್ರೋಫೈಲ್ ಸರಿಯಾಗಿ ಯಾರಿಗೂ ತಿಳಿದಿದ್ದ. ಅವರ ಬರಹಗಳಿಗೆ ಕರ್ನಾಟಕದಲ್ಲಿ ಜನಪ್ರಿಯತೆಯಾಗಲೀ ಮನ್ನಣೆಯಾಗಲಿ ಸಿಕ್ಕಿಲ್ಲ. ಇಷ್ಟಾಗಿಯೂ ಪಠ್ಯ ಪರಿಷ್ಕರಣೆಯ ಸಮಿತಿಗೆ ರೋಹಿತ್ ಚಕ್ರತೀರ್ಥರನ್ನು ಅಧ್ಯಕ್ಷರನ್ನಾಗಿಸಿದ್ದು ಟೀಕೆಗೆ ಕಾರಣವಾಗುದ್ದರೇ, ಮತ್ತೊಂದೆಡೆ ಶಿಕ್ಷಣ ಸಚಿವರು ಮಾತಿನ ಬರದಲ್ಲೋ ಉದ್ವೇಗದಲ್ಲೋ ಆಡಿದ ಮಾತು ಸಖತ್ ವೈರಲ್ ಆಗುತ್ತಿದೆ. ಐಐಟಿ ಒಕೆ ಸಿಇಟಿ ಪ್ರಾಧ್ಯಾಪಕ ಅಂದ್ರೆ ಏನು ಅಂತೆಲ್ಲಾ ಸಮಾಜಿಕ ಜಾಲ ತಾಣಗಳಲ್ಲಿ ಗೇಲಿ ಮಾಡುತ್ತಿದ್ದಾರೆ.

ಶಿಕ್ಷಣ ಸಚಿವ ಬಿಸಿನಾಗೇಶ್ ಸ್ಪಷ್ಟನೆ

ಶಿಕ್ಷಣ ಸಚಿವರನ್ನು ಈ ಕುರಿತು ಮರುಪ್ರಶ್ನಿಸಿದಾಗ ""ಮಾತಿನ ಬರದಲ್ಲಿ ಐಐಟಿ ಪ್ರೋಫೆಸರ್ ಎಂಬುದನ್ನು ಹೇಳಿದ್ದೇನೆ. ರೋಹಿತ್ ಚಕ್ರತೀರ್ಥರವರು ಅಥಿತಿ ಉಪನ್ಯಾಸಕರಾಗಿ, ಬರಹಗಾರರಾಗಿ, ಚಿಂತಕರಾಗಿ ಗುರುತಿಸಿಕೊಂಡಿದ್ದಾರೆ'' ಎಂದು ತಮ್ಮ ಸಮರ್ಥನೆಯನ್ನು ನೀಡಿದ್ದಾರೆ.

English summary
Karnataka Text Book Row :Education Minister was defending Rohith Chakrathirtha he is an IIT professor and a CET professor, The video of this speech is going viral. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X