ಸುಪಾರಿ ಪ್ರಕರಣ : 3ನೇ ಆರೋಪಿ ವಿಜಯ ಬಡಿಗೇರ್ ಬಂಧನ
ಬೆಂಗಳೂರು, ಡಿಸೆಂಬರ್. 11 : ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 3ನೇ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ರವಿ ಬೆಳಗೆರೆ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಸಿಸಿಬಿ ಪೊಲೀಸರು ಮಹಾರಾಷ್ಟ್ರದ ಮೀರಜ್‌ನಲ್ಲಿ ಸೋಮವಾರ ಪ್ರಕರಣದ 3ನೇ ಆರೋಪಿ ವಿಜು ಬಡಿಗೇರ್‌ನನ್ನು ಬಂಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಶಶಿಧರ್ ಮಂಡೇವಾಡಿ ಈಗಾಗಲೇ ಸಿಸಿಬಿ ವಶದಲ್ಲಿದ್ದಾರೆ.

ಶಶಿಧರ್ ಮಂಡೇವಾಡಿ ಬಂಧನದ ಬಳಿಕ ವಿಜು ಬಡಿಗೇರ್ ನಾಪತ್ತೆಯಾಗಿದ್ದ. ಪೊಲೀಸರು ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆತನಿಗಾಗಿ ಹುಡುಕಾಟ ತೀವ್ರಗೊಳಿಸಿದ್ದರು.
ಸೋಮವಾರ ಸಂಜೆ ಮಹಾರಾಷ್ಟ್ರದ ಸಂಬಂಧಿಕರ ಮನೆಯಲ್ಲಿ ವಿಜು ಬಡಿಗೇರ್‌ನನ್ನು ಬಂಧಿಸಲಾಗಿದೆ. ದೂರವಾಣಿ ಕರೆಯ ಮಾಹಿತಿ ಆಧರಿಸಿ ಆತನನ್ನು ಬಂಧಿಸಲಾಗಿದೆ.












Click it and Unblock the Notifications