Get Updates
Get notified of breaking news, exclusive insights, and must-see stories!

Ration Card: ಬಿಪಿಎಲ್ ಕಾರ್ಡ್‌ ಹೊಂದಿರುವ 392 ಸರ್ಕಾರಿ ನೌಕರರು, ಪತ್ತೆಯಾದ ಅನರ್ಹರೆಷ್ಟು?

ಬೆಂಗಳೂರು, ಆಗಸ್ಟ್ 21: ಕರ್ನಾಟಕ ರಾಜ್ಯ ಸರ್ಕಾರದ ಪಡಿತರ ಯೋಜನೆಯಡಿ ಅಕ್ಕಿ, ದವಸ, ಧಾನ್ಯಗಳು ಬಡವರಿಗೆ ಸಿಗುವಂತೆ ಮಾಡಲು ಬಿಪಿಎಲ್ ನಂತಹ ಪಡಿತರ ಕಾರ್ಡ್‌ಗಳನ್ನು ನೀಡಿದೆ. ಆದರೆ ಈ ಬಿಪಿಎಲ್ ಕಾರ್ಡ್‌ಗಳು ಅರ್ಹತೆ ಇಲ್ಲದ, ಶ್ರೀಮಂತರು, ಸರ್ಕಾರಿ ಉದ್ಯೋಗ ಹೊಂದಿರುವವರು ಪಡೆದಿರುವುದು ಪತ್ತೆಯಾಗಿದೆ. ಈ ಸಂಬಂಧ ನೋಟಿಸ್ ಜಾರಿ ಮಾಡಲಾಗಿದೆ.

ಹೌದು, ರಾಜ್ಯ ಸರ್ಕಾರವು ಅನರ್ಹರು ಬಿಜೆಪಿಎಲ್ ಕಾರ್ಡ್ ಹೊಂದಿರುವ ಬಗ್ಗೆ ಅಭಿಮಾನ ಆರಂಭಿಸಿದೆ. ಇದರಲ್ಲಿ ವಾರ್ಷಿಕ 1.20 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಕುಟುಂಬಗಳಿಗೆ ಸಿಮೀತವಾದ ಪಡಿತರ ಚೀಟಿಯನ್ನು ಶ್ರೀಮಂತರು, ಉಳ್ಳವರು ಪಡೆದಿದ್ದಾರೆ. ಈ ಕುರಿತು ಅಭಿಮಾನದ ಮೂಲಕ ಪತ್ತೆ ಕಾರ್ಯ ಆರಂಭಿಸಿದೆ.

Ration Card Karnataka Govt will Notice Issue to 392 Govt Employees Who Have BJP Cards

ಅಧಿಕ ಆದಾಯ ಇರುವ ಒಟ್ಟು 32,092 ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿರುವ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಇದರಲ್ಲಿ 391 ಮಂದಿ ಸರ್ಕಾರಿ ಉದ್ಯೋಗ ಹೊಂದಿರುವ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ವಾರ್ಷಿಕವಾಗಿ ಲಕ್ಷಾಂತರ ರೂಪಾಯಿ ಗಳಿಸುವ 2000ಕ್ಕೂ ಹೆಚ್ಚು ಕುಟುಂಬಗಳಿವೆ. ನಿಗದಿತ ಆದಾಯ (1.20ಕ್ಕೂ) ಹೆಚ್ಚು ವಾರ್ಷಿಕ ವರಮಾನ ಹೊಂದಿರುವ 29000 ಕುಟುಂಬಗಳ ಪತ್ತೆ ಆಗಿವೆ.

ಸರ್ಕಾರಿ ಅಧಿಕಾರಿಗಳಿಂದ ಪಡಿತರ ಬದಲಿಗೆ ದಂಡ ವಸೂಲಿ

391 ಮಂದಿ ಸರ್ಕಾರಿ ಅಧಿಕಾರಿಗಳು ಸರ್ಕಾರಕ್ಕೆ ಮೋಸ ಮಾಡಿದ್ದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಕಳೆದ ಮೂರು ವರ್ಷಗಳಿಂದ ಯಾವೆಲ್ಲ ನೌಕರರು ಪಡೆದಿರುವ ಪಡಿತರ ಮೊತ್ತ ಕಲೆ ಹಾಕಬೇಕು. ನಿಯಮಾನುಸಾರ ನೋಟಿಸ್ ಜಾರಿ ಮಾಡಬೇಕು. ಇನ್ನೂ ಪಡೆದ ಪಡಿತರ ಮೌಲ್ಯದಷ್ಟು ಹಣವನ್ನು ಅವರಿಂದ ದಂಡವಾಗಿ ವಸೂಲಿಗೆ ಮಾಡುವುದರ ಜೊತೆಗೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.

Gold Rate Bangalore: ಬೆಂಗಳೂರಿನಲ್ಲಿ ಆಗಸ್ಟ್‌ 21ರಂದು ಚಿನ್ನ ಹಾಗೂ ಬೆಳ್ಳಿ ಬೆಲೆ ತಿಳಿಯಿರಿ

ಸರ್ಕಾರ ವ್ಯಾಪ್ತಿಯಲ್ಲಿ, ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ, ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ಕಾಯಂ ಆಗಿ ಕಾರ್ಯ ನಿರ್ವಹಿಸುವವರು, ಸ್ವಂತ ವಾಹನ ಇಲ್ಲವೇ ವಾಣಿಜ್ಯ ಚಟುವಟಿಕೆಗಾಗಿ ನಾಲ್ಕು ಚಕ್ರದ ವಾಹನ ಹೊಂದಿರುವವರು, ಮೂರು ಹೆಕ್ಟರ್‌ಗಿಂತ ಹೆಚ್ಚಿನ ಭೂಮಿ ಹೊಂದಿರುವವರು, ನಗರ ಅಥವಾ ಪಟ್ಟಣಗಳಲ್ಲಿ 1000 ಚದರ ಅಡಿಗೂ ಹೆಚ್ಚು ವಿಸ್ತೀರ್ಣದಲ್ಲಿ ಸ್ವಂತ ಮನೆಹೊಂದಿವರು, ಹಾಗೂ ವಾರ್ಷಿಕ 1.20 ಲಕ್ಷಕ್ಕೂ ಹೆಚ್ಚು ಆದಾಯ ಹೊಂದಿದ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಪಡೆಯಲು ಅರ್ಹತೆ ಇರುವುದಿಲ್ಲ ಎಂದು ಇಲಾಖೆ ನಿಯಮಗಳು ಹೇಳುತ್ತವೆ.

Ration Card Karnataka Govt will Notice Issue to 392 Govt Employees Who Have BJP Cards

ಆಗಸ್ಟ್ 31ರೊಳಗೆ ತಿದ್ದುಪಡಿ, ರದ್ದಿಗೆ ಅವಕಾಶ

ಇಂತಹ ಅರ್ಹತೆ ಇಲ್ಲದೇ, ಅನರ್ಹತೆ ಇದ್ದರೂ ಪಡಿತರ ಚೀಟಿ ಪಡೆದವರು ಇದೇ ಆಗಸ್ಟ್ 31ರೊಳಗೆ ನಿಮ್ಮ ಹತ್ತಿರ ತಾಲೂಕು ಕಚೇರಿ (ತಹಶೀಲ್ದಾರ್ ಕಚೇರಿ)ಗೆ ಹೋಗಿ ರದ್ದುಗೊಳಿಸಬೇಕು. ಇನ್ನೂ ಹೆಸರು ಸೇರಿವುದು, ಹೆಸರು ತೆಗೆಯುವುದ ಸೇರಿದಂತೆ ತಿದ್ದುಪಡಿ ಮಾಡಿಕೊಳ್ಳುವವರು ಆಗಸ್ಟ್ ತಿಂಗಳೇ ಕೊನೆಯ ಅವಕಾಶವಾಗಿದೆ. ನಂತರ ದಂಡ ಸಮೇತವಾಗಿ ತಿದ್ದುಮಾಡಿಕೊಳ್ಳಬೇಕು. ಅನರ್ಹರು ಪಡಿತರ ಚೀಟಿ ರದ್ದುಗೊಳಿಸದಿದ್ದರೆ ದಂಡ ತೆರಬೇಕಾಗುತ್ತದೆ ಇಲಾಖೆ ಎಚ್ಚರಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+