• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಮ್ಮ ರಾಜಕೀಯ ವೃತ್ತಿ ಜೀವನದಲ್ಲೇ ಕಂಡು ಕೇಳರಿಯದ ಸಂಕಷ್ಟದಲ್ಲಿ ಯಡಿಯೂರಪ್ಪ

|

78ನೇ ವಯಸ್ಸಿನಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಸಕ್ರಿಯ ರಾಜಕಾರಣಕ್ಕೆ ಧುಮುಕಿ ಸುಮಾರು ಐದು ದಶಕಗಳು ಕಳೆದಿವೆ. ಅಲ್ಲಿಂದ ಇಲ್ಲಿಯವರೆಗೆ ಹೋರಾಟದ ಮೂಲಕವೇ ಈ ಹಂತಕ್ಕೆ ಬಂದಿರುವ ಬಿಎಸ್ವೈ ಸದ್ಯ ಸಂದಿಗ್ದ ಪರಿಸ್ಥಿತಿಯಲ್ಲಿದ್ದಾರೆ.

2008ರ ಚುನಾವಣೆಯಲ್ಲಿ ಸ್ವಯಂಬಲದಿಂದಲೇ ಅಧಿಕಾರಕ್ಕೆ ಬಿಜೆಪಿ ಬಂದಿದ್ದರೂ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮುಗಿಸಲು ಯಡಿಯೂರಪ್ಪನವರಿಗೆ ಸಾಧ್ಯವಾಗಲಿಲ್ಲ. ಜೊತೆಗೆ, ಜೈಲು ಶಿಕ್ಷೆಯನ್ನೂ ಅವರು ಅನುಭವಿಸಬೇಕಾಯಿತು.

ಯಡಿಯೂರಪ್ಪ ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಕೊಡುತ್ತಾರೆ!

ಇದರ ಜೊತೆಗೆ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಹುಟ್ಟುಹಾಕಿದ ಯಡಿಯೂರಪ್ಪನವರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸೀಟು ಗೆಲ್ಲಲು ಸಾಧ್ಯವಾಗದಿದ್ದರೂ, ಬಿಜೆಪಿಯನ್ನು ಮತ್ತೆ ಅಧಿಕಾರದಿಂದ ತಪ್ಪಿಸಲು ಶಕ್ತರಾದರು.

ಈಗ ಮತ್ತೆ ಸಿಎಂ ಹುದ್ದೆಯನ್ನು ನಿಭಾಯಿಸುತ್ತಿರುವ ಯಡಿಯೂರಪ್ಪನವರದ್ದು ತಂತಿಯ ಮೇಲಿನ ನಡೆಗೆಯೇ ಸರಿ. ಸಂಪುಟ ವಿಸ್ತರಣೆ ಕಸರತ್ತನ್ನು ಸದ್ಯಕ್ಕೆ ನಿಭಾಯಿಸಿರುವ ಬಿಎಸ್ವೈಗೆ, ತಮ್ಮ ರಾಜಕೀಯ ಅನುಭವವನ್ನೇ ಧಾರೆಗೆರೆದು ಮೀಸಲಾತಿ ಸಂಕಷ್ಟದಿಂದ ಹೊರಬರಬೇಕಾಗಿದೆ.

ಪಂಚಮಸಾಲಿ ಹೋರಾಟ ತೀವ್ರ: ವಿಭೂತಿ, ಲಿಂಗ ಧರಿಸಿದವರ ಸಮಸ್ಯೆ ಕುಂಕುಮ ಇಟ್ಟುಕೊಂಡ ಸಿಎಂಗೆ ತಿಳಿಯುತ್ತಿಲ್ಲ

ಲಿಂಗಾಯತ ಧರ್ಮವನ್ನು ಡಿವೈಡ್ ಮಾಡಲು ಹೋಗಿ, ಸಿದ್ದರಾಮಯ್ಯ

ಲಿಂಗಾಯತ ಧರ್ಮವನ್ನು ಡಿವೈಡ್ ಮಾಡಲು ಹೋಗಿ, ಸಿದ್ದರಾಮಯ್ಯ

ಜಾತಿ,ಧರ್ಮ,ಮೀಸಲಾತಿ ಮುಂತಾದ ವಿಚಾರಗಳು ಮುಟ್ಟಿದರೆ ಚುಚ್ಚಲು ಬರುತ್ತದೆ ಎನ್ನುವುದು ಕಾಂಗ್ರೆಸ್ಸಿನವರಿಗೆ ಗೊತ್ತಿರುವ ವಿಚಾರ. ಲಿಂಗಾಯತ ಧರ್ಮವನ್ನು ಡಿವೈಡ್ ಮಾಡಲು ಹೋಗಿ, ಸಿದ್ದರಾಮಯ್ಯನವರು ಮುಗ್ಗರಿಸಿದ್ದ ವಿಚಾರ ಗೊತ್ತಿದ್ದೇ. ಹಾಗಾಗಿಯೇ, ಈಗ ನಡೆಯುತ್ತಿರುವ ವಿವಿಧ ಸಮುದಾಯದ ಹೋರಾಟದ ಬಗ್ಗೆ ಬಿಜೆಪಿಯ ವರಿಷ್ಠರು ಇಂಚಿಂಚು ಮಾಹಿತಿಯನ್ನು ಪಡೆದುಕೊಳ್ಳುತ್ತಿರುವುದು.

ವಿಧಾನಸೌಧದ ವರೆಗೆ ಕಾಲ್ನಡಿಗೆ ಜಾಥಾ

ವಿಧಾನಸೌಧದ ವರೆಗೆ ಕಾಲ್ನಡಿಗೆ ಜಾಥಾ

ಕುರುಬ ಸಮುದಾಯದ ನಂತರ ರಾಜ್ಯದ ಪ್ರಬಲ ಪಂಚಮಶಾಲಿಯವರು 2A ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಭಾನುವಾರ (ಫೆ 21) ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾರೀ ಶಕ್ತಿ ಪ್ರದರ್ಶನವನ್ನು ಮಾಡಿ, ವಿಧಾನಸೌಧದ ವರೆಗೆ ಕಾಲ್ನಡಿಗೆ ಜಾಥಾವನ್ನು ನಡೆಸಿದ್ದಾರೆ. ಮೀಸಲಾತಿ ಪ್ರಕಟಿಸಲು ಮಾರ್ಚ್ ನಾಲ್ಕರ ಗಡುವನ್ನೂ ಸಿಎಂ ಬಿಎಸ್ವೈಗೆ ನೀಡಿದ್ದಾರೆ.

ಈಶ್ವರಪ್ಪ ಮತ್ತು ಬಸನಗೌಡ ಪಾಟೀಲ್ ಯತ್ನಾಳ್

ಈಶ್ವರಪ್ಪ ಮತ್ತು ಬಸನಗೌಡ ಪಾಟೀಲ್ ಯತ್ನಾಳ್

ಕುರುಬ ಮತ್ತು ಪಂಚಮಶಾಲಿ ಸಮುದಾಯದ ಹೋರಾಟ ಯಡಿಯೂರಪ್ಪನವರಿಗೆ ಸಂಕಷ್ಟ ತಂದೊಡ್ಡುತ್ತಿರುವುದಕ್ಕೆ ಕಾರಣ ಇಲ್ಲದಿಲ್ಲ. ರಾಜಕೀಯವಾಗಿ ಈ ಎರಡು ಹೋರಾಟದ ನೇತೃತ್ವ ವಹಿಸಿರುವುದು ಈಶ್ವರಪ್ಪ ಮತ್ತು ಬಸನಗೌಡ ಪಾಟೀಲ್ ಯತ್ನಾಳ್. ಹಾಗಾಗಿ, ಇವರ ಹೋರಾಟ ರಾಜ್ಯ ಮತ್ತು ಕೇಂದ್ರದಲ್ಲಿ ತಮ್ಮದೇ ಪಕ್ಷದ ವಿರುದ್ದದೇ ಎನ್ನುವ ಪ್ರಶ್ನೆ ಸಾರ್ವಜನಿಕವಾಗಿ ಕಾಡುವುದು ಸಹಜ. ಹಾಗಾಗಿ, ವಿರೋಧ ಪಕ್ಷದವರಿಗೆ ಇದೇ ಪ್ಲಸ್ ಪಾಯಿಂಟ್.

ವರಿಷ್ಠರ ಫರ್ಮಾನಿನ ನಂತರವೂ ಈ ಬೆಳವಣಿಗೆ

ವರಿಷ್ಠರ ಫರ್ಮಾನಿನ ನಂತರವೂ ಈ ಬೆಳವಣಿಗೆ

ಒಂದು ಸಮುದಾಯವನ್ನು ಮೀಸಲಾತಿ ಅಡಿಯಲ್ಲಿ ತರಬೇಕಾದರೆ ಅದು ಕೇಂದ್ರದ ಅನುಮೋದನೆಯ ನಂತರವೇ ಸಾಧ್ಯ. ಆದರೆ, ಬಿಜೆಪಿಯವರೇ ಪ್ರಮುಖವಾಗಿ ಯತ್ನಾಳ್ ಅವರು ಯಡಿಯೂರಪ್ಪನವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ನಾಟಕವಾಡಬೇಡಿ ಎಂದು ತಮ್ಮದೇ ಪಕ್ಷದ ಸಿಎಂಗೆ, ಅದೂ ತುಂಬಿದ ಅರಮನೆಯ ಮೈದಾನದಲ್ಲಿ ಕಿಡಿಕಾರುತ್ತಿದ್ದಾರೆ. ಬಿಜೆಪಿಯವರು ಮೀಸಲಾತಿ ಹೋರಾಟದಲ್ಲಿ ಕಾಣಿಸಿಕೊಳ್ಳಬಾರದು ಎನ್ನುವ ವರಿಷ್ಠರ ಫರ್ಮಾನಿನ ನಂತರವೂ ಈ ಬೆಳವಣಿಗೆ ನಡೆಯುತ್ತಿದೆ.

ಬಿಎಸ್ವೈ ವೃತ್ತಿ ಜೀವನದಲ್ಲೇ ಇದು ಕ್ಲಿಷ್ಟಕರ ಪರಿಸ್ಥಿತಿ

ಬಿಎಸ್ವೈ ವೃತ್ತಿ ಜೀವನದಲ್ಲೇ ಇದು ಕ್ಲಿಷ್ಟಕರ ಪರಿಸ್ಥಿತಿ

"ನನ್ನ ವೃತ್ತಿ ಜೀವನದಲ್ಲಿ ಇಂತಹ ಹಲವು ಕಷ್ಟದ ಸಮಯವನ್ನು ನಾನು ನೋಡಿದ್ದೇನೆ, ಎಲ್ಲವನ್ನೂ ನಿಭಾಯಿಸುತ್ತೇನೆ"ಎನ್ನುವ ವಿಶ್ವಾಸದ ಮಾತನ್ನು ಯಡಿಯೂರಪ್ಪನವರು ಆಡಿದ್ದಾರೆ. ಆದರೆ, ಈಗ ನಡೆಯುತ್ತಿರುವ ಮೀಸಲಾತಿ ಹೋರಾಟ ಅಷ್ಟು ಸುಲಭವಾಗಿ ಪರಿಹಾರ ಸಿಗುವಂತದಲ್ಲ. ಒಂದು ವೇಳೆ, ಕುರುಬ ಮತ್ತು ಪಂಚಮಶಾಲಿ ಸಮುದಾಯದ ಹೋರಾಟಕ್ಕೆ ಬಿಎಸ್ವೈ ಮಣಿದರೆ, ಒಕ್ಕಲಿಗ ಮತ್ತು ವಾಲ್ಮೀಕಿ ಸಮುದಾಯದವರು ಸುಮ್ಮನಿರುತ್ತಾರೆಯೇ? ಹಾಗಾಗಿ, ಬಿಎಸ್ವೈ ಅವರ ರಾಜಕೀಯ ವೃತ್ತಿ ಜೀವನದಲ್ಲೇ ಇದು ಕ್ಲಿಷ್ಟಕರ ಪರಿಸ್ಥಿತಿ ಎಂದು ವ್ಯಾಖ್ಯಾನಿಸಬಹುದು.

English summary
Reservation Protest In Full Swing In Karnataka: Testing Time For CM Yediyurappa,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X