ಶಕ್ತಿ ಯೋಜನೆ: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಉಡುಪಿಯಲ್ಲಿ ಹೆಚ್ಚಿದ ಮಹಿಳಾ ಭಕ್ತಾದಿಗಳ ಸಂಖ್ಯೆ
ಬೆಂಗಳೂರು, ಜೂನ್.14: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ತನ್ನ ಗ್ಯಾರಂಟಿಗಳಲ್ಲಿ ಒಂದಾದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುವ 'ಶಕ್ತಿ' ಯೋಜನೆಯನ್ನು ಜಾರಿಗೆ ತಂದಿದೆ. ಯೋಜನೆ ಚಾಲನೆ ದೊರೆತ ಬೆನ್ನಲ್ಲೇ ಕರ್ನಾಟಕದ ಧಾರ್ಮಿಕ ಸ್ಥಳಗಳು ಪ್ರಯಾಣಿಕರ ಹಠಾತ್ ಪ್ರವಾಹವನ್ನು ನೋಡುತ್ತಿವೆ.
ರಾಜ್ಯದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಉಡುಪಿ ಮತ್ತು ಪ್ರಮುಖ ದೇವಾಲಯಗಳಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದ್ದು, ಅದರಲ್ಲಿ ಹೆಚ್ಚಾಗಿ ಮಹಿಳೆಯರೇ ಇದ್ದಾರೆ. ಈ ಸ್ಥಳಗಳಿಗೆ ಹೋಗಲು ಹೆಚ್ಚು ಮಂದಿ ಮುಂದಾಗುತ್ತಿದ್ದು, ಇದು ವಾಹನಗಳ ಕೊರತೆ ಮತ್ತು ಕೋಪಕ್ಕೆ ಕಾರಣವಾಗಿದೆ. ಯೋಜನೆಯ ಅನಿರೀಕ್ಷಿತ ಘಟನೆಗಳು ಹೆಚ್ಚು ಸಂಚಲನವನ್ನು ಉಂಟುಮಾಡಿದೆ.

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಡುಪಿಗೆ ಹೆಚ್ಚಿನ ಬಸ್‌ಗಳ ಬೇಡಿಕೆಯಿದೆ ಎಂದು ಕಿತ್ತೂರು ಕರ್ನಾಟಕ ಪ್ರದೇಶದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ) ಕನಿಷ್ಠ ಎರಡು ವಿಭಾಗದ ನಿಯಂತ್ರಕರು ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದ್ದಾರೆ. ವಾರಾಂತ್ಯ ಮತ್ತು ಸೋಮವಾರದಂದು ದಟ್ಟಣೆ ದುಪ್ಪಟ್ಟು ಹೆಚ್ಚಿದ್ದು, ಧರ್ಮಸ್ಥಳ-ಸುಬ್ರಹ್ಮಣ್ಯ ಮಾರ್ಗದಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಧರ್ಮಸ್ಥಳ ಬಸ್ ನಿಲ್ದಾಣದ ಮೂಲಗಳು ತಿಳಿಸಿವೆ.
ಸೋಮವಾರ ಮತ್ತು ಮಂಗಳವಾರ ಬಸ್ ನಿಲ್ದಾಣದಲ್ಲಿ ಜನಸಂದಣಿ ನಿಯಂತ್ರಿಸಲಾಗಲಿಲ್ಲ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಸ್ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯ ಕೇಳಿ ಬಂದಿದೆ. 45 ಪುರುಷರಿದ್ದರೇ ಸುಮಾರು 110 ರಿಂದ 120 ಮಹಿಳೆಯರು ಬಸ್‌ಗಾಗಿ ಕಾಯುತ್ತಿದ್ದರು ಎಂದು ಕೆಎಸ್‌ಆರ್‌ಟಿಸಿಯ ಧರ್ಮಸ್ಥಳ ಡಿಪೋದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹಿಂದೆ, ಈ ಅನುಪಾತವು "ಪುರುಷರ ಪರವಾಗಿ 60:40" ಇತ್ತು. ಈಗ ಹೆಚ್ಚಾಗಿದೆ ಎಂದು ಅಧಿಕಾರಿ ಹೇಳಿದರು. ಇನ್ನು ಮುಂದೆ ಪರಿಸ್ಥಿತಿ ನಿಯಂತ್ರಣ ತಪ್ಪದಂತೆ ಬಾರದಂತೆ ನೋಡಿಕೊಳ್ಳಲು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಅವರನ್ನು ಉಲ್ಲೇಕಿಸಿರುವ ಡೆಕ್ಕನ್ ಹೆರಾಲ್ಡ್, "ಬೇಸಿಗೆ ರಜೆಯಲ್ಲಿ ದಟ್ಟಣೆ ಹೆಚ್ಚಾಗಿರುತ್ತದೆ. ಸೋಮವಾರ, ನಾವು ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ನಡುವೆ ಹೆಚ್ಚುವರಿ ಐದು ಬಸ್‌ಗಳನ್ನು ನಿಯೋಜಿಸಬೇಕಾಗಿತ್ತು. ಹೆಚ್ಚಿನ ಪ್ರಯಾಣಿಕರು ಮಹಿಳೆಯರು. ಸೀಮಿತ ಸಂಪನ್ಮೂಲಗಳಿರುವುದರಿಂದ ಈ ಮಾರ್ಗದಲ್ಲಿ ಬಸ್‌ಗಳನ್ನು ಬೇರೆಡೆಗೆ ತಿರುಗಿಸುವುದರಿಂದ ಈ ಪ್ರದೇಶದಲ್ಲಿ ಶಾಲಾ ಪ್ರವಾಸಗಳಿಗೆ ತೊಂದರೆಯಾಗಬಹುದು" ಎಂದು ಹೇಳಿದ್ದಾರೆ.
ಈ ಯೋಜನೆಗೆ ಚಾಲನೆ ನೀಡಿದ ನಂತರ ಉಡುಪಿಯಲ್ಲಿಯು ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಮಂಗಳೂರು ವಿಭಾಗದ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಮಾತನಾಡಿ, ಭಾನುವಾರ 940 ಮಹಿಳಾ ಪ್ರಯಾಣಿಕರು ಉಚಿತ ಬಸ್ ಸೇವೆಯನ್ನು ಬಳಸಿಕೊಂಡು ರಾಜ್ಯಾದ್ಯಂತ ಉಡುಪಿಗೆ ಬಂದಿದ್ದಾರೆ. ಸೋಮವಾರ ಉಡುಪಿಯಲ್ಲಿ 6,970 ಮಹಿಳೆಯರು ಇಳಿದಿದ್ದಾರೆ ಎಂದು ತಿಳಿಸಿದ್ದಾರೆ.
ಮಂಗಳೂರು ವಿಭಾಗವು ಎರಡು ದಿನ (ಭಾನುವಾರ ಮತ್ತು ಸೋಮವಾರ) ಸರ್ಕಾರಿ ಬಸ್‌ಗಳಲ್ಲಿ ಸುಮಾರು 25,464 ಮಹಿಳೆಯರು ಪ್ರಯಾಣಿಸಿದ್ದು, ಎಲ್ಲಾ ಪ್ರಯಾಣಿಕರನ್ನು ಲೆಕ್ಕ ಹಾಕಿದರೆ ವಿಭಾಗವು 11.96 ಲಕ್ಷ ರೂಪಾಯಿಗಳ ಆದಾಯವನ್ನು ಗಳಿಸಬಹುದು. ಹೆಚ್ಚಿನ ಸರ್ಕಾರಿ ಬಸ್‌ಗಳನ್ನು ಪ್ರಾರಂಭಿಸಲು ತಮ್ಮ ವಿಭಾಗವು ಭಾರಿ ಬೇಡಿಕೆಯನ್ನು ಪಡೆಯುತ್ತಿದೆ ಎಂದು ಹೇಳಿದ್ದಾರೆ.
(ಮಾಹಿತಿ ಕೃಪೆ: ಡೆಕ್ಕನ್ ಹೆರಾಲ್ಡ್)












Click it and Unblock the Notifications