ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಜತೆಗಿನ ಜಗಳದಲ್ಲಿ ಬಿಎಸ್‌ವೈಗೇ ಲಾಭ; ಓದುಗರ ಅಭಿಪ್ರಾಯ

By Sachhidananda Acharya
|
Google Oneindia Kannada News

ಬೆಂಗಳೂರು, ಜೂನ್ 6: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮಧ್ಯೆ ಗುದ್ದಾಟ ನಡೆಯುತ್ತಿದೆ. ಇವರಿಬ್ಬರ ಜಗಳದಲ್ಲಿ ಯಾರಿಗೆ ಲಾಭ ಎಂಬ ಪ್ರಶ್ನೆಯನ್ನು 'ಒನ್ ಇಂಡಿಯಾ' ಓದುಗರ ಮುಂದಿಟ್ಟಿತ್ತು. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆಗಳು ಬಂದಿದ್ದು, ಓದುಗರ ನೀಡಿದ ಅಭಿಪ್ರಾಯಗಳು ಕುತೂಹಲಕಾರಿಯಾಗಿವೆ.
ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ನಡುವಿನ ಹೋರಾಟದಲ್ಲಿ ಯಾರಿಗೆ ಗೆಲುವಾಗಲಿದೆ? ಎಂಬ ಪ್ರಶ್ನೆಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿತ್ತು.

1. ಸಿದ್ದರಾಮಯ್ಯ

2. ಯಡಿಯೂರಪ್ಪ

3. ಕುಮಾರಸ್ವಾಮಿ

4. ಎಲ್ಲವೂ ಅತಂತ್ರ

ಈ ಪ್ರಶ್ನೆಗೆ ಈ ವರದಿ ಬರೆಯುವ ಹೊತ್ತಿಗೆ 8,118 ಜನ ಮತದಾನ ಮಾಡಿದ್ದು ಶೇ. 46.66 ಅಂದರೆ 3,788 ಜನರು ಯಡಿಯೂರಪ್ಪನವರಿಗೆ ಲಾಭವಾಗಲಿದೆ ಎಂದಿದ್ದಾರೆ. ಇನ್ನು 1,672 ಅಂದರೆ ಶೇಕಡಾ 20.6 ಜನರು ಇಬ್ಬರ ಜಗಳದಿಂದ ಕುಮಾರಸ್ವಾಮಿಯವರಿಗೆ ಲಾಭವಾಗಲಿದೆ ಎಂದಿದ್ದಾರೆ.

Readers Opinion: Set back for Siddaramaiah in rift with BS Yeddyurappa

ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ನಡುವಿನ ಜಗಳದಿಂದ ಸಿದ್ದರಾಮಯ್ಯನವರಿಗೇ ಹೆಚ್ಚು ನಷ್ಟ ಎಂಬುದು ಓದುಗರ ಅಭಿಪ್ರಾಯವಾಗಿದೆ. ಸಿದ್ದರಾಮಯ್ಯನವರಿಗೆ ಕೇವಲ ಶೇಕಡಾ 15.53 ಮತಗಳು (1,261 ಮತಗಳು) ಬಿದ್ದಿವೆ. ಇನ್ನು ಶೇಕಡಾ 17.21 ಜನರು ಅತಂತ್ರ ಫಲಿತಾಂಶ ನೀಡಿದ್ದಾರೆ.

ಕುತೂಹಲಕಾರಿ ಕಮೆಂಟುಗಳು

ಆದರೆ ಕಮೆಂಟುಗಳು ಮಾತ್ರ ಕುತೂಹಲಕಾರಿಯಾಗಿವೆ. ಸಿದ್ದರಾಮಯ್ಯನವರಿಗೆ ಮತಗಳು ಹೆಚ್ಚು ಬೀಳದಿದ್ದರೂ ಜನರು ಮಾತ್ರ ಅವರಿಗೇ ಲಾಭವಾಗಲಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಒಂದಷ್ಟು ಕಮೆಂಟ್ ಗಳಲ್ಲಿ ಕುಮಾರಸ್ವಾಮಿಯವರಿಗೆ ಲಾಭವಾಗಲಿದೆ ಎಂದು ಓದುಗರು ಹೇಳಿದ್ದಾರೆ.

ವಿಶೇಷವೆಂದರೆ ಕಮೆಂಟುಗಳಲ್ಲಿ ಯಾರೂ ಯಡಿಯೂರಪ್ಪನವರಿಗೆ ಇದರಿಂದ ಲಾಭವಾಗಲಿದೆ ಎಂದು ಹೇಳಿಲ್ಲ.

English summary
Most Oneindia readers supported BS Yeddyurappa in a recent opinion poll. They said that it is a major gain for BS Yeddyurappa in rift with chief minister Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X