ಕರ್ನಾಟಕದ 23 ಪೊಲೀಸರಿಗೆ ರಾಷ್ಟ್ರಪತಿ ಪದಕ

Posted By:
Subscribe to Oneindia Kannada

ಬೆಂಗಳೂರು, ಜನವರಿ 25 : 67ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ಪದಕಗಳನ್ನು ಪ್ರಕಟಿಸಲಾಗಿದೆ. ಕರ್ನಾಟಕ 23 ಪೊಲೀಸ್ ಅಧಿಕಾರಿಗಳಿಗೆ 2016ನೇ ಸಾಲಿನ ಪದಕ ಲಭಿಸಿದೆ. ಮೂವರಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಲಭಿಸಿದೆ.

ಸೋಮವಾರ ಸಂಜೆ ರಾಷ್ಟ್ರಪತಿಗಳ ಪದಕಗಳನ್ನು ಪಡೆದವರ ಪಟ್ಟಿ ಪ್ರಕಟಿಸಲಾಗಿದೆ. ವಿಶಿಷ್ಟ ಸೇವೆಗಾಗಿ ನೀಡುವ ರಾಷ್ಟ್ರಪತಿಗಳ ಪದಕಗಳನ್ನು ಕಲಬುರಗಿ ವಲಯದ ಪೊಲೀಸ್ ಮಹಾನಿರ್ದೇಶಕ ಸುನಿಲ್ ಅಗರ್‌ವಾಲ್‌, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ, ತುಮಕೂರು ಲೋಕಾಯುಕ್ತ ಎಸ್ಪಿ ಕೆ.ಎಚ್.ಜಗದೀಶ್ ಅವರಿಗೆ ನೀಡಲಾಗಿದೆ. [ಬೆಂಗಳೂರು : ಗಣರಾಜ್ಯೋತ್ಸವ ಭದ್ರತೆಗೆ 5 ಸಾವಿರ ಪೊಲೀಸ್]

karnataka police

ಪೊಲೀಸ್ ಪದಕ ಪಡೆದವರ ಪಟ್ಟಿ

* ಎಂ.ಚಂದ್ರಶೇಖರ್, ಜಂಟಿ ಆಯುಕ್ತ ಬೆಂಗಳೂರು
* ಡಿ.ರೂಪಾ ಜಂಟಿ ಆಯುಕ್ತೆ (ಗುಪ್ತಚರ ವಿಭಾಗ), ಬೆಂಗಳೂರು
* ಡಿಸಿಪಿ ನಾರಾಯಣ್ ಬಿರ್ಜೆ, ಡಿಸಿಪಿ ಕ್ರೈಂ, ಮೈಸೂರು
* ಎನ್.ಸಿ.ಶಂಕರಯ್ಯ, ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ
* ಎಸ್‌.ಎಚ್.ದುಗ್ಗಪ್ಪ, ಎಸಿಪಿ ಏರ್ ಪೋರ್ಟ್ ವಿಭಾಗ
* ರಾಮಲಿಂಗಪ್ಪ ಗಿರಿಜೇಶ್, ದೇವರಾಜ ಠಾಣೆ ಸಬ್ ಇನ್ಸ್‌ಪೆಕ್ಟರ್
* ಮದನ್ ಗಾಂವ್ಕರ್, ಎಸಿಪಿ ಮಂಗಳೂರು ಉತ್ತರ ವಲಯ
* ಎಸ್‌.ಡಿ.ವೆಂಕಟಸ್ವಾಮಿ, ಡಿವೈಎಸ್ಪಿ ಕರ್ನಾಟಕ ಲೋಕಾಯುಕ್ತ
* ಎಂ.ಎಸ್.ಬುಳ್ಳಕ್ಕನವರ್, ಸಹಾಯಕ ನಿರ್ದೇಶಕ ಕೆಪಿಎ ಮೈಸೂರು
* ಶಂಭುಲಿಂಗಪ್ಪ, ಡಿವೈಎಸ್ಪಿ ಕಾರವಾರ
* ದಯಾನಂದ್, ಡಿವೈಎಸ್ಪಿ ದಾಂಡೇಲಿ ಉಪ ವಿಭಾಗ
* ರಾಜೀವ್ ಸಿದ್ದರಾಮ್, ಎಸಿಪಿ ಬೆಳಗಾವಿ ನಗರ
* ರಾಮ್ ಸುಬ್ಬು, ಚಿತ್ರದುರ್ಗ ಕಂಟ್ರೋಲ್ ರೂಂ
* ಬಿ.ಪುಟ್ಟಯ್ಯ, ಪಿಎಸ್‌ಐ ಗುಪ್ತಚರ ಇಲಾಖೆ
* ಎಚ್.ಬಿ.ಜ್ಞಾನೇಂದ್ರ, ಎಎಸ್‌ಐ ಮಾಲೂರು ಠಾಣೆ
* ಎಸ್‌.ಐ.ಚಿನ್ನಪ್ಪ, ಕೆಎಸ್‌ಆರ್‌ಪಿ ಬೆಂಗಳೂರು
* ಎಸ್‌.ಜಿ.ರಾಮಕೃಷ್ಣ, ಕೆಎಸ್‌ಆರ್‌ಪಿ ಬೆಂಗಳೂರು
* ಎಲ್‌.ಎಂ.ಹುಲಿಯಪ್ಪ, ಕೆಎಸ್ಆರ್‌ಪಿ ಮೈಸೂರು
* ತಿಮ್ಮಪ್ಪ ಗೌಡ, ಕೆಎಸ್‌ಆರ್‌ಪಿ ಶಿವಮೊಗ್ಗ
* ಎಂ.ವಿ.ಶ್ರೀನಿವಾಸ, ಮುಖ್ಯಪೇದೆ ಸಿಸಿಬಿ ಬೆಂಗಳೂರು

police

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
23 Karnataka police officials have been awarded the president's police medal in the on the occasion of the Republic Day 2016.
Please Wait while comments are loading...