
ಕರ್ನಾಟಕ; 16,387 ಹೊಸ ಕೋವಿಡ್ ಪ್ರಕರಣ ದಾಖಲು
ಬೆಂಗಳೂರು, ಜೂನ್ 02; ಕರ್ನಾಟಕದಲ್ಲಿ 24 ಗಂಟೆಯಲ್ಲಿ 16,387 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 21,199 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 463 ಜನರು ಸಾವನ್ನಪ್ಪಿದ್ದಾರೆ.
ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ ಒಟ್ಟು ಪ್ರಕರಣಗಳ ಸಂಖ್ಯೆ 2635122. ರಾಜ್ಯದ ಸಕ್ರಿಯ ಪ್ರಕರಣಗಳು 2,93,024. ಇದುವರೆಗೂ 2312060 ಜನರು ಗುಣಮುಖರಾಗಿದ್ದಾರೆ. ಒಟ್ಟು ಮೃತಪಟ್ಟವರು 30017.
Stories Of Strength: ದಾವಣಗೆರೆಯಲ್ಲಿ ಕೋವಿಡ್ ಗೆದ್ದ 16 ನವಜಾತ ಶಿಶುಗಳು
ಇಲಾಖೆಯ ಮಾಹಿತಿ ಪ್ರಕಾರ 38077 ಆಂಟಿಜೆನ್, 107846 ಆರ್‌ಟಿಪಿಸಿಆರ್ ಸೇರಿದಂತೆ 145923 ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ. ರಾಜ್ಯದ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ 11.22.
ಕೋವಿಡ್ ನಿಯಂತ್ರಣಕ್ಕೆ ಈ ಗ್ರಾಮ ಪಂಚಾಯಿತಿ ಮಾದರಿ!
ಯಾವ ಜಿಲ್ಲೆ ಎಷ್ಟು?; ಬೆಂಗಳೂರು ನಗರದಲ್ಲಿ 4095 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 307 ಜನರು ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 1170742. ಸಕ್ರಿಯ ಪ್ರಕರಣಗಳು 138870.
ಬೀದರ್ ಜಿಲ್ಲೆಯಲ್ಲಿ ಕೋವಿಡ್ ಇಳಿಕೆ; ಅಸಲಿ ಕಥೆಯೇ ಬೇರೆ
ಬಾಗಲಕೋಟೆ 262. ಬಳ್ಳಾರಿ 525. ಬೆಳಗಾವಿ 1006. ಬೆಂಗಳೂರು ಗ್ರಾಮಾಂತರ 164. ಬೀದರ್ 23. ಚಾಮರಾಜನಗರ 258. ಚಿಕ್ಕಬಳ್ಳಾಪುರ 360. ಚಿಕ್ಕಮಗಳೂರು 214. ಚಿತ್ರದುರ್ಗ 483. ದಕ್ಷಿಣ ಕನ್ನಡ 618. ದಾವಣಗೆರೆ 535. ಧಾರವಾಡ 245. ಗದಗ 285. ಹಾಸನ 520. ಹಾವೇರಿ 79 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ.
ಕಲಬುರಗಿ 117. ಕೊಡಗು 298. ಕೋಲಾರ 389. ಕೊಪ್ಪಳ 295. ಮಂಡ್ಯ 711. ಮೈಸೂರು 1687. ರಾಯಚೂರು 249. ರಾಮನಗರ 165. ಶಿವಮೊಗ್ಗ 548. ತುಮಕೂರು 882. ಉಡುಪಿ 636. ಉತ್ತರ ಕನ್ನಡ 465. ವಿಜಯಪುರ 166. ಯಾದಗಿರಿ 116 ಹೊಸ ಪ್ರಕರಣ ದಾಖಲಾಗಿದೆ.