Ration card: ರೇಷನ್ ಕಾರ್ಡ್‌ ರದ್ದು ಜೋರು: ರಾಜ್ಯದ ಈ 5 ಜಿಲ್ಲೆಗಳಲ್ಲೇ ಹೆಚ್ಚು!

ರಾಜ್ಯದಲ್ಲಿ ನಿಯಮ ಉಲ್ಲಂಘನೆ ಮಾಡಿ ರೇಷನ್ ಕಾರ್ಡ್‌ ತೆಗೆದುಕೊಂಡಿರುವವರ ವಿರುದ್ಧ ಕಾರ್ಯಾಚರಣೆಯನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಮುಂದುವರಿಸಿದೆ. ರಾಜ್ಯದಲ್ಲಿ ಕೆಲವರು ನಿಯಮ ಮೀರಿ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್‌ಗಳನ್ನು ತೆಗೆದುಕೊಂಡಿದ್ದಾರೆ. ಈ ರೀತಿ ನಿಯಮ ಉಲ್ಲಂಘನೆ ಮಾಡಿ ರೇಷನ್ ಕಾರ್ಡ್‌ ಪಡೆದಿರುವವರ ಪಟ್ಟಿಯನ್ನು ರಾಜ್ಯ ಸರ್ಕಾರ ಸಿದ್ಧಪಡಿಸಲಾಗಿದೆ. ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುವ ಪ್ರಕ್ರಿಯೆ ಸಿದ್ದಿಲ್ಲದೆ ಶುರುವಾಗಿದೆ. ಈ ರೀತಿ ಅನರ್ಹರು ರೇಷನ್ ಕಾರ್ಡ್‌ ಪಡೆದ ರಾಜ್ಯದ ಪ್ರಮುಖ 5 ಜಿಲ್ಲೆಗಳನ್ನು ಇದೀಗ ಪಟ್ಟಿ ಮಾಡಲಾಗಿದೆ. ರೇಷನ್ ಕಾರ್ಡ್‌ನಲ್ಲಿನ ಹೊಸ ಬೆಳವಣಿಗೆಗಳು ಏನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ರಾಜ್ಯ ಸರ್ಕಾರವು ರಾಜ್ಯದಲ್ಲಿ ಅನ್ಯ ಮಾರ್ಗದಲ್ಲಿ ರೇಷನ್ ಕಾರ್ಡ್‌ ಪಡೆದಿರುವವರ ಮೇಲೆ ಕ್ರಮ ತೆಗೆದುಕೊಳ್ಳುತ್ತಿದೆ. ಇಲ್ಲಿಯ ವರಗೆ ರಾಜ್ಯದಲ್ಲಿ ರೇಷನ್ ಕಾರ್ಡ್‌ ನಿಯಮ ಉಲ್ಲಂಘನೆ ಮಾಡಿರುವ 90 ಸಾವಿರಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್​ಗಳನ್ನು ರದ್ದು ಮಾಡಲಾಗಿದೆ. ರಾಜ್ಯದಲ್ಲಿ ವಿವಿಧ ಮಾನದಂಡಗಳ ಆಧಾರದ ಮೇಲೆ ರೇಷನ್ ಕಾರ್ಡ್‌ ರದ್ದುಪಡಿಸಲಾಗುತ್ತಿದೆ. ಮುಖ್ಯವಾಗಿ ಆದಾಯ ತೆರಿಗೆ ಪಾವತಿ ಮಾಡುವವರು ಹಾಗೂ ಸರ್ಕಾರಿ ನೌಕರರು ಸೇರಿದಂತೆ ರೇಷನ್‌ ಕಾರ್ಡ್‌ ಪಡೆದಿರುವವರ ರೇಷನ್‌ ಕಾರ್ಡ್‌ ರದ್ದುಪಡಿಸಲಾಗುತ್ತಿದೆ.

Ration card cancellation is rampant Most in these 5 districts of Karnataka

ಈ ಐದು ಜಿಲ್ಲೆಗಳಲ್ಲೇ ಹೆಚ್ಚು: ರಾಜ್ಯದ ಐದು ಪ್ರಮುಖ ಜಿಲ್ಲೆಗಳಲ್ಲಿ ಅಕ್ರಮ ರೇಷನ್‌ ಕಾರ್ಡ್‌ ಪಡೆದಿರುವ ಸಂಖ್ಯೆ ಹೆಚ್ಚಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ. ಅದರಂತೆ ಪ್ರಥಮ ಸ್ಥಾನದಲ್ಲಿ ಬೆಳಗಾವಿ, ನಂತರದ ಸ್ಥಾನಗಳಲ್ಲಿ ಬೆಂಗಳೂರು, ಮೈಸೂರು, ತುಮಕೂರು ಹಾಗೂ ಧಾರವಾಡ ನಗರಗಳು ಇವೆ. ಈ ನಗರಗಳಲ್ಲಿ 13 ಸಾವಿರದಿಂದ ಪ್ರಾರಂಭವಾಗಿ ಅಂತಿಮವಾಗಿ 3 ಸಾವಿರದ ವರೆಗೆ ಅನರ್ಹ ರೇಷನ್‌ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ. ಈ ರೀತಿ ರದ್ದು ಮಾಡಿದ ರೇಷನ್‌ ಕಾರ್ಡ್‌ಗಳಲ್ಲಿ ಸರ್ಕಾರಿ ನೌಕರರ ಸಂಖ್ಯೆಯೇ ಹೆಚ್ಚಾಗಿದೆ ಎಂದು ಹೇಳಲಾಗಿದೆ.

ಸರ್ಕಾರಿ ನೌಕರರಿಗೆ ಶಾಕ್‌: ರಾಜ್ಯದಲ್ಲಿ ಮೊದಲು ಸರ್ಕಾರಿ ನೌಕರರಿಗೆ ರೇಷನ್‌ ಕಾರ್ಡ್‌ ರದ್ದುಪಡಿಸಲಾಗುತ್ತಿದೆ. ಸರ್ಕಾರಿ ನೌಕರರಿಗೆ ಯಾಕೆ ಬಿಪಿಎಲ್ ಕಾರ್ಡ್‌ ಇರಬೇಕು ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರವು ಈ ಹಿಂದೆ ಪ್ರಶ್ನೆ ಮಾಡಿತ್ತು. ಅದರಂತೆ ರಾಜ್ಯದಲ್ಲಿ ರೇಷನ್ ಕಾರ್ಡ್‌ ಪಡೆದಿರುವ ಸರ್ಕಾರಿ ನೌಕರರನ್ನು ಗುರಿಯಾಗಿಸಿಕೊಂಡು ರೇಷನ್‌ ಕಾರ್ಡ್‌ಗಳನ್ನು ರದ್ದುಪಡಿಸಲಾಗುತ್ತಿದೆ. ರಾಜ್ಯದಲ್ಲಿ ಇಲ್ಲಿಯವರೆಗೆ ಅಂದಾಜು 5,000 ಸಾವಿರ ಸರ್ಕಾರಿ ನೌಕರರ ರೇಷನ್‌ ಕಾರ್ಡ್‌ ರದ್ದುಪಡಿಸಲಾಗಿದೆ.

ಅಲ್ಲದೆ ಆದಾಯ ತೆರಿಗೆ ಪಾವತಿ ಮಾಡುತ್ತಿರುವವರು, ಸರ್ಕಾರಿ ಕೆಲಸದಲ್ಲಿ ಇರುವವರು, ವರ್ಷದಲ್ಲಿ 1.20 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಗಳಿಸುತ್ತಿರುವವರು ಹಾಗೂ ಕಳೆದ 6 ತಿಂಗಳಿನಿಂದ ರೇಷನ್ ತೆಗೆದುಕೊಳ್ಳದೆ ಇರುವವರ ರೇಷನ್‌ ಕಾರ್ಡ್‌ಗಳನ್ನು ರದ್ದುಪಡಿಸಲಾಗುತ್ತಿದೆ. ಅಲ್ಲದೆ ಇದರೊಂದಿಗೆ ಮೃತಪಟ್ಟಿರುವ ಫಲಾನುಭವಿಗಳ ಹೆಸರುಗಳನ್ನು ಸಹ ರೇಷನ್‌ ಕಾರ್ಡ್‌ ಪಟ್ಟಿಯಿಂದ ಕೈಬಿಡಲಾಗುತ್ತಿದೆ. ರಾಜ್ಯ ಸರ್ಕಾರವು ಹ್ಯೂಮನ್ ರಿಸೋರ್ಸ್ ಮ್ಯಾನೇಜ್​ವೆುಂಟ್ ಸಿಸ್ಟಂ ಕೊಟ್ಟಿರುವ ಮಾಹಿತಿಯ ಆಧಾರದ ಮೇಲೆ ಈ ಕ್ರಮ ತೆಗೆದುಕೊಂಡಿದೆ.

Ration card cancellation is rampant Most in these 5 districts of Karnataka

ಸರ್ಕಾರಿ ನೌಕರರಿಗೆ ನೋಟಿಸ್ ಜಾರಿ: ಇನ್ನು ಈ ರೀತಿ ರೇಷನ್ ಕಾರ್ಡ್‌ ಪಡೆದುಕೊಂಡಿರುವ ಸರ್ಕಾರಿ ನೌಕರರಿಗೆ ನೋಟಿಸ್‌ ಸಹ ಜಾರಿ ಮಾಡಲಗಿದ್ದು, ಅವರಿಂದ ವಿವರಣೆ ಕೇಳಲಾಗಿದೆ. ಈ ರೀತಿ ಸರ್ಕಾರಿ ನೌಕರರದಂತ ಹುದ್ದೆಯಲ್ಲಿದ್ದೂ ರೇಷನ್‌ ಕಾರ್ಡ್‌ ಪಡೆದಿರುವುದಕ್ಕೆ ವಿವರಣೆ ಕೇಳಿ, ಇಲ್ಲಿಯವರೆಗೆ ರೇಷನ್‌ ತೆಗೆದುಕೊಂಡಿದ್ದಕ್ಕೆ ದಂಡ ಸಹ ವಿಧಿಸಲಾಗುತ್ತಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+