Ration: ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಮಕ್ಕಳ ಕುಂಠಿತ ಬೆಳವಣಿಗೆ ತಡೆದ ಪಡಿತರ ಯೋಜನೆ

Ration: ಬಡವರ ಹಸಿವು ನೀಗಿಸಲು ಕಡಿಮೆ ದರದಲ್ಲಿ ಪಡಿತರ ನೀಡಲಾಗುತ್ತಿದೆ. ಕೆಲವೆಡೆ ಉಚಿತವಾಗಿ ವಿತರಣೆ ಮಾಡಲಾಗತ್ತಿದೆ. ಇದೀಗ ಅಧ್ಯಯನವೊಂದು ಪಡಿತರ ವಿತರಣಾ ವ್ಯವಸ್ಥೆಯಿಂದ ಕರ್ನಾಟಕದ ಸೇರಿದಂತೆ 8 ರಾಜ್ಯಗಳಲ್ಲಿ ಮಕ್ಕಳ ಕುಂಠಿತ ಬೆಳವಣಿಗೆ ನಿಯಂತ್ರಣಗೊಂಡಿದೆ ಎಂದು ತಿಳಿಸಿದೆ. ಹಾದ್ರೆ ಯಾವ್ಯಾವ ರಾಜ್ಯಗಳಲ್ಲಿ ಹಾಗೂ ಎಷ್ಟು ಲಕ್ಷ ಮಕ್ಕಳಿಗೆ ಉಪಯುಕ್ತವಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ದೇಶದಲ್ಲಿ ಸಾರ್ವಜನಿಕ ಆಹಾರ ವಿತರಣಾ ವ್ಯವಸ್ಥೆಯ ವಿಸ್ತರಣೆಯಿಂದ ಕರ್ನಾಟಕ ಸೇರಿ 8 ರಾಜ್ಯಗಳ 18,00,000 ಮಕ್ಕಳ ಕುಂಠಿತ ಬೆಳವಣಿಗೆ ತಡೆಯಲಾಗಿದೆ ಎಂದು ಅಮೆರಿಕಾದ ಎಕಾನಮಿಕ್ ಅಸೋಸಿಯೇಷನ್ ಅಧ್ಯಯನವೊಂದು ಮಾಹಿತಿ ನೀಡಿದೆ.

Ration Scheme to Stopped Stunted Growth of Children in 8 States including Karnataka

ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆಯಡಿ 1997ರಲ್ಲಿ ಆರಂಭವಾದ ಪಡಿತರ ವಿತರಣಾ ಕಾರ್ಯಕ್ರಮವನ್ನು 2013ರಲ್ಲಿ ವಿಸ್ತರಣೆ ಮಾಡಲಾಯಿತು. 2020ರಲ್ಲಿ ಕೋವಿಡ್ -19 ಆರಂಭವಾದ ಬಳಿಕ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಭಾಗವಾಗಿ ಇದನ್ನು ಮತ್ತಷ್ಟು ಸುಧಾರಿಸಲಾಗಿದ್ದು, ಇದರಡಿಯಲ್ಲಿ ಪ್ರತಿ ವ್ಯಕ್ತಿಗೆ ತಿಂಗಳಿಗೆ 3 ಕೆ.ಜಿ. ಅಕ್ಕಿ, ಎರಡು ಕೆ.ಜಿ. ಗೋಧಿ ನೀಡಲಾಗುತ್ತಿದೆ.

ಮಕ್ಕಳ ಕುಂಠಿತ ಬೆಳವಣಿಗೆ, ಪೋಷಣೆ ಮತ್ತು ಆಹಾರ ವೈವಿಧ್ಯತೆಯ ಮೇಲೆ ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆಯ ಪ್ರಭಾವದ ಕುರಿತು ಮೌಲ್ಯಮಾಪನ ನಡೆಸಲು ಐಎಎಂ ಬೆಂಗಳೂರು, ಅಮೆರಿಕದ ಕ್ಯಾಲಿಫೋರ್ನಿಯಾ, ಕ್ಯಾಲ್ಗರಿ ವಿಶ್ವವಿದ್ಯಾಲಯದ ಸಂಶೋಧಕರು ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಪಡಿತರ ಚೀಟಿ ಹೊಂದಿದ್ದ ಕುಟುಂಬಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿದ್ದರು.

ಸರ್ಕಾರ ನೀಡಿದ ಪಡಿತರದಿಂದ ಆ ಕುಟುಂಬಗಳ 18 ಲಕ್ಷ ಮಕ್ಕಳು ಕುಂಠಿತ ಬೆಳವಣಿಗೆಯಿಂದ ಹೊರ ಬಂದಿದ್ದಾರೆ. ಜನರ ಆದಾಯ ಹೆಚ್ಚಳವಾಗಿದೆ. ಜನರಿಗೆ ವೈವಿಧ್ಯಮಯ ಆಹಾರ ಸೇವನೆ ಲಭ್ಯವಾಗಿದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. ಇದೇ ಪಡಿತರದಿಂದ ದೇಶದಲ್ಲಿ ಅದೆಷ್ಟೋ ಬಡಕುಟುಂಬಗಳು ಹಸಿವನ್ನು ನೀಗಿಸಿಕೊಳ್ಳುತ್ತಿವೆ. ಇದೀಗ ಈ ಪಡಿತರ ಆಹಾರಿಂದ ತುಂಬಾ ಮಕ್ಕಳಿಗೆ ಸಹಾಯಕಾರಿ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪಡಿತರ ಚೀಟಿಯಲ್ಲಿ ಏನಲ್ಲಾ ತಿದ್ದುಪಡಿಗೆ ಅವಕಾಶವಿದೆ?

* ಕುಟುಂಬದ ಮುಖ್ಯಸ್ಥರ ಬದಲಾವಣೆ
* ಪಡಿತರ ಚೀಟಿ ವಿಳಾಸ ಬದಲಾವಣೆ
* ರೇಷನ್ ಕಾರ್ಡ್ ನ್ಯಾಯಬೆಲೆ ಅಂಗಡಿ ಬದಲಾವಣೆ
* ಕುಟುಂಬದ ಹೊಸ ಸದಸ್ಯರ ಸೇರ್ಪಡೆ
* ರೇಷನ್ ಕಾರ್ಡ್‌ನಿಂದ ಸದಸ್ಯರ ತೆಗೆದು ಹಾಕುವುದು
* ರೇಷನ್ ಕಾರ್ಡ್‌ನಲ್ಲಿರುವ ಸದಸ್ಯರಿಗೆ ಈ ಕೆವೈಸಿ ಮಾಡಲು ಅವಕಾಶ
* ರೇಷನ್ ಕಾರ್ಡ್‌ನಲ್ಲಿರುವ ಸದಸ್ಯರಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಅವಕಾಶ
* ರೇಷನ್ ಕಾರ್ಡ್‌ಗೆ ಸಂಬಂಧಿಸಿದ ಇತರ ಬದಲಾವಣೆಗೆ ಮಾಡಿಸಬಹುದಾಗಿದೆ

ಹೊಸ ಸದಸ್ಯರ ಸೇರ್ಪಡೆ ಹೇಗೆ?

* ಅಧಿಕೃತ ವೆಬ್‌ಸೈಟ್‌ https://ahara.karnataka.gov.in/ ಭೇಟಿ ನೀಡಿ.
* ಪಬ್ಲಿಕ್ ಯೂಸ್ ಎಂಬ ಮೆನು ಬಾರ್ ಕೆಳಗೆ ಜಿಲ್ಲಾವಾರು ಮಾಹಿತಿ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಹೊಸ ಪಡಿತರ ಚೀಟಿ ಮತ್ತು ಪಡಿತರ ಚೀಟಿ ತಿದ್ದುಪಡಿ ಅಯ್ಕೆ ವಿಭಾಗಗಳು ಇವೆ.
* ಹೊಸ ರೇಷನ್‌ ಕಾರ್ಡ್‌ ಬೇಕಾದರೆ ಅಪ್ಲೈ ಫಾರ್ ನ್ಯೂ ರೇಷನ್ ಕಾರ್ಡ್‌ ಮತ್ತು ಪಡಿತರ ಚೀಟಿ ತಿದ್ದುಪಡಿಗಾದರೆ ಅಪ್ಲೈ ಫಾರ್ ರೇಷನ್ ಕಾರ್ಡ್ ಕರೆಕ್ಷನ್ಸ್ ಆಯ್ಕೆ ಸೆಲೆಕ್ಟ್ ಮಾಡಬೇಕಾಗುತ್ತದೆ.
* ಹೊಸ ಪೇಜ್‌ನಲ್ಲಿ ಕಾಣಸುವ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ.
* ನಂತರ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಬೇಕು.
* ಪರಿಷ್ಕೃತ ಪಡಿತರ ಚೀಟಿ, ಹೊಸ ಪಡಿತರ ಚೀಟಿ ವಿತರಣೆ ಆಗುತ್ತದೆ.

ರೇಷನ್ ಕಾರ್ಡ್ ತಿದ್ದುಪಡಿಗೆ ಬೇಕಾದ ಅಗತ್ಯ ದಾಖಲೆಗಳು

* ಕುಟುಂಬದ ಸದಸ್ಯರ ಆಧಾರ್ ಕಾರ್ಡ್
* ಕುಟುಂಬದ ಸದಸ್ಯರ ಜಾತಿ ಪ್ರಮಾಣ ಪತ್ರ
* ಕುಟುಂಬದ ಸದಸ್ಯರ ಆದಾಯ ಪ್ರಮಾಣ ಪತ್ರ
* ಮಕ್ಕಳ ಜನನ ಪ್ರಮಾಣ ಪತ್ರ
* ಮೊಬೈಲ್ ನಂಬರ್
* ರೇಷನ್ ಕಾರ್ಡ್
* ಇತರ ಅಗತ್ಯ ದಾಖಲಾತಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+