Get Updates
Get notified of breaking news, exclusive insights, and must-see stories!

ಕಂದಾಯ ಸಚಿವರ ಹೆಸರಿನಲ್ಲಿ ಡೀಲಿಂಗ್ : ನಿವೃತ್ತ ಇಂಜಿನಿಯರ್ ವಿರುದ್ಧ ಲೋಕಾಯುಕ್ತಕ್ಕೆ ದೂರು

ಬೆಂಗಳೂರು, ಫೆ. 21: ಎಸಿಬಿ ಮತ್ತು ಲೋಕಾಯುಕ್ತ ತನಿಖಾ ಸಂಸ್ಥೆಗಳ ಹೆಸರು ಬಳಿಸಿಕೊಂಡು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹೆದರಿಸಿ ಹಣ ವಸೂಲಿ ಮಾಡಿರುವ ಆರೋಪ ಕೇಳಿ ಬಂದಿದೆ.

ಈ ಸಂಬಂಧ ಕಂದಾಯ ಇಲಾಖೆಯ ಸರ್ವೆ ವಿಭಾಗದಲ್ಲಿ ತನಿಖಾ ದಳಲ್ಲಿ ನಿಯೋಜನೆ ಮೇರೆಗೆ ಕೆಲಸ ಮಾಡಿ 2018 ರಲ್ಲಿ ನಿವೃತ್ತಿ ಹೊಂದಿರುವ ಲೋಕೋಪಯೋಗಿ ಇಲಾಖೆಯ ನಿವೃತ್ತ ಅಭಿಯಂತರ ಮಂಜುನಾಥ್ ಹಾಗೂ ಇತರರ ವಿರುದ್ಧ ದೂರು ನೀಡಲಾಗಿದೆ. ಎಸಿಬಿ ಹೆಸರಿನಲ್ಲಿ ಹೆದರಿಸಿರುವ ಸಂಬಂಧ ಎರಡು ಮೊಬೈಲ್ ನಂಬರ್ ದೂರಿನಲ್ಲಿ ಉಲ್ಲೇಖಿಸಿ ತನಿಖೆ ನಡೆಸುವಂತೆ ಕೋರಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.

ವಕೀಲ ಹೊಳೇ ಬಸಪ್ಪ ಹಾಳಕೇರಿ ಎಂಬುವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಾಗಿದೆ. ಇನ್ನು ಎಸಿಬಿ ಹೆಸರಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳಿಗೆ ಹೆದರಿಸಿ ಆ ಬಳಿಕ ಇತ್ಯರ್ಥ ಗೊಳಿಸುವುದಾಗಿ ಅಧಿಕಾರಿಗಳ ಬಳಿ ವ್ಯವಹಾರ ನಡೆಸಿದ ಆರೋಪ ಸಹ ಕೇಳಿ ಬಂದಿದ್ದು, ಈ ಕುರಿತು ತನಿಖೆ ನಡೆಸುವಂತೆ ಪ್ರತ್ಯೇಕ ದೂರನ್ನು ಎಸಿಬಿಗೂ ಸಲ್ಲಿಸಲಾಗಿದೆ ಎಂದು ವಕೀಲ ಹೊಳೇ ಬಸಪ್ಪ ಹಾಳಕೇರಿ ಅವರು ತಿಳಿಸಿದ್ದಾರೆ.

Bengaluru: Retired Officer Posing as ACB Officer and Threaten Stamp and Registration Dept Staffs

ಶಾಸಕ ರವಿ ಸುಬ್ರಮಣ್ಯ ಅವರ ಕೊಠಡಿ ದುರ್ಬಳಕೆ?

ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಅವರಿಗೆ ಶಾಸಕರ ಭವನದಲ್ಲಿ ಮಂಜೂರಾಗಿರುವ ನಂ. 275 ಕೊಠಡಿಯಲ್ಲಿ ಮಂಜುನಾಥ್ ಠಿಕಾಣಿ ಹೂಡಿಕೊಂಡು ಅವ್ಯವಹಾರ ನಡೆಸಿದ್ದಾರೆ ಎನ್ನಲಾಗಿದೆ. ಹಾಲಿ ಶಾಸಕರ ಕೊಠಡಿಯನ್ನು ಮಂಜುನಾಥ್ ದುರುಪಯೋಗ ಪಡಿಸಿಕೊಂಡು ತನ್ನ ಕಾರ್ಯ ಸ್ಥಾನ ಮಾಡಿಕೊಂಡಿದ್ದು, ಪ್ರತಿ ನಿತ್ಯ ಅಲ್ಲಿಂದಲೇ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಅಲ್ಲಿಗೆ ಕರೆಸಿಕೊಂಡು ಹೆದರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಶಾಸಕರ ಭವನಕ್ಕೆ ಪ್ರತಿ ನಿತ್ಯ ಮಂಜುನಾಥ್ ಹೋಗಿರುವುದು ಶಾಸಕರ ಭವನದ ದ್ವಾರದಲ್ಲಿರವ ಸಿಸಿಟಿವಿಯಲ್ಲಿ ಸಹ ಸೆರೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸು ಕೋರಲಾಗಿದೆ. ಶಾಸಕರ ಭವನದಲ್ಲಿ ಕೊಠಡಿ ನೋಡಿಕೊಳ್ಳುತ್ತಿದ್ದ ಶುಕ್ರ ಎಂಬ ಯುವಕನನ್ನು ಹಣ ವಹಿವಾಟಿಗೆ ಬಳಿಸಿಕೊಂಡಿದ್ದು ಈ ಕುರಿತ ತನಿಖೆ ನಡೆಸುವಂತೆ ಕೋರಲಾಗಿದೆ. ಈ ಕುರಿತು ಒನ್ ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ನಿವೃತ್ತ ಇಂಜಿನಿಯರ್ ಮಂಜುನಾಥ್, ನಾನು ನಿವೃತ್ತಿಯಾಗಿದ್ದೇನೆ, ನಾನು ರವಿ ಸುಬ್ರಮಣ್ಯ ಕೊಠಡಿ ಸಾರ್ವಜನಿಕ ಪ್ರದೇಶ. ಅಲ್ಲಿಗೆ ಹೋದ್ರೆ ತಪ್ಪೇನಿದೆ ? ವಿಶ್ರಾಂತಿ ಪಡೆಯಲು ಹೋಗಿದ್ದೆ. ನನ್ನ ಮೇಲಿನ ಅರೋಪಗಳನ್ನು ಸಾಬೀತು ಮಾಡಲಿ ಎಂದು ಹೇಳಿದ್ದಾರೆ.

Bengaluru: Retired Officer Posing as ACB Officer and Threaten Stamp and Registration Dept Staffs

ಕಂದಾಯ ಸಚಿವರ ಹೆಸರಿನಲ್ಲಿ ವರ್ಗವಣೆ ದಂಧೆ:

ಕಂದಾಯ ಸಚಿವ ಆರ್. ಅಶೋಕ್ ಅವರ ಹೆಸರು ಹೇಳಿಕೊಂಡು ಮಂಜುನಾಥ್ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ತನ್ನ ಆಪ್ತ ಕೂಟ ಕಟ್ಟಿಕೊಂಡು ವರ್ಗಾವಣೆಯನ್ನು ದಂಧೆ ಮಾಡುತ್ತಿದ್ದಾರೆ. ಮಂಜುನಾಥ್ ಸೂಚನೆ ಮೇರೆಗೆ ವರ್ಗಾವಣೆಯಾಗಬೇಕು, ಇಲ್ಲದಿದ್ದರೆ ನಾನಾ ರೀತಿಯಲ್ಲಿ ಕಿರುಕುಳ ನೀಡಿ ಒಂದು ದಿನವೂ ಕೆಲಸ ಮಾಡಲು ಆಗದಂತೆ ಕಿರುಕುಳ ನೀಡುತ್ತಿದ್ದಾರೆ. ಈ ಹಿಂದೆ ನೋಂದಣಿ ಇಲಾಖೆಯಲ್ಲಿ ಕೆಲಸ ಮಾಡುವಾಗ ತಮ್ಮ ಆಪ್ತ ಬಳಕ ಹುಟ್ಟು ಹಾಕಿದ್ದ ಮಂಜುನಾಥ್ , ಇದೀಗ ಅವರ ನೆರವಿನಿಂದ ನೋಂದಣಿ ಇಲಾಖೆಯ ಅಧಿಕಾರಿಗಳ ವಿವರ ಪಡೆದು, ನಾನಾ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದಾರೆ. ತನಿಖೆ ನಡೆಸಿದರೆ ಎಲ್ಲವೂ ಬಯಲಿಗೆ ಬರಲಿದೆ ಎಂದೇ ಹೇಳಲಾಗುತ್ತಿದೆ.

Bengaluru: Retired Officer Posing as ACB Officer and Threaten Stamp and Registration Dept Staffs

ನಿವೃತ್ತ ಇಂಜಿನಿಯರ್ ಮಂಜುನಾಥ್ ತನ್ನ ಸ್ವಂತ ಮೊಬೈಲ್ ಹಾಗೂ ಮತ್ತೊಂದು ನಂಬರ್‌ನಿಂದ ನೋಂದಣಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕರೆ ಮಾಡಿ ಹೆದರಿಸುತ್ತಾರೆ. ನಿಮ್ಮ ವಿರುದ್ಧ ಎಸಿಬಿ. ಲೋಕಾಯುಕ್ತ, ಸಿಸಿಬಿಯಲ್ಲಿ ದೂರು ದಾಖಲಿಸುತ್ತೇನೆ ಎಂದು ಕಿರುಕುಳ ನೀಡುತ್ತಾರೆ. ಹಣಕ್ಕಾಗಿ ಪೀಡಿಸುತ್ತಾರೆ. ಹಣ ಕೊಡದವರಿಗೆ ಇಲಾಖೆಯ ಮೂಲಕ ವಿವಿಧ ರೀತಿಯ ಒತ್ತಡಗಳನ್ನು ತಂದು ವರ್ಗಾವಣೆಗಳನ್ನೂ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.

ಶಾಸಕರ ಭವನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಕೆಲ ನಿರ್ಬಂಧಗಳು ಇವೆ. ಆದರೆ, ಮಂಜುನಾಥ್ ಹೆಸರು ಹೇಳಿದರೆ ಶಾಸಕರ ಭವನದ ಮುಖ್ಯದ್ವಾರದ ಪೊಲೀಸರು ಯಾವುದೇ ತಪಾಸಣೆಯನ್ನೂ ಮಾಡದೆ ಬಿಟ್ಟು ಕಳುಹಿಸುತ್ತಾರೆ. ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ಕಂದಾಯ ಮತ್ತು ನೋಂದಣಿ, ಮುದ್ರಾಂಕ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ಆಗುತ್ತಿರುವ ಕಿರುಕುಳವನ್ನು ತಪ್ಪಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ಎಸಿಬಿ ಹಾಗೂ ಸಿಸಿಬಿ ಹೆಸರಲ್ಲಿ ಅನಾಮಿಕ ಕರೆ:

ಇನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ದಿನ ನಿತ್ಯ ನಡೆಯುವ ಕೆಲಸಗಳ ಬಗ್ಗೆ ಮಾಹಿತಿ ಪಡೆದು ಎಸಿಬಿ ಹಾಗೂ ಲೋಕಾಯುಕ್ತ ಹೆಸರಿನಲ್ಲಿ ಅಧಿಕಾರಿಗಳಿಗೆ ಕರೆ ಮಾಡಿ ಹೆದರಿಸಿದ್ದು, ಇದರ ಹಿಂದೆ ಸಹ ಮಂಜುನಾಥ್ ಕೈವಾಡವಿದೆ ಎನ್ನಲಾಗಿದೆ. ಕಳೆದ ಹದಿಮೂರು ವರ್ಷಗಳಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ವರ್ಗಾವಣೆ ದಂಧೆಯನ್ನು ಮಂಜುನಾಥ್ ನೋಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಕೆಲ ಮಹಿಳಾ ಅಧಿಕಾರಿಗಳಿಗೆ ಎಸಿಬಿ ಹೆಸರಿನಲ್ಲಿ ಹೆದರಿಸಿದ್ದು ಮೊಬೈಲ್ ನಂಬರ್ ಗಳ ಕರೆ ಆಧರಿಸಿ ತನಿಖೆ ನಡೆಸುವಂತೆ ಕೋರಲಾಗಿದೆ.

ಸಿಸಿಬಿ ಕೇಸಿನಲ್ಲಿ ಎತ್ತುವಳಿ ಆರೋಪ:

Recommended Video

      ಮುದ್ದಾದ ವಿಡಿಯೋ ಹಂಚಿಕೊಂಡ ಶಿಖರ್ ಧವನ್ | Oneindia Kannada

      ಈ ಹಿಂದೆ ನೋಂದಣಿ ಇಲಾಖೆಯ ದಾಖಲೆಗಳಲ್ಲಿ ಲೋಪ ಆಗಿದ್ದ ಬಗ್ಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿತ್ತು. ಈ ಸಂಬಂಧ ಸಿಸಿಬಿ ಪೊಲೀಸರು ಇಲಾಖೆಯ ಅಧಿಕಾರಿ, ಸಿಬ್ಬಂದಿಯನ್ನು ಕರೆದು ವಿಚಾರಣೆ ಮಾಡಿದ್ದರು. ಈ ಸಂದರ್ಭದಲ್ಲಿ ಮಂಜುನಾಥ್, ವಿಚಾರಣೆ ಎದುರಿಸುತ್ತಿದ್ದೋ ಅವರೆಲ್ಲ ನನ್ನ ಬಳಿ ಬನ್ನಿ. ಸಂದೀಪ್ ಪಾಟೀಲ್ ನನ್ನ ಪರಮಾಪ್ತರು. ನೀವು ಬಂಧನ ಆಗದಂತೆ, ಆರೋಪ ಮುಕ್ತ ಆಗುವಂತೆ ವ್ಯವಸ್ಥೆ ಮಾಡುತ್ತೇನೆ ಎಂದು ಹಣ ವಸೂಲಿಯನ್ನೂ ಮಾಡಿ ಸಿಸಿಬಿ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇಂತಹ ವಿಷಯಗಳ ಬಗ್ಗೆ ಇಲಾಖೆಯ ಅಧಿಕಾರಿಗಳು ಬಹಿರಂಗವಾಗಿ ಹೇಳಿಕೊರ್ಳಳಲಾಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಕುರಿತು ನೋಂದಣಿ ಇಲಾಖೆಯ ಅಧಿಕಾರಿಗಳನ್ನು ಗೌಪ್ಯವಾಗಿ ವಿಚಾರಣೆ ನಡೆಸುವಂತೆ ಹೊಳೇ ಬಸಪ್ಪ ಹಾಳಕೇರಿ ಎಂಬುವವರು ದೂರಿನಲ್ಲಿ ವಿವರಿಸಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+