Ration Card: ಆತಂಕದಲ್ಲಿದ್ದ ರೇಷನ್ ಕಾರ್ಡ್‌ದಾರರಿಗೆ ಆಹಾರ ಸಚಿವ ರಿಜ್ವಾನ್ ಅರ್ಷದ್‌ರಿಂದ ನೆಮ್ಮದಿ ಸುದ್ದಿ
Ration Card: ರಾಜ್ಯದಲ್ಲಿ ಸದ್ಯ ಪಡಿತರ ಚೀಟಿ ಇ-ಕೆವೈಸಿ ಪ್ರಕ್ರಿಯೆ ನಡೆಯುತ್ತಿದೆ. ಇದನ್ನು ಪೂರ್ಣಗೊಳಿಸಲು ಕೊನೆ ದಿನಾಂಕ ಸೆಪ್ಟೆಂಬರ್ 30 ಆಗಿತ್ತು. ಆದರೆ ಇದೀಗ ರಾಜ್ಯ ಸರ್ಕಾರವು ಮತ್ತೆ ವಿಸ್ತರಣೆ ಹಾಗೂ ಸಮಯದಲ್ಲಿ ಬದಲಾವಣೆ ಮಾಡಿದೆ. ಹಾಗಾದ್ರೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯದಲ್ಲಿನ ಪಡಿತರ ಚೀಟಿದಾರರಿಗೆ ಆಗಾರ ಇಲಾಖೆ ನೆಮ್ಮದಿಯ ಸುದ್ದಿಯನ್ನು ನೀಡಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಎದುರಾಗುತ್ತಿರುವ ಸರ್ವರ್ ಸಮಸ್ಯೆಯಿಂದ ಇ-ಕೆವೈಸಿ ಪ್ರಕ್ರಿಯೆ ತೀವ್ರ ವಿಳಂಬವಾಗುತ್ತಿದೆ. ಆದ್ದರಿಂದ ಈ ಇ-ಕೆವೈಸಿ ಪ್ರಕ್ರಿಯೆಯ ಗಡುವನ್ನು ಮತ್ತೆ ವಿಸ್ತರಣೆ ಮಾಡಿ ಸರ್ಕಾರ ಅದೇಶ ಹೊರಡಿಸಿದೆ.

ಪಡಿತರ ಚೀಟಿ ಇ-ಕೆವೈಸಿ ಪ್ರಕ್ರಿಯೆ ಗಡುವು ವಿಸ್ತರಣೆ
ರಾಜ್ಯದಲ್ಲಿ ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಪೂರ್ಣಗೊಳಿಸಲು ಅಕ್ಟೋಬರ್ 20ರ ವರೆಗೆ ಅವಕಾಶ ಕಲ್ಪಿಸಿದೆ. ಈ ಹಿಂದೆ ಸೆಪ್ಟೆಂಬರ್ 30ರೊಳಗೆ ಇ-ಕೆವೈಸಿ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು. ಇದೀಗ ಸದ್ಯ ಗಡುವು ವಿಸ್ತರಣೆ ಮಾಡಿ ಅಕ್ಟೋಬರ್ 20ರವರೆಗೆ ಕಾಲಾವಕಾಶ ನೀಡಿ ಆದೇಶ ಹೊರಡಿಸಿದೆ.
ಆಹಾರ ಸಚಿವರು ಹೇಳಿರುವುದೇನು?
ಈ ಪ್ರಕ್ರಿಯೆಯ ದಿನಾಂಕ ಮುಗಿಯುತ್ತಾ ಬರುತ್ತಿದ್ದಂತೆ ನ್ಯಾಯಬೆಲೆ ಅಂಗಡಿಗಳತ್ತ ಗ್ರಾಹಕರ ದಂಡೇ ಹರಿದುಬರುತ್ತಿತ್ತು. ಸರ್ವಸ್ ಸಮಸ್ಯೆಯಿಂದ ಇದ್ದ ಕೆಲಸಗಳನ್ನು ಬಿಟ್ಟು ಜನರು ಕಾದು ಕಾದು ಸುಸ್ತಾಗಿ ಮತ್ತೆ ಮನೆಗೆ ವಾಪಾಸ್ ತೆರಳುತ್ತಿದ್ದರು. ಇದರನ್ನು ಗಮನದಲ್ಲಿಟ್ಟುಕೊಂಡೇ ಇ-ಕೆವೈಸಿ ಗಡುವನ್ನು ಮತ್ತೆ ಅಕ್ಟೋಬರ್ 20ರ ವರೆಗೆ ವಿಸ್ತರಣೆ ಮಾಡಲಾಗಿದೆ. ಈ ಕುರಿತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅವರು ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
'ತಾಂತ್ರಿಕ ದೋಷ ಹಾಗೂ ಸರ್ವರ್ ನಿಧಾನಗತಿಯಿಂದಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಜನರು ಪರದಾಡುತ್ತಿರುವ ವಿಚಾರ ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳ ಮೂಲಕ ನನ್ನ ಗಮನಕ್ಕೆ ಬಂದಿದೆ. ಜನರ ಸಂಕಷ್ಟಕ್ಕೆ ತಕ್ಷಣವೇ ಸ್ಪಂದಿಸುವುದು ನಮ್ಮ ಮೊದಲ ಕರ್ತವ್ಯ,' ಎಂದು ಸಚಿವರು ತಿಳಿಸಿದ್ದಾರೆ.
'ತಾಂತ್ರಿಕ ಕಾರಣಗಳಿಂದಾಗಿ ಯಾವುದೇ ಬಡ ಕುಟುಂಬವೂ ತನ್ನ ಹಕ್ಕಿನ ಆಹಾರಧಾನ್ಯದಿಂದ ವಂಚಿತರಾಗಬಾರದು. ಅದಕ್ಕಾಗಿ ಇ-ಕೆವೈಸಿ ಅಂತಿಮ ಗಡುವನ್ನು ವಿಸ್ತರಿಸಲು ಆದೇಶಿಸಿದ್ದೇನೆ. ಯಾರೂ ಆತಂಕಪಡುವಂತಿಲ್ಲ. ಸರ್ವರ್ ಸಮಸ್ಯೆಯನ್ನು ತಕ್ಷಣ ಬಗೆಹರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ,' ಎಂದು ಸಚಿವ ರಿಜ್ವಾನ್ ಅರ್ಷದ್ ಅವರು ತಿಳಿಸಿದ್ದಾರೆ.
ಫಲಾನುಭವಿಗಳು ಯಾವುದೇ ಗೊಂದಲ ಇಲ್ಲದೆ ಸಮೀಪದ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಪೂರ್ಣಗೊಳಿಸಿ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಜನಸಾಮಾನ್ಯರ ಹಿತರಕ್ಷಣೆಗೆ ನಮ್ಮ ಇಲಾಖೆ ಸದಾ ಕಾರ್ಯಪ್ರವೃತ್ತವಾಗಿದೆ ಎಂದು ರಿಜ್ವಾನ್ ಅರ್ಷದ್ ಅವರು ತಿಳಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಗಡುವು ಮತ್ತೆ ವಿಸ್ತರಣೆ ಮಾಡಿರುವುದು ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಂತಾಗಿದೆ.
ಇ-ಕೆವೈಸಿಗೆ ಬೇಕಾಗುವ ದಾಖಲೆಗಳು
* ರೇಷನ್ ಕಾರ್ಡ್ ಸಂಖ್ಯೆ
* ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
* ಗ್ಯಾಸ್ ಸಂಪರ್ಕದ ಪುಸ್ತಕ
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (SC/ST) ಸಮುದಾಯಕ್ಕೆ ಸೇರಿದ ಫಲಾನುಭವಿಗಳು ಮಾತ್ರ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸುವುದು ಅಗತ್ಯವಾಗಿದೆ.


Click it and Unblock the Notifications
