ಕರ್ನಾಟಕಕ್ಕೆ ಬಂತು 5.76 ಲಕ್ಷ ಡೋಸ್ ಕೋವಿಶೀಲ್ಡ್
ಬೆಂಗಳೂರು, ಜೂನ್ 01; ಕರ್ನಾಟಕದಲ್ಲಿ ಕೋವಿಡ್ ಲಸಿಕೆಯ ಕೊರತೆ ಇಲ್ಲ ಎಂದು ಸಚಿವರು ಹೇಳುತ್ತಿದ್ದಾರೆ. ಆದರೆ ಲಸಿಕೆ ಸಿಗುತ್ತಿಲ್ಲ ಎಂದು ಜನರು ದೂರುವುದು ಮುಂದುವರೆದಿದೆ. ಅದರಲ್ಲೂ 18-44 ವಯೋಮಿತಿ ಜನರಿಗೆ ಲಸಿಕೆ ಸಿಗುತ್ತಿಲ್ಲ.
ಮಂಗಳವಾರ ಕೇಂದ್ರ ಸರ್ಕಾರದ ಕೋಟಾದಡಿಯಲ್ಲಿ 5.76 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಕರ್ನಾಟಕಕ್ಕೆ ಬಂದಿದೆ. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಟ್ವೀಟ್ ಮಾಡಿದ್ದು, ಲಸಿಕೆಯನ್ನು ಪೂರೈಸಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ರಷ್ಯಾದಿಂದ ಹೈದ್ರಾಬಾದಿಗೆ ಬಂತು 30 ಲಕ್ಷ ಡೋಸ್ ಸ್ಪುಟ್ನಿಕ್-ವಿ ಲಸಿಕೆ
ಕರ್ನಾಟಕ ಇದುವರೆಗೂ ಕೇಂದ್ರದಿಂದ ಪಡೆದ ಒಟ್ಟು ಕೋವಿಶೀಲ್ಡ್ ಪ್ರಮಾಣ 1.14 ಕೋಟಿ ಡೋಸ್. ರಾಜ್ಯವು ನೇರವಾಗಿ ಖರೀದಿಸಿದ ಒಟ್ಟು ಕೋವಿಶೀಲ್ಡ್ ಪ್ರಮಾಣ 13.54 ಲಕ್ಷ ಡೋಸ್.
ಕರ್ನಾಟಕಕ್ಕೆ ಬಂತು 1,64,770 ಡೋಸ್ ಕೊವ್ಯಾಕ್ಸಿನ್
18-44 ವಯೋಮಿತಿ ಜನರಿಗೆ ಉಚಿತವಾಗಿ ಲಸಿಕೆ ನೀಡುತ್ತೇವೆ ಎಂದು ಕರ್ನಾಟಕ ಸರ್ಕಾರ ಹೇಳಿದೆ. ಪ್ರಸ್ತುತ ಆದ್ಯತಾ ವಲಯಗಳಿಗೆ ಲಸಿಕೆಯನ್ನು ನೀಡಲಾಗುತ್ತಿದೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಿದೆ.
ಕೋವಿಶೀಲ್ಡ್ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುತ್ತಾ, ತಜ್ಞರು ಹೇಳೋದೇನು?
ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಜೂನ್ 7ರ ಬೆಳಗ್ಗೆ 6 ಗಂಟೆಯ ತನಕ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ವಿಸ್ತರಣೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಕೇಂದ್ರ ಸರ್ಕಾರದ ಕೋಟಾದಡಿಯಲ್ಲಿ ಇಂದು 5.76 ಲಕ್ಷ ಡೋಸ್ ಕೋವಿಶೀಲ್ಡ್ ಕರ್ನಾಟಕಕ್ಕೆ ಬಂದಿದೆ. ಲಸಿಕೆಯನ್ನು ಪೂರೈಸಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು.
— Dr Sudhakar K (@mla_sudhakar) June 1, 2021
🔶 ಕೇಂದ್ರದಿಂದ ಪಡೆದ ಒಟ್ಟು ಕೋವಿಶೀಲ್ಡ್ ಪ್ರಮಾಣ 1.14 ಕೋಟಿ ಡೋಸ್.
🔶 ರಾಜ್ಯವು ನೇರವಾಗಿ ಖರೀದಿಸಿದ ಒಟ್ಟು ಕೋವಿಶೀಲ್ಡ್ ಪ್ರಮಾಣ 13.54 ಲಕ್ಷ ಡೋಸ್.
ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಮಂಗಳವಾರದ ವರದಿಯಂತೆ 14,304 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 24 ಗಂಟೆಯಲ್ಲಿ 464 ಜನರು ಸಾವನ್ನಪ್ಪಿದ್ದಾರೆ. 29,271 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕರ್ನಾಟಕದ ಒಟ್ಟು ಪ್ರಕರಣದ ಸಂಖ್ಯೆ 2618735. ಸಕ್ರಿಯ ಪ್ರಕರಣದ ಸಂಖ್ಯೆ 2,98,299. ಒಟ್ಟು ಮೃತಪಟ್ಟವರು 29,554. ಒಟ್ಟು ಗುಣಮುಖಗೊಂಡವರು 2290861.