RCB VS CSK: ಕ್ರಿಕೆಟ್ ದಿನ ಮಳೆ ಬರಬಾರದು ಅಂತಾ ಹೋಮ ಮಾಡಿಸಬೇಕಂತೆ: ಛೀ ಥೂ ಅಂತಾ ಉಗಿತಾ ಇದ್ದಾರೆ ಜನ!
ಮಳೆ ಇಲ್ಲದೆ ಜನರು ಸಾಯುತ್ತಿದ್ದರು, ಕಳೆದ 3-4 ತಿಂಗಳಿಂದ ನಿರಂತರವಾಗಿ ಜನ ಮಳೆಗಾಗಿ ಪ್ರಾರ್ಥನೆ ಮಾಡುತ್ತಿದ್ದರು. ಆದರೆ ಮಳೆಯೇ ಬಂದಿರಲಿಲ್ಲ, ಹೀಗಿದ್ದಾಗ ಮೇ ಮೊದಲ ವಾರ ಕರ್ನಾಟಕದಲ್ಲಿ ಆರಂಭವಾದ ಭರ್ಜರಿ ಮಳೆ ಈಗಲೂ ಸುರಿಯುತ್ತಲೇ ಇದೆ. ಹೀಗಿದ್ದಾಗಲೇ ಯಕಶ್ಚಿತ್ ಒಂದು ಕ್ರಿಕೆಟ್ ಮ್ಯಾಚ್‌ಗೆ ಮಳೆ ಬರಬಾರದು ಅಂತಾ, ಹೋಮ ಮಾಡಿಸಲು ಸಲಹೆ ನೀಡಿರುವ ಕೆಲವು ಮಹಾನ್ ಜ್ಞಾನಿಗಳಿಗೆ ಜನರು ಏನ್ ಹೇಳ್ತಿದ್ದಾರೆ ಗೊತ್ತಾ?
ಹೌದು, ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಎಲ್ಲರಿಗೂ ಬೆಂಗಳೂರು ಐಪಿಎಲ್ ತಂಡವಾದ ಆರ್‌ಸಿಬಿ ಅಂದ್ರೆ ಇಷ್ಟ. ಹೀಗಾಗಿಯೇ ಬೆಂಗಳೂರು ತಂಡಕ್ಕೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಹೀಗಿದ್ದಾಗ 2024ರ ಐಪಿಎಲ್ ಟೂರ್ನಿ ಆರಂಭದಲ್ಲಿ ಕೆಟ್ಟದಾಗಿ ಆಟವಾಡಿ ಇಡೀ ಕನ್ನಡಿಗರ ಎದೆಯಲ್ಲಿ ಬೆಂಕಿಯ ಮಳೆ ಸುರಿಸಿದ್ದ ಆರ್‌ಸಿಬಿ ಬೆಂಗಳೂರು ತಂಡ ಈಗ ಮತ್ತೆ ಪುಟಿದೆದ್ದಿದೆ.

ಹೀಗಿದ್ದಾಗಲೇ ಆರ್‌ಸಿಬಿ ತಂಡ ಮುಂದಿನ ಹಂತಕ್ಕೆ ಹೋಗಲು ಚೆನ್ನೈ ವಿರುದ್ಧ ಗೆಲ್ಲಬೇಕಿದೆ. ಇದೇ ಶನಿವಾರ ಅಂದ್ರೆ ಮೇ 18ರಂದು ಮ್ಯಾಚ್ ನಡೆಯಲಿದೆ. ಈ ಪಂದ್ಯದ ಫಲಿತಾಂಶದ ಮೇಲೆ ಆರ್‌ಸಿಬಿ ಭವಿಷ್ಯ ನಿರ್ಧಾರ ಆಗಲಿದೆ. ಇದೇ ಸಮಯದಲ್ಲಿ ಮಳೆಯ ಎಂಟ್ರಿ ಕೂಡ ಆಗಲಿದೆ ಅಂತಾ ಭಯ ಆವರಿಸಿದ್ದು, ಆರ್‌ಸಿಬಿ ಟೀಂ ಅಭಿಮಾನಿಗಳು ಮಳೆ ಬರಬೇಡ ಎಂದು ಬೇಡಿಕೊಳ್ಳುತ್ತಿದ್ದಾರೆ. ಇದು ದೊಡ್ಡದಾಗಿ ಕಿಚ್ಚು ಹೊತ್ತಿಸಿದೆ!
ಮಳೆ ಬೇಡ ಅಂತಾ ಹೋಮ?
ಮಳೆ ಬೇಡ, ಆರ್‌ಸಿಬಿ ತಂಡ ಚೆನ್ನೈ ವಿರುದ್ದ ಗೆಲ್ಲಬೇಕು ಅಂತಾ ಕ್ರಿಕೆಟ್ ಅಭಿಮಾನಿಗಳು ಹೋಮ & ಹವನ ಮಾಡಿಸಲು ಸಜ್ಜಾಗುತ್ತಿದ್ದಾರೆ. ಆದರೆ ಈ ಬಗ್ಗೆ ಇದೀಗ ಭಾರಿ ಆಕ್ರೋಶ ಮೊಳಗಿದೆ. ಯಾಕಂದ್ರೆ ಯಕಶ್ಚಿತ್ ಒಂದೇ ಒಂದು ಕ್ರಿಕೆಟ್ ಮ್ಯಾಚ್ ನಡೆಸಲು ಮಳೆಯನ್ನೇ ಬ್ಯಾನ್ ಮಾಡುವಷ್ಟು ಕ್ರೂರತನ ಯಾಕೆ? ಅಂತಾ ಇದೀಗ ಪರಿಸರ ವಾದಿಗಳು & ಕನ್ನಡದ ನೆಲದ ಜನ ಕೇಳುತ್ತಿದ್ದಾರೆ. ಅದ್ರಲ್ಲೂ ಭಾರತ ಕ್ರಿಕೆಟ್ ತಂಡಕ್ಕೆ ಆಡಿದ್ದ ಹಿರಿಯ ಆಟಗಾರರೇ ಈ ಬಗ್ಗೆ ಮಾತನಾಡಿರುವುದು ಮತ್ತಷ್ಟು ಕಿಚ್ಚು ಹೊತ್ತಿಸಿದೆ.
ಏನ್ ಗುರೂ ಇದು ಗೋಳು?
ಎಲ್ಲೆಲ್ಲೂ ಆರ್‌ಸಿಬಿ ಟ್ರೆಂಡ್ ಹುಟ್ಟುಹಾಕಿ ಹವಾ ಎಬ್ಬಿಸಿದ್ದು, ನಮ್ಮ ಬೆಂಗಳೂರು ತಂಡವಾದ ಆರ್‌ಸಿಬಿ ಗೆದ್ದೇ ಗೆಲ್ಲುತ್ತೆ, ಉಪಾಂತ್ಯಕ್ಕೆ ತಲುಪಲಿದೆ ಅಂತಾನೇ ಫ್ಯಾನ್ಸ್ ಕಾಯುತ್ತಿದ್ದಾರೆ. ಇದೇ ಸಮಯದಲ್ಲಿ ಆರ್‌ಸಿಬಿ ಟೀಂ ಸಕಲ ಸಿದ್ಧತೆ ಆರಂಭಿಸಿದೆ ಮತ್ತೊಂದು ಕಡೆ ಮ್ಯಾಚ್ ನೋಡಲು ಕಾಯುತ್ತಿರುವ ಆರ್‌ಸಿಬಿ ಫ್ಯಾನ್ಸ್ ಟ್ರೆಂಡ್ ಸೃಷ್ಟಿಸುತ್ತಿದ್ದು, ಸೋಷಿಯಲ್ ಮೀಡಿಯಾಗಳಲ್ಲೂ ಆರ್‌ಸಿಬಿ ಮತ್ತು ಚೆನ್ನೈ ಪಂದ್ಯ ಹವಾ ಎಬ್ಬಿಸಿದೆ. ಹೀಗಿದ್ದಾಗ ಮಳೆ ಬರಬಾರದು ಅಂತಾ ಕೆಲ ಜ್ಞಾನಿಗಳು ನೀಡುತ್ತಿರುವ ಸಲಹೆ ಕಿಚ್ಚು ಹೊತ್ತಿಸಿದೆ.












Click it and Unblock the Notifications