ಟ್ವೀಟ್ ಮಾಡುವ ಮುನ್ನವೇ ನಿರ್ಬಂಧ ಕಾನೂನು ವಿರೋಧಿ ಕ್ರಮ- ಹೈಕೋರ್ಟ್‌ನಲ್ಲಿ ವಾದ

ಬೆಂಗಳೂರು ಅ.27. ಆಕ್ಷೇಪಾರ್ಹ ಟ್ವೀಟ್‌ಗಳನ್ನು ಬ್ಲಾಕ್ ಮಾಡುವುದು ಅಥವಾ ನಿರ್ಬಂಧಿಸುವುದು ಒಪ್ಪಬಹುದು, ಆದರೆ ಇನ್ನೂ ಮಾಡದೇ ಇರುವ ಸಂಭಾವ್ಯ ಟ್ವೀಟ್‌ಗಳನ್ನು ಮೊದಲೇ ನಿರ್ಬಂಧಿಸುವುದು ಎಷ್ಟರ ಮಟ್ಟಿಗೆ ಸರಿ? ಅದು ಕಾನೂನು ಬಾಹಿರ ಕ್ರಮವಲ್ಲದೆ ಮತ್ತೇನು ಎಂದು ಟ್ವಿಟ್ಟರ್ ಕಂಪನಿ ಪರ ವಕೀಲರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಅಲ್ಲದೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ನಲ್ಲಿ ಸಂವಹನ ಎಂಬ ಪದ ಗೈರಾಗಿರುವ ಮಾತ್ರಕ್ಕೆ ಸಕಾರಣಗಳ ಸಂವಹನಕ್ಕೆ ಅಡ್ಡಿಯಾಗುತ್ತದೆ ಎಂದರ್ಥವಲ್ಲ. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇರಬೇಕಾಗುತ್ತದೆ. ಸಕಾರಣ ನೀಡುವುದಿಲ್ಲ ಮತ್ತು ಅದರ ಸಂವಹನ ಮಾಡುವುದಿಲ್ಲ ಎಂಬುದು ಸಂರಕ್ಷಣೆಯ ವಿರುದ್ಧವಾಗುತ್ತದೆ ಎಂದು ನ್ಯಾಯಪೀಠಕ್ಕೆ ವಿವರಿಸಿದೆ.

ಟ್ವಿಟ್ಟರ್ ಕಂಪನಿ, ಮಾಹಿತಿ ತಂತ್ರಜ್ಞಾನ (ಐಟಿ) ಕಾಯಿದೆ-2000ದ ಕಲಂ 69ಎ ಗೆ ವಿರುದ್ಧವಾಗಿ 1,400ಕ್ಕೂ ಅಧಿಕ ಟ್ವಿಟ್ಟರ್‌ ಖಾತೆ ಬ್ಲಾಕ್ ಮಾಡಬೇಕೆಂಬ ನೋಟಿಸ್‌ಗಳನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಕುರಿತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ಗುರುವಾರ ವಿಚಾರಣೆ ನಡೆಸಿತು.

Restraining before tweeting is unconstitutional: Twitter argued before HC

ಅರ್ಜಿದಾರರ ವಾದವೇನು?

ಟ್ವಿಟ್ಟರ್ ಪರ ವಾದ ಮಂಡಿಸಿದ ಹಿರಿಯ ವಕೀಲರು, ಯಾರು ಟ್ವೀಟ್ ಮಾಡಿದ್ದಾರೊ ಅವರಿಗೆ ನೋಟಿಸ್ ನೀಡಿಲ್ಲ. ಬದಲಿಗೆ ಕಂಪನಿಗೆ ನೋಟಿಸ್ ನೀಡಲಾಗಿದೆ. ಯಾವ ಕಾರಣಕ್ಕಾಗಿ ಬ್ಲಾಕ್ ಮಾಡಲಾಗುತ್ತಿದೆ ಎಂಬ ಬಗ್ಗೆಯೂ ಕಾರಣಗಳನ್ನು ತಿಳಿಸಿಲ್ಲ" ಎಂದು ಆಕ್ಷೇಪಿಸಿದರು.

ಕೇಂದ್ರ ಸರಕಾರ ಹೊರಡಿಸಿರುವ ನಿರ್ಬಂಧ ಆದೇಶದಲ್ಲಿ ಸಕಾರಣಗಳನ್ನು ದಾಖಲಿಸಬೇಕು. ಸಕಾರಣ ಆದೇಶ ಅಥವಾ ಸ್ಪೀಕಿಂಗ್ ಆರ್ಡರ್ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಎರಡರಲ್ಲೂ ಕಾರಣಗಳಿರಬೇಕು. ಟ್ವಿಟ್ಟರ್ ಖಾತೆ ನಿಷೇಧ ಸಂಬಂಧ ಕೇಂದ್ರ ಹೊರಡಿಸಿರುವ ಆದೇಶದಲ್ಲಿ ಸಕಾರಣಗಳಿದ್ದಲ್ಲಿ ಅವುಗಳನ್ನು ನಿಷೇಧಿಸಬಹುದಾದ ಖಾತೆಗಳ ಬಳಕೆದಾರರಿಗೆ ಸಂಸ್ಥೆ ನೀಡಬಹುದು. ಆಗ ಬಾಧಿತರಾದವರು ಆ ಆದೇಶವನ್ನು ಪ್ರಶ್ನಿಸಬೇಕೆ ಅಥವಾ ಬೇಡವೆ ಎಂದು ನಿರ್ಧರಿಸಲು ಸಾಧ್ಯವಾಗುತ್ತದೆ ಎಂದರು.

'ರಾಷ್ಟ್ರೀಯತೆ, ಸಾರ್ವಜನಿಕ ಹಿತದೃಷ್ಟಿ ಕಾಪಾಡುವ, ಗುಂಪು ಘರ್ಷಣೆ ಮತ್ತು ಲಿಂಚಿಂಗ್‌ನಂತಹ (ಗುಂಪು ಹಲ್ಲೆ) ದುಷ್ಕೃತ್ಯಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕೆಲವು ಖಾತೆಗಳನ್ನು ನಿರ್ಬಂಧಿಸಲು ಟ್ವಿಟ್ಟರ್‌ಗೆ ಆದೇಶಿಸಲಾಗಿದೆ' ಎಂದು ಕೇಂದ್ರ ಸರ್ಕಾರ ನ್ಯಾಯಪೀಠಕ್ಕೆ ಈ ಹಿಂದಿನ ವಿಚಾರಣೆ ವೇಳೆ ಸ್ಪಷ್ಟಪಡಿಸಿತ್ತು.

ವ್ಯಕ್ತಿಗತ ಟ್ವಿಟ್ಟರ್‌ ಖಾತೆಗಳನ್ನು ನಿಷೇಧಿಸುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದಲ್ಲಿಸಕಾರಣಗಳನ್ನು ದಾಖಲಿಸಿದ್ದರೆ, ಅವುಗಳನ್ನು ನಿಷೇಧಿಸಲ್ಪಡುವ ಖಾತೆಯ ಬಳಕೆದಾರರಿಗೆ ನೀಡಬಹುದು ಎಂದು ಟ್ವಿಟ್ಟರ್‌ ಸಂಸ್ಥೆ ಹೈಕೋರ್ಟ್ ಮುಂದೆ ಪ್ರತಿಪಾದಿಸಿದೆ.

ಕೇಂದ್ರ ಸರಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್, ವಾದ ಮಂಡನೆಗೆ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಪೀಠ ವಿಚಾರಣೆಯನ್ನು ನ.16ಕ್ಕೆ ಮುಂದೂಡಿತು.

ಪ್ರಕರಣವೇನು?

ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ-2000ರ ಸೆಕ್ಷನ್ 69ಎ ಅಡಿಯಲ್ಲಿ 2021ರ ಫೆ.2ರಿಂದ ವಿವಿಧ ದಿನಾಂಕಗಳಲ್ಲಿ ಹಲವು ನೋಟಿಸ್ ನೀಡಿರುವ ಕೇಂದ್ರ ಸರ್ಕಾರ 1,474 ಟ್ವಿಟ್ಟರ್‌ ಖಾತೆಗಳು ಹಾಗೂ 175 ಟ್ವೀಟ್‌ಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವಂತೆ ಆದೇಶಿಸಿದೆ. ಇದನ್ನು ಪ್ರಶ್ನಿಸಿರುವ ಅರ್ಜಿದಾರರು, ಕೇಂದ್ರದ ಆದೇಶದಿಂದ ಬಳಕೆದಾರರ ಹಕ್ಕುಗಳ ಉಲ್ಲಂಘನೆ ಆಗಲಿದೆ. ಯಾವ ಕಾರಣಕ್ಕಾಗಿ ಖಾತೆಗಳನ್ನು ನಿರ್ಬಂಧಿಸಬೇಕು ಮತ್ತು ಅದರ ಅಗತ್ಯವೇನಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರ ವಿವರಿಸಿಲ್ಲ. ಇದು ಏಕಪಕ್ಷೀಯ ನಿರ್ಧಾರವಾಗಿದ್ದು, ಐಟಿ ಕಾಯ್ದೆಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+