• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಳಿಕೆಯಾದ ಈರುಳ್ಳಿ ಬೆಲೆ, ಗ್ರಾಹಕನ ನಿಟ್ಟುಸಿರು, ಸದ್ಯದ ದರವೆಷ್ಟು?

|

ಬೆಂಗಳೂರು, ಡಿಸೆಂಬರ್ 02: ಕಳೆದ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ 100 ರೂ, ಮಾರುತ್ತಿದ್ದ ಈರುಳ್ಳಿ ದರ, ಈ ವಾರ 70 ರಿಂದ 80 ರೂ, ಗೆ ಇಳಿದಿದೆ. ಮಹಾರಾಷ್ಟ್ರದ ನಾಸಿಕ್ ಮತ್ತು ಪುಣೆಯಿಂದ ಈರುಳ್ಳಿ ಪೂರೈಕೆಯಾಗುತ್ತಿದ್ದರಿಂದ ದರದಲ್ಲಿ ಇಳಿಕೆ ಕಂಡಿದೆ.

ಒಂದು ತಿಂಗಳ ಹಿಂದೆ 50 ರೂ, ಇದ್ದ ಈರುಳ್ಳಿ ಬೆಲೆ, ಕಳೆದೆರಡು ವಾರದಿಂದ ಏಕಾಏಕಿ ಏರಿಕೆಯಾಗಿತ್ತು, ಮಹಾರಾಷ್ಟ್ರದಿಂದ ರಾಜ್ಯಕ್ಕೆ ಪೂರೈಕೆಯಾಗುತ್ತಿದ್ದಂತೆ ಈರುಳ್ಳಿ ಬೆಲೆಯಲ್ಲಿ ಇಳಿಕೆ ಕಂಡಿದೆ. ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದೆ.

ಈರುಳ್ಳಿ ದರ ಯಾವಾಗ ಕಡಿಮೆಯಾಗುತ್ತೆ? ಇಲ್ಲಿದೆ ಮಾಹಿತಿ

ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಈರುಳ್ಳಿ ಬೆಲೆ ನಾಶವಾಗಿತ್ತು, ಆಗ ರಾಜ್ಯದಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆ ಇರಲಿಲ್ಲ. ಈಗ ನಾಸಿಕ್ ನಿಂದ ಕರ್ನಾಟಕಕ್ಕೆ ಬರುತ್ತಿರುವುದರಿಂದ ದರದಲ್ಲಿ ಇಳಿಕೆ ಕಂಡಿದೆ.

ಇತ್ತೀಚಿಗೆ ಇರುಳ್ಳಿ ಬಳಕೆಯಲ್ಲಿ ಇಳಿಕೆಯಾಗಿತ್ತು

ಇತ್ತೀಚಿಗೆ ಇರುಳ್ಳಿ ಬಳಕೆಯಲ್ಲಿ ಇಳಿಕೆಯಾಗಿತ್ತು

ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಈರುಳ್ಳಿ ಬೆಲೆ ನಾಶವಾಗಿತ್ತು, ಆಗ ರಾಜ್ಯದಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆ ಇರಲಿಲ್ಲ. ಈಗ ನಾಸಿಕ್ ನಿಂದ ಕರ್ನಾಟಕಕ್ಕೆ ಬರುತ್ತಿರುವುದರಿಂದ ದರದಲ್ಲಿ ಇಳಿಕೆ ಕಂಡಿದೆ.

ಹದಿನೈದು ದಿನಗಳಿಂದ ಈರುಳ್ಳಿ ಖರೀದಿಸಲು ಹೋದಾಗ ಗ್ರಾಹಕರು ಬೆಚ್ಚಿಬಿದ್ದಿದ್ದರು. ಸಸ್ಯಾಹಾರಿ ಮತ್ತು ಮಾಂಸಾಹಾರಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿಯ ಅವಶ್ಯಕತೆ ಇರುವುದರಿಂದ ಸಾಮಾನ್ಯವಾಗಿ ಈರುಳ್ಳಿಗೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಬೇಡಿಕೆ ತಕ್ಕುದಾಗಿ ಉತ್ಪಾದನೆ ಇಲ್ಲದಿದ್ದರೆ ಬೆಲೆ ಹೆಚ್ಚಾಗುವುದು ಖಚಿತ.

ಗ್ರಾಹಕರಲ್ಲಿ ನೆಮ್ಮದಿ ತಂದ ಬೆಲೆ ಇಳಿಕೆ

ಗ್ರಾಹಕರಲ್ಲಿ ನೆಮ್ಮದಿ ತಂದ ಬೆಲೆ ಇಳಿಕೆ

ಈ ಭಾನುವಾರ ಮಾರುಕಟ್ಟೆಯ ಸಂತೆಗಳಲ್ಲಿ ಈರುಳ್ಳಿಯ ದರ ಕಡಿಮೆ ಕಂಡುಬಂದಿತು. ಸದ್ಯ ಗ್ರಾಹಕರಲ್ಲಿ ನೆಮ್ಮದಿಯಾಗಿ ಈರುಳ್ಳಿ ಖರೀದಿಸುವ ಭಾವ ಮೂಡಿದೆ. 70 ರಿಂದ 80 ರೂ, ಸಹ ದೊಡ್ಡ ಮೊತ್ತವಾಗಿದ್ದು, ಇನ್ನೂ ಕಡಿಮೆಯಾಗಲಿ ಎಂದು ಗ್ರಾಹಕರು ಎದುರು ನೋಡುತ್ತಿದ್ದಾರೆ.

ಈರುಳ್ಳಿಯ ಬೆಲೆ ಏರಿಕೆಯಾಗಿದ್ದರಿಂದ ಹೋಟೆಲ್ ಮತ್ತು ಮನೆಗಳಲ್ಲಿ ಅದರ ಬಳಕೆ ಕಡಿಮೆ ಇತ್ತು, ಈರುಳ್ಳಿ ಬಳಸುವ ಪದಾರ್ಥವನ್ನೇ ತಯಾರಿಸುವನ್ನು ನಿಲ್ಲಿಸಿದ್ದರು, ಮತ್ತು ಕಡಿಮೆ ಉಪಯೋಗಿಸುತ್ತಿದ್ದರು. ಹೋಲ್ ಸೇಲ್ ಗಳಲ್ಲಿ ಖರೀದಿಸಿದರೂ ಹೋಟೆಲ್ ನವರಿಗೆ ನಷ್ಟವಾಗುತ್ತಿತ್ತು. ಹೀಗಾಗಿ ಎಷ್ಟು ಅಗತ್ಯವಿತ್ತೋ ಅಷ್ಟನ್ನೇ ಮಾತ್ರ ಬಳಸುತ್ತಿದ್ದರು.

ಟರ್ಕಿಯಿಂದ ಈರುಳ್ಳಿ ಆಮದು ಮಾಡಿಕೊಳ್ಳಲು ಕೇಂದ್ರ ನಿರ್ಧಾರ

ಟರ್ಕಿಯಿಂದ ಈರುಳ್ಳಿ ಆಮದು ಮಾಡಿಕೊಳ್ಳಲು ಕೇಂದ್ರ ನಿರ್ಧಾರ

ಸದ್ಯ ಉತ್ತರ ಕರ್ನಾಟಕ ಭಾಗ ನೆರೆಯಿಂದ ವಿಮುಖವಾಗಿದ್ದು, ಅಲ್ಲಿಂದನೂ ಈರುಳ್ಳಿ ಸರಬರಾಜು ಆಗಲಿದೆ. ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಈರುಳ್ಳಿ ಪೂರೈಕೆಯಲ್ಲಿ ಏರಿಕೆ ಕಂಡುಬಂದಲ್ಲಿ ದರವೂ ಕೂಡಾ ಇಳಿಯಲಿದೆ. ಇನ್ನು ಒಂದು ವಾರ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾದಲ್ಲಿ ದರವೂ ಕೂಡಾ ಸಹಜ ಸ್ಥಿತಿಗೆ ಮರಳಲಿದೆ.

ಅಲ್ಲದೇ ಈಗ ಕೇಂದ್ರ ಸರ್ಕಾರವು ಕೂಡಾ ಈರುಳ್ಳಿ ದರವನ್ನು ಹತೋಟಿಗೆ ತರಲು ಟರ್ಕಿ ದೇಶದಿಂದ 11 ಸಾವಿರ ಟನ್ ಗಳಷ್ಟು ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. ಗ್ರಾಹಕರು ಹೆಚ್ಚಿನ ಬೆಲೆಯ ದರ ಕೊಟ್ಟು ಈರುಳ್ಳಿ ಖರೀದಿಸುತ್ತಿಲ್ಲ, ಅಲ್ಲದೇ ಅಲ್ಲಲ್ಲಿ ಸರ್ಕಾರ ವಿರುದ್ದ ಪ್ರತಿಭಟನೆಗಳು ನಡೆಯುತ್ತಿವೆ.

ಈರುಳ್ಳಿ ಬೆಲೆ ಏರಿಕೆಯಾಗುತ್ತಿರುವುದಕ್ಕೆ ಕಾರಣವೇನು?

ಸಾಮಾಜಿಕ ಜಾಲತಾಣಗಳಲ್ಲಿ ಈರುಳ್ಳಿ ಸಖತ್ ಟ್ರೋಲ್

ಸಾಮಾಜಿಕ ಜಾಲತಾಣಗಳಲ್ಲಿ ಈರುಳ್ಳಿ ಸಖತ್ ಟ್ರೋಲ್

ಈ ಮೊದಲೇ ಕೇಂದ್ರ ಸರ್ಕಾರ ಈರುಳ್ಳಿ ರಫ್ತು ಮಾಡುವುದನ್ನು ನಿಷೇಧಿಸಲಾಗಿತ್ತು, ನಂತರ ಅದನ್ನು ಮುಂದಿನ ಫೆಬ್ರವರಿ ವರೆಗೂ ವಿಸ್ತರಿಸಲಾಗಿತ್ತು.

ಈಗ ಈರುಳ್ಳಿ ಪೂರೈಕೆಯಲ್ಲಿ ಏರುಗತಿ ಕಂಡುಬಂದಿದ್ದು, ಬೆಲೆಯೂ ಕೂಡಾ ಇಳಿಯಲಿದೆ ಎನ್ನಬಹುದು. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯುತ್ತಾರೆ.

ಇರುಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದರಿಂದ ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಈರುಳ್ಳಿಗೆ ಬಂಗಾರದ ಬೆಲೆ ಇದೆ ಜೋಪಾನವಾಗಿ ಇಟ್ಟುಕೊಳ್ಳಿ ಮತ್ತು ಈರುಳ್ಳಿಗೆ ಹೆಚ್ಚಿನ ಭದ್ರತೆ ಕೊಡಿ ಎಂದು ಟ್ರೋಲ್ ಆಗಿದ್ದವು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Onion Prices, Which Have Been Selling In The Market For The Past Few Days, Have Dropped From Rs 70 to Rs 80 This Week. Onion Supply From Nashik and Pune In Maharashtra Has Declined.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more