ಮಳೆ.. ಮಳೆ.. ಕರ್ನಾಟಕದ ನದಿಗಳಿಗೆ ಮತ್ತೆ ಜೀವಕಳೆ!
ಮಳೆ.. ಮಳೆ.. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುತ್ತಿದೆ. ಮಳೆ ಹೀಗೆ, ಅಬ್ಬರಿಸಿ ಬೊಬ್ಬಿರಿಯುತ್ತಿರುವ ಕಾರಣ ಕರ್ನಾಟಕದಲ್ಲಿ ರೈತರು ನೆಮ್ಮದಿಯ ನಿಟ್ಟುಸಿರನ್ನ ಬಿಟ್ಟಿದ್ದಾರೆ. ಇದು ಮಾತ್ರವಲ್ಲ ಕರ್ನಾಟಕದ ನದಿಗಳಿಗೆ ಕೂಡ ಮತ್ತೆ ಜೀವಕಳೆ ಬಂದಿದೆ. ಅದರಲ್ಲೂ ಇನ್ನೇನು ಸಂಪೂರ್ಣವಾಗಿ ಒಣಗಿ ಹೋಗಿದ್ದ ಕರಾವಳಿ & ಮಲೆನಾಡ ಭಾಗದ ನದಿಗಳು ಈಗ ಹೇಗಾಗಿವೆ ಗೊತ್ತಾ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಕಳೆದ 2 ವಾರದಿಂದ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಯಲ್ಲೂ ಮಳೆಯಾಗುತ್ತಿದೆ. ಈ ಪೈಕಿ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ, ಮೈಸೂರು & ಉಡುಪಿ, ಮಂಗಳೂರು, ಉತ್ತರ ಕನ್ನಡ, ತುಮಕೂರು, ಹಾಸನ, ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಬೆಂಗಳೂರು ನಗರ, ವಿಜಯಪುರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆ ಸೇರಿದಂತೆ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಿಗೆ ಭರ್ಜರಿ ಮಳೆ ಬಂದಿದೆ. ಹೀಗಾಗಿ ಕರ್ನಾಟಕದ ನದಿಗಳು ತುಂಬಲು ಆರಂಭ ಆಗಿವೆ. ಹಾಗಾದ್ರೆ ಯಾವೆಲ್ಲಾ ನದಿಗಳು ತುಂಬುತ್ತಿವೆ? ಮುಂದೆ ಓದಿ.

ನೀರಿಗಾಗಿ ಪರದಾಡಿದ್ದ ಜನರು!
ಕೆಲವೇ ದಿನಗಳ ಹಿಂದೆ ಕರ್ನಾಟಕದ ಪರಿಸ್ಥಿತಿ ಕೈಮೀರಿ ಹೋಗಿ, ಸರ್ಕಾರ ಪರಿತಪಿಸಿತ್ತು. ನದಿಗಳು ಬತ್ತಿ ಹೋಗಿದ್ದವು, ಕರ್ನಾಟಕದ ಮಲೆನಾಡು ಭಾಗದಲ್ಲೂ ನೀರು ಸಿಗುತ್ತಿರಲಿಲ್ಲ. ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೆಕ ಜಿಲ್ಲೆಗಳಿಗೆ ಕಳೆದ 4 ತಿಂಗಳಿಂದ ಕುಡಿಯೋಕೂ ನೀರು ಸಿಗದಂತಾಗಿತ್ತು. ಯಾಕಂದ್ರೆ ಕರ್ನಾಟಕದಲ್ಲಿ ನೀರು ಪೂರೈಸುವ ಜಲಾಶಯ ಒಣಗುತ್ತಾ ಬಂದವು. ಹಾಗೇ ಅಂತರ್ಜಲ ಕೂಡ ಕುಸಿದು ಹೋಗಿ, ಬೇಸಿಗೆ ಆರಂಭ ಆಗುತ್ತಿದ್ದಂತೆ ಜನಗಳಿಗೆ ನೀರು ಸಿಗದೆ ಸಾವಿರಾರು ರೂಪಾಯಿ ಹಣ ಕೊಟ್ಟು ಟ್ಯಾಂಕರ್ ನೀರು ತರಿಸಿದ್ದರು.
ಯಾವೆಲ್ಲಾ ನದಿಗಳು ತುಂಬುತ್ತಿವೆ?
ಆದರೆ ಈಗ ಮಳೆ ಆರಂಭ ಆರಂಭವಾದ ಹಿನ್ನೆಲೆ ಕಾವೇರಿ, ತುಂಗಾ, ಭದ್ರಾ, ಹೇಮಾವತಿ ನದಿಗಳೂ ಸೇರಿದಂತೆ ಕಪಿಲಾ, ನೇತ್ರಾವತಿ ಸೇರಿದಂತೆ ಹತ್ತಾರು ನದಿಗಳು ಈಗ ನಿಧಾನವಾಗಿ ತುಂಬಿಕೊಳ್ಳುತ್ತಿವೆ. ಅದರಲ್ಲೂ ಮಲೆನಾಡು ಭಾಗದಲ್ಲಿನ ನದಿಗಳಿಗೆ ಜೀವಕಳೆ ಬರುತ್ತಿದ್ದು, ಈ ಹಿನ್ನೆಲೆ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಭರ್ಜರಿ ಮಳೆ ಆರಂಭವಾಗಿದ್ದು ಜನರಿಗೆ ಮಾತ್ರ ಅಲ್ಲ ಕಾಡಲ್ಲಿ ಇರುವ ಪ್ರಾಣಿಗಳಿಗೂ ಖುಷಿ ಆಗಿದೆ. ಯಾಕಂದ್ರೆ ನೀರು ಇಲ್ಲದೆ ಕರ್ನಾಟಕದಲ್ಲಿ ಕಾಡು ಪ್ರಾಣಿಗಳಿಗೆ ಕೂಡ ಸಾಕಷ್ಟು ಸಮಸ್ಯೆ ಆಗಿತ್ತು.
ಮುಂಗಾರು ಮಳೆ ಅಬ್ಬರ ಶುರು!
ಮೇ 31ಕ್ಕೆ ಮುಂಗಾರು ಮಳೆಯ ಮಾರುತಗಳು ಕೇರಳ ರಾಜ್ಯಕ್ಕೆ ಎಂಟ್ರಿ ಕೊಡಲಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇಡೀ ಭಾರತದ ಮಳೆಯ ಪಾಲಿನಲ್ಲಿ ಶೇ. 70 ರಷ್ಟು ಮಳೆಯನ್ನ ಮುಂಗಾರು ಮಳೆ ಒಂದೇ ಸುರಿಸುತ್ತದೆ. ಹೀಗಾಗಿ ಮುಂಗಾರು ಮಳೆ ಕರ್ನಾಟಕ ಸೇರಿ ಇಡೀ ಭಾರತಕ್ಕೆ ಅತ್ಯಂತ ಮುಖ್ಯವಾಗಿದೆ. ಹೀಗಿದ್ದಾಗಲೇ 2023 ರಲ್ಲಿ ಮುಂಗಾರು ಮಳೆ ಕೈಕೊಟ್ಟು ಹೋಗಿತ್ತು. ಹೀಗಾಗಿ ಭೀಕರ ಬರ ಎದುರಾಗಿ ರೈತರು & ಜನ ನರಳಿದ್ದರು. ಆದ್ರೆ ಈಗ ಗುಡ್ ನ್ಯೂಸ್ ಸಿಗುತ್ತಿದ್ದು, ಮುಂಗಾರು ಮಳೆ ಅಬ್ಬರ ಗ್ಯಾರಂಟಿ ಆಗುತ್ತಿದೆ.
ಕಾವೇರಿ ಕೊಳ್ಳದ ಡ್ಯಾಂಗಳು ತುಂಬುತ್ತಿವೆ
ಮಳೆ ಇಲ್ಲದೆ ಮನುಷ್ಯರ ಬದುಕು ಊಹೆಗೂ ನಿಲುಕದು. ಯಾಕಂದ್ರೆ ಮನುಷ್ಯರ ಬಹು ಮುಖ್ಯ ಅಂಶ ಅಂದ್ರೆ ನೀರು. ಹೀಗಾಗಿ ನೀರು ಇಲ್ಲದೆ ಮನುಷ್ಯರು ಏನೂ ಮಾಡಲು ಆಗೋದಿಲ್ಲ. ಆದ್ರೆ ಮನುಷ್ಯ ತಾನೇ ಮಾಡಿಕೊಂಡಿದ್ದ ತಪ್ಪುಗಳಿಂದ ಸಾಕಷ್ಟು ಸಮಸ್ಯೆ ಎದುರಿಸುವ ವಾತಾವರಣ ನಿರ್ಮಾಣ ಆಗಿದೆ. ಸರಿಯಾದ ಸಮಯಕ್ಕೆ ಮಳೆಯೇ ಬೀಳುತ್ತಿಲ್ಲ. ಬಿಸಿಲು & ಬಿಸಿ ಗಾಳಿ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಮನುಷ್ಯರು ಪರದಾಡುತ್ತಿದ್ದು ನೀರಿಗೆ ಯುದ್ಧವೇ ನಡೆಯುತ್ತೇನೋ? ಎಂಬ ಭಯ ಕೂಡ ಆವರಿಸಿತ್ತು. ಇದೇ ಸಮಯದಲ್ಲಿ ಸರಿಯಾಗಿ ಭರ್ಜರಿ ಮಳೆ ಬರುತ್ತಿದ್ದು, ಕಾವೇರಿ ನದಿಯ ಡ್ಯಾಂಗಳು ತುಂಬುತ್ತಿವೆ.
ಮುಂಗಾರು ಮಳೆಯೇ ಏನು ನಿನ್ನ...
ಮಳೆಗಳಲ್ಲೇ ಶ್ರೇಷ್ಠ ಮಳೆ ಅಂದ್ರೆ ಅದು ಮುಂಗಾರು ಮಳೆ. ಯಾಕಂದ್ರೆ ಮುಂಗಾರು ಮಳೆ ಇಡೀ ಭಾರತಕ್ಕೆ ನೀರು ಕೊಡುತ್ತದೆ. ಮುಂಗಾರು ಮಳೆ ಇಲ್ಲದೆ ಭಾರತೀಯರ ಬದುಕನ್ನೂ ಊಹೆ ಮಾಡಿಕೊಳ್ಳುವುದು ಕೂಡ ಕಷ್ಟ. ಹೀಗಾಗಿ ಮುಂಗಾರು ಮಳೆಯನ್ನು ಭಾರತೀಯರ ಬದುಕಿನ ಮಳೆ ಅಂತಾನು ಕರೆಯುತ್ತಾರೆ. ಭಾರತದಲ್ಲಿ ಕೃಷಿ ಚಟುವಟಿಕೆ ಆರಂಭ ಆಗುವುದು ಕೂಡ ಇದೇ ಮುಂಗಾರು ಮಳೆಯನ್ನು ನಂಬಿಕೊಂಡು. ಹೀಗಾಗಿ ಮುಂಗಾರು ಮಳೆ ಎಂಟ್ರಿ ಯಾವಾಗ ದೇವರೆ? ಅಂತಾ ಕನ್ನಡಿಗರು ಕಾಯುತ್ತಿದ್ದರು ಇದೀಗ ಭರ್ಜರಿ ಸುದ್ದಿ ಸಿಕ್ಕಿದ್ದು, ಜೂನ್ 7ಕ್ಕೆ ಕರ್ನಾಟಕ ರಾಜ್ಯಕ್ಕೆ ಮುಂಗಾರು ಮಳೆ ಎಂಟ್ರಿ ಕೊಡಲಿದೆಯಂತೆ.












Click it and Unblock the Notifications