ಮತೀಯ ಅಶಾಂತಿ: ಇದೇ ಮೊದಲ ಬಾರಿಗೆ ಕೋಡಿ ಶ್ರೀಗಳ ಪ್ರತಿಕ್ರಿಯೆ

ಹಿಜಾಬ್‌ನಿಂದ ಆರಂಭವಾಗಿರುವ ಜಾತಿ ವೈಷ್ಯಮ್ಯದ ಬಗ್ಗೆ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೊಗಿ ರಾಜೇಂದ್ರ ಸ್ವಾಮೀಜಿಗಳು ಇದೇ ಮೊದಲ ಬಾರಿಗೆ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.

ಯುಗಾದಿಯ ಸಂದರ್ಭದಲ್ಲಿ ವರ್ಷದ ಭವಿಷ್ಯ ನುಡಿದಿದ್ದ ಕೋಡಿಮಠದ ಶ್ರೀಗಳು ಮಾರ್ಮಿಕವಾಗಿ ಧಾರ್ಮಿಕ ಕಲಹದ ಬಗ್ಗೆ ಮಾತನ್ನಾಡಿದ್ದರು. ಜೊತೆಗೆ, ಈ ವರ್ಷ ಭಯಾನಕವಾಗಿರಲಿದೆ ಎಂದೂ ಶ್ರೀಗಳು ನುಡಿದಿದ್ದರು.

ಹಾಸನ ಜಿಲ್ಲೆ ಬೇಲೂರಿನಲ್ಲಿ ನಡೆದ ಶಾಂತಿ ಸೌಹಾರ್ದ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಕೋಡಿಮಠದ ಶ್ರೀಗಳು, "ಮಾನವೀಯ ಮೌಲ್ಯಕ್ಕೆ ಬೆಲೆ ಕೊಡಬೇಕಾಗುತ್ತದೆ. ಅದಿಲ್ಲದಿದ್ದರೆ ಅದು ಅಧರ್ಮವಾಗುತ್ತದೆ" ಎಂದು ಹೇಳಿದ್ದಾರೆ.

"ಭಾರತದ ಈ ಸಂವತ್ಸರದಲ್ಲಿ ಬಹುದೊಡ್ಡ ಅವಘಡ ನಡೆಯುತ್ತದೆ. ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುತ್ತಾರೆ. ಮುಂಗಾರು ಚೆನ್ನಾಗಿ ಆಗುತ್ತದೆ, ಹಿಂಗಾರು ಕಡಿಮೆ"ಎಂದು ಕೋಡಿಮಠದ ಶ್ರೀಗಳು ಕೆಲವು ದಿನಗಳ ಹಿಂದೆ ಯುಗಾದಿ ಭವಿಷ್ಯವನ್ನು ನುಡಿದಿದ್ದರು. ಸದ್ಯ ನಡೆಯುತ್ತಿರುವ ಧರ್ಮ ದಂಗಲ್ ಬಗ್ಗೆ ಕೋಡಿಶ್ರೀಗಳು ಹೇಳಿದ್ದೇನು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ

 ಮನುಷ್ಯನ ಅಭಿವೃದ್ದಿಯು ಮಾನವೀಯ ಮೌಲ್ಯವನ್ನು ಒಳಗೊಂಡಿರುತ್ತದೆ

ಮನುಷ್ಯನ ಅಭಿವೃದ್ದಿಯು ಮಾನವೀಯ ಮೌಲ್ಯವನ್ನು ಒಳಗೊಂಡಿರುತ್ತದೆ

"ಮನುಷ್ಯನ ಅಭಿವೃದ್ದಿಯು ಮಾನವೀಯ ಮೌಲ್ಯವನ್ನು ಒಳಗೊಂಡಿರುತ್ತದೆ. ಧರ್ಮ ಎನ್ನುವುದು ಕಿತ್ತಳೆ ಹಣ್ಣಿನಂತೆ, ಒಳಗೆ ತೊಳೆಗಳು ಸಣ್ಣದು, ದೊಡ್ಡದಾಗಿರುತ್ತದೆ. ಮೇಲೆ ಸಿಪ್ಪೆ ಎಲ್ಲವನ್ನೂ ಸುತ್ತಿಕೊಂಡು ಇರುತ್ತದೆ. ಸಣ್ಣ ತೊಳೆ, ದೊಡ್ಡ ತೊಳೆ, ಎರಡನ್ನೂ ರಕ್ಷಿಸುತ್ತದೆ. ಎಲ್ಲಾ ಹಣ್ಣುಗಳಿಗೂ ತೊಳೆಗಳಿದ್ದರೂ, ಕಿತ್ತಳೆ ಹಣ್ಣು ಎನ್ನುವುದು ಜಗತ್ತು ಇದ್ದಂತೆ"ಎಂದು ಮಾರ್ಮಿಕವಾಗಿ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ಶ್ರೀಗಳು, ಮತೀಯ ಅಶಾಂತಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

 ಸಿಪ್ಪೆ ಎನ್ನುವುದು ಧರ್ಮ, ತೊಳೆಗಳು ಜಾತಿ ಇದ್ದಂತೆ

ಸಿಪ್ಪೆ ಎನ್ನುವುದು ಧರ್ಮ, ತೊಳೆಗಳು ಜಾತಿ ಇದ್ದಂತೆ

"ಸಿಪ್ಪೆ ಎನ್ನುವುದು ಧರ್ಮ, ತೊಳೆಗಳು ಜಾತಿ ಇದ್ದಂತೆ. ಈ ಜಗತ್ತಿನಲ್ಲಿ ಹಲವು ಧರ್ಮಗಳಿವೆ, ಅವರವರು ಅವರ ಧರ್ಮವನ್ನು ಪಾಲಿಸಿಕೊಂಡು ಇರಲಿ, ಆದರೆ ಶಾಂತಿ, ಸಹಬಾಳ್ವೆ, ಸಮಾಧಾನ ಬಹಳ ಮುಖ್ಯವಾಗುತ್ತದೆ. ಎಲ್ಲರೂ ಆತ್ಮಾವಲೋಕನ ಮಾಡಿಕೊಂಡರೆ, ಈಗ ನಡೆಯುತ್ತಿರುವುದು ಯಾವುದು ಸರಿ, ಯಾವುದು ತಪ್ಪು ಎನ್ನುವುದು ಅರ್ಥವಾಗುತ್ತದೆ. ಎಲ್ಲಾ ಜಾತಿ, ಧರ್ಮದವರು ಒಟ್ಟಾಗಿ ಬಾಳಬೇಕಾಗುತ್ತದೆ"ಎಂದು ಕೋಡಿಮಠದ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.

 ಪ್ರೀತಿ ವಿಶ್ವಾಸದಿಂದ ಬಾಳಬೇಕಾಗಿದೆ. ನಮ್ಮ ಸಂವಿಧಾನವೂ ಅದನ್ನೇ ಹೇಳುತ್ತದೆ

ಪ್ರೀತಿ ವಿಶ್ವಾಸದಿಂದ ಬಾಳಬೇಕಾಗಿದೆ. ನಮ್ಮ ಸಂವಿಧಾನವೂ ಅದನ್ನೇ ಹೇಳುತ್ತದೆ

"ಮುಂದೆ ಗುಂಪುಗಳಾಗುತ್ತದೆ ಎನ್ನುವುದನ್ನು ಹೇಳಿದ್ದೇನೆ, ಎಲ್ಲರೂ ಪ್ರೀತಿ ವಿಶ್ವಾಸದಿಂದ ಬಾಳಬೇಕಾಗಿದೆ. ನಮ್ಮ ಸಂವಿಧಾನವೂ ಅದನ್ನೇ ಹೇಳುತ್ತದೆ, ಹಾಗಾಗಿ, ಎಲ್ಲಾ ಧರ್ಮದವರಿಗೆ ಸುಖ, ಧೈರ್ಯ, ಶಾಂತಿ ಬೇಕಾಗಿದೆ. ಎಲ್ಲರೂ ಆತ್ಮಾವಲೋಚನೆ ಮಾಡಿಕೊಳ್ಳಲಿ ಎಂದು ಈ ಸದ್ಭಾವನಾ ಸಭೆಯಲ್ಲಿ ನಾನು ಹೇಳಲು ಬಯಸುತ್ತೇನೆ"ಎಂದು ಕೋಡಿಮಠದ ಶ್ರೀಗಳು ಹೇಳುವ ಮೂಲಕ, ಈಗ ನಡೆಯುತ್ತಿರುವ ಮತೀಯ ಬಿಕ್ಕಟ್ಟಿಗೆ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ.

 ಮತೀಯ ಅಶಾಂತಿ, ಮೊದಲ ಬಾರಿಗೆ ಕೋಡಿಮಠದ ಶ್ರೀಗಳ ಪ್ರತಿಕ್ರಿಯೆ

ಮತೀಯ ಅಶಾಂತಿ, ಮೊದಲ ಬಾರಿಗೆ ಕೋಡಿಮಠದ ಶ್ರೀಗಳ ಪ್ರತಿಕ್ರಿಯೆ

"ಸಮಾಜದಲ್ಲಿ ಸುಂದರವಾದ ಹೆಣ್ಣುಮಕ್ಕಳ ಅಂಗಾಂಗಳನ್ನು ಕಿತ್ತು ತಿನ್ನುತ್ತಾರೆ. ರಾಜಕೀಯ ವಿಪ್ಲವಾಗುತ್ತದೆ, ರಾಜಕೀಯ ಗುಂಪುಗಳಾಗುತ್ತವೆ. ದೇಶದಲ್ಲಿ ಅಶಾಂತಿ, ಮತೀಯಗಲಭೆ, ದೊಂಬಿಗಳು ಹೆಚ್ಚಾಗಿ ಸಾವು-ನೋವುಗಳು ಕೊಲೆಗಳಾಗುತ್ತವೆ. ಅಶಾಂತಿ, ಮತೀಯಗಲಭೆ, ದೊಂಬಿಗಳು, ಸಾವು-ನೋವುಗಳು ಕೊಲೆಗಳಾಗುತ್ತವೆ. ವಿಶೇಷವಾಗಿ ಎಲೆಕ್ಟ್ರಿಕ್‍ನಿಂದ ಅಪಾಯವಿದೆ"ಎಂದು ಕೋಡಿಮಠದ ಶ್ರೀಗಳು ಯುಗಾದಿ - 202ರ ಭವಿಷ್ಯ ನುಡಿದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+