ಮೋದಿ ಗೆಲುವಿನಿಂದ ಬುದ್ದಿಜೀವಿಗಳಿಗೆ ದಿಗಿಲು: ಭೈರಪ್ಪ ವಾಗ್ದಾಳಿ

ನವದೆಹಲಿ, ಬೆಂಗಳೂರು ನ 6: ಅಸಹಿಷ್ಣುತೆ ವಿರೋಧಿಸಿ ಪ್ರಶಸ್ತಿ ವಾಪಸ್ ಮಾಡುತ್ತಿರುವವರ ಸಂಖ್ಯೆ ಬೆಳೆಯುತ್ತಿರುವ ಮಧ್ಯೆ, ಸುಮಾರು 36 ಲೇಖಕರು, ಶಿಕ್ಷಣ ತಜ್ಞರು ಮತ್ತು ಕಲಾವಿದರ ಗುಂಪು ಮೋದಿ ಪರ ಧ್ವನಿ ಎತ್ತಿದೆ.

ಕೇಂದ್ರದಲ್ಲಿ ನರೇಂದ್ರ ಮೋದಿ ಗೆಲುವಿನ ನಂತರ ಕೆಲವೊಂದು ವರ್ಗದ ಬುದ್ದಿಜೀವಿಗಳಿಗೆ ಗಾಬರಿಯಾಗಿದೆ. ಹಾಗಾಗಿ ಪ್ರಶಸ್ತಿ ವಾಪ್ಸಿ ಚಳುವಳಿ ತೀವ್ರವಾಗಿದೆ ಎಂದು ಖ್ಯಾತ ಸಾಹಿತಿ, ಸರಸ್ವತಿ ಸಮ್ಮಾನ್ ವಿಜೇತ ಎಸ್ ಎಲ್ ಭೈರಪ್ಪ ಅಭಿಪ್ರಾಯ ಪಟ್ಟಿದ್ದಾರೆ. (ಶಾರುಖ್ ಅಸಹಿಷ್ಣುತೆ ಬಗ್ಗೆ ಯಾರು ಏನು ಹೇಳಿದರು)

ಲೋಕಸಭೆ ಮತ್ತು ನಂತರ ನಡೆದ ಕೆಲವೊಂದು ರಾಜ್ಯಗಳ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿಗೆ ಜಯ ಸಿಕ್ಕಿದ್ದರಿಂದ ಅದರ ಸೇಡನ್ನು ಬೇರೆ ರೀತಿಯಲ್ಲಿ ತೀರಿಸಿಕೊಳ್ಳಲು ಕೆಲವೊಂದು ವರ್ಗದವರು ಹವಣಿಸುತ್ತಿದ್ದಾರೆ. ಅದಕ್ಕಾಗಿಯೇ ಪ್ರಶಸ್ತಿ ವಾಪಸ್ ಮಾಡುವ ಕೆಲಸಕ್ಕೆ ಮುಂದಾಗಿರುವುದು ಎಂದು ಭೈರಪ್ಪ ಟೀಕಿಸಿದ್ದಾರೆ.

ಎಸ್‌ ಎಲ್ ಭೈರಪ್ಪ, ಸುಮತೀಂದ್ರ ನಾಡಿಗ್‌ , ಕಪಿಲ್‌ ಕಪೂರ್‌, ದಿಲೀಪ್‌ ಚಕ್ರವರ್ತಿ, ಲೋಕೇಶ್‌ ಚಂದ್ರ, ಗೋಪಿನಾಥ್‌ ಸೇರಿದಂತೆ 36 ಜನ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿದ್ದು, ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಬುರ್ಗಿ, ದಾಭೋಲ್ಕರ್‌ ಹತ್ಯೆ ಹಾಗೂ ದಾದ್ರಿ ಘಟನೆಗಳಿಗೆ ಕೇಂದ್ರ ಸರ್ಕಾರವನ್ನು ದೂಷಿಸುವುದು ಯಾವ ನ್ಯಾಯ. ಮೋದಿ ಅವರನ್ನು ಟೀಕಿಸುತ್ತಿರುವ ಬುದ್ಧಿಜೀವಿಗಳು ಸಿಖ್ಖರ ನ್ಯಾಯಕ್ಕಾಗಿ ಯಾಕೆ ಹೋರಾಡುತ್ತಿಲ್ಲ ಎಂದು ಕಪಿಲ್ ಕಪೂರ್ ಪ್ರಶ್ನಿಸಿದ್ದಾರೆ.

ಎಸ್ ಎಲ್ ಭೈರಪ್ಪ

ಎಸ್ ಎಲ್ ಭೈರಪ್ಪ

ಭೈರಪ್ಪನವರು ಬುದ್ದಿಜೀವಿಗಳ ನಡೆಯ ಬಗ್ಗೆ ಈ ಹಿಂದೆ ಕೂಡಾ ಅಸಮಾಧಾನ ವ್ಯಕ್ತ ಪಡಿಸಿದ್ದರು. ಗುರುವಾರ (ನ 5) ಈ ಪ್ರಶಸ್ತಿ ವಾಪಸಿ ಸಂಬಂಧ ತಮ್ಮ ನಿಲುವನ್ನು ಪ್ರಕಟಿಸಿದ್ದು, ಮೋದಿ ಬೆಂಬಲಕ್ಕೆ ನಿಂತಿದ್ದಾರೆ.

ಎಡರಂಗದ ಆಡಳಿತ

ಎಡರಂಗದ ಆಡಳಿತ

ಎಡರಂಗದ ಆಡಳಿತದಲ್ಲಿ ಪಶ್ಚಿಮ ಬಂಗಾಳದಲ್ಲಿ ರೈತರ ಕೊಲೆ ನಡೆಯಿತು. ಕರ್ನಾಟಕದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನೆಲ್ಲಾ ಈ ಬುದ್ದಿಜೀವಿಗಳು ಯಾಕೆ ನೆನಪಿಸಿಕೊಳ್ಳುತ್ತಿಲ್ಲ ಎಂದು ದಿಲೀಪ್ ಚಕ್ರವರ್ತಿ ಕಿಡಿಕಾರಿದ್ದಾರೆ. (ಚಿತ್ರದಲ್ಲಿ ಆರುಂಧತಿ ರಾಯ್)

ಸಲ್ಮಾನ್ ಖಾನ್

ಸಲ್ಮಾನ್ ಖಾನ್

ಜನರು ಯಾವ ಧರ್ಮದವರು, ಎಲ್ಲಿಂದ ಬಂದವರು ಎಂಬುದನ್ನು ಆಧರಿಸಿ ಅಳೆಯುವುದು ಸೂಕ್ತವಲ್ಲ. ಮೊದಲು ನಾವು ಮನುಷ್ಯರು, ಭಾರತೀಯರು ಎನ್ನುವುದು ಮುಖ್ಯ. ನಮ್ಮ ನಡುವೆ ಪ್ರೀತಿಯಿರಬೇಕೇ ಹೊರತು ವೈಮನಸ್ಸು ಅಲ್ಲ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿಪ್ರಾಯ ಪಟ್ಟಿದ್ದಾರೆ.

24 ಜನರಿಂದ ಪಶಸ್ತಿ ವಾಪಸ್

24 ಜನರಿಂದ ಪಶಸ್ತಿ ವಾಪಸ್

ಲೇಖಕಿ ಅರುಂಧತಿ ರಾಯ್, ಚಿತ್ರ ನಿರ್ಮಾಪಕರಾದ ಕುಂದನ್ ಷಾ, ಸಯೀದ್‌ ಮಿರ್ಜಾ, ತಪನ್‌ ಬೋಸ್‌, ಮಧುಶ್ರೀ ದತ್ತಾ ಸೇರಿದಂತೆ 24 ಮಂದಿ ಗುರುವಾರ (ನ 5) ತಮಗೆ ಬಂದ ಪ್ರಶಸ್ತಿಗಳನ್ನು ವಾಪಸ್‌ ಮಾಡಿದ್ದರು.

ಹೇಮಾಮಾಲಿನಿ ಅಸಮಾಧಾನ

ಹೇಮಾಮಾಲಿನಿ ಅಸಮಾಧಾನ

ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವುದನ್ನು ಪ್ರತಿಭಟಿಸಿ ಚಿತ್ರ ನಿರ್ಮಾಪಕರು ರಾಷ್ಟ್ರೀಯ ಪ್ರಶಸ್ತಿಗಳನ್ನು ವಾಪಸ್ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ನಟಿ ಹಾಗೂ ಮಧುರಾ ಸಂಸದೆ ಹೇಮಾಮಾಲಿನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. (File Photo)

ಶಾರುಖ್‌ ನಿವಾಸಕ್ಕೆ ಹೆಚ್ಚಿನ ಭದ್ರತೆ

ಶಾರುಖ್‌ ನಿವಾಸಕ್ಕೆ ಹೆಚ್ಚಿನ ಭದ್ರತೆ

ಅಸಹಿಷ್ಣುತೆ ಕುರಿತ ನಟ ಹೇಳಿಕೆ ನೀಡಿ, ಪ್ರಶಸ್ತಿ ಹಿಂದಿರುಗಿಸುವ ಬಗ್ಗೆ ಮಾತನಾಡಿದ್ದ ಬಾಲಿವುಡ್ ನಟ ಶಾರುಖ್‌ ಖಾನ್‌ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಮುಂಬೈನಲ್ಲಿರುವ ಅವರ ನಿವಾಸಕ್ಕೆ ಒದಗಿಸಿರುವ ಪೊಲೀಸ್‌ ಭದ್ರತೆಯನ್ನು ಮಹಾರಾಷ್ಟ್ರ ಸರಕಾರ ಹೆಚ್ಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+