RASTHA: 'ಹೈವೇ' ಅಪಘಾತಗಳಲ್ಲಿ ಜೀವಹಾನಿ ತಡೆಗೆ, ಜನರ ರಕ್ಷಣೆಗೆ ಬರಲಿರುವ 'ರಾಸ್ತಾ', ಈ ಮಹತ್ವದ ಅಭಿಯಾನ ಬಗ್ಗೆ ತಿಳಿಯಿರಿ
ಬೆಂಗಳೂರು, ಮಾರ್ಚ್ 10: ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಗಾಗ ಭೀಕರ ಅಪಘಾತಗಳು ಸಂಭವಿಸಿ ಜೀವ ಹಾನಿ ಆಗುತ್ತಲೇ ಇವೆ. ಇಂತಹ ಅವಘಡಗಳು ಸಂಭವಿಸಿದಾಗ ಜೀವ ಉಳಿಸುವ, ಅಗತ್ಯ ವೈದ್ಯಕೀಯ ನೆರವಿಗೆ ಬರುವಂತಹ 'ರಾಸ್ತಾ (RASTHA)'ಗೆ ಅಭಿಯಾನ ಆರಂಭವಾಗಿದೆ.
ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯು ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಜೀವ ರಕ್ಷಾ ಟ್ರಸ್ಟ್ ಜೊತೆಗೆ ರಾಸ್ತಾ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಿದೆ.

ಬದುಕಿನಲ್ಲಿ ರಸ್ತೆ-ಸಾರಿಗೆ-ಪ್ರಯಾಣ ಇವೆಲ್ಲವು ಪ್ರಮುಖ ಅಂಗವೇ ಆಗಿದೆ. ಈ ಕಾರಣಕ್ಕೆ ನಿತ್ಯ ಹೆದ್ದಾರಿಗಳಲ್ಲಿ ಓಡಾಡುವವರು ಅಪಘಾತಕ್ಕೀಡಾಗಿ ಸಾವು ನೋವು ನಿತ್ಯ ಸಂಭವಿಸುತ್ತಲೇ ಇದೆ. ವಾರ್ಷಿಕವಾಗಿ ರಸ್ತೆ ಅಪಘಾತಗಳಲ್ಲಿ ಲಕ್ಷಾಂತರ ಜನರು ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಳ್ಳತ್ತಿದ್ದಾರೆ. ಇನ್ನೂ ಕೆಲವರು ತೀವ್ರ ಗಾಯಗಳಿಂದ ಬುದುಕಿನುದ್ದಕ್ಕೂ ನರಳುವಂತಾಗಿದೆ. ಇದನ್ನು ತಡೆಯಲು ಇಲ್ಲವೇ ತ್ವರಿತ ಸ್ಪಂದಿಸುವಂತೆ ಕೆಲಸ ಈ 'ರಾಸ್ತಾ' ಮಾಡಲಿದೆ.
ಈ ಅಭಿಯಾನದಡಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಕ್ಸಿಡೆಂಟಲ್ ಝೋನ್ (ಅಪಘಾತ ಸ್ಥಳ) ಗುರುತಿಸಿದ್ದಾರೆ. ಈ ಸ್ಥಳಗಳ ಎರಡು ಮೂರು ಕಿಲೋ ಮೀಟರ್ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಪೊಲೀಸರು, ಅಗ್ನಿ ಸುರಕ್ಷತಾ ಸಿಬ್ಬಂದಿ, ಆಂಬ್ಯುಲೆನ್ಸ್ ಚಾಲಕರು, ಆಸ್ಪತ್ರೆ ಸಿಬ್ಬಂದಿ ಮತ್ತು ಆಸಕ್ತ ನಾಗರಿಕರಿಗೆ ತರಬೇತಿ ನೀಡುತ್ತಿದ್ದಾರೆ. ಇದರಿಂದ ಅಪಘಾತ ವೇಳೆ ಜೀವಹಾನಿ ತಡೆಗಟ್ಟುವುದು ಉದ್ದೇಶ ಹೊಂದಲಾಗಿದೆ.

ಅಭಿಯಾನ ಕುರಿತು ಪ್ರತಿಕ್ರಿಯಿಸಿದ ಜೀವ ರಕ್ಷಾ ಟ್ರಸ್ಟ್ ಕಾರ್ಯಕ್ರಮ ನಿರ್ದೇಶಕ ಡಾ.ಯೋಗೇಶ್ ಅವರು, ಅಪಘಾತದ ಸಂದರ್ಭಗಳಲ್ಲಿ, ಗಾಯಾಳುಗಳು ಅತಿಯಾದ ರಕ್ತಸ್ರಾವ ಅಥವಾ ಶ್ವಾಸನಾಳದಲ್ಲಿ ಉಂಟಾಗುವ ಅಡೆತಡೆಗಳಿಂದ ಆಸ್ಪತ್ರೆ ಸೇರುವ ಮೊದಲೇ ಮಾರ್ಗ ಮಧ್ಯದಲ್ಲೇ ಸಾವಿಗೀಡಾಗುತ್ತಾರೆ. ಗಾಯಾಳುವಿನ ತಲೆ ಮತ್ತು ಕುತ್ತಿಗೆಯ ಭಾಗ ರಕ್ಷಣೆ, ರಕ್ತಸ್ರಾವ ತಡೆಯುವುದು ಹೇಗೆ? ಎಂಬುದರ ಬಗ್ಗೆ ತರಬೇತಿಯಲ್ಲಿ ಹೆಚ್ಚು ಒತ್ತುಕೊಡಲಾಗಿದೆ.
ಗುರುತಿಸಲಾದ 'ಆಕ್ಸಿಡೆಂಟಲ್ ಝೋನ್' ಪಟ್ಟಿ
2022 ರಲ್ಲಿ ಹೆದ್ದಾರಿ ಸಚಿವಾಲಯವು ಹುಬ್ಬಳ್ಳಿ-ಧಾರವಾಡ, ತುಮಕೂರು, ದಾವಣಗೆರೆ, ಮಂಡ್ಯ, ಮೈಸೂರು, ಬೆಳಗಾವಿ, ಕಲಬುರಗಿ ಹಾಗೂ ಮಂಗಳೂರು ಜಿಲ್ಲೆಯಲ್ಲಿ ಅಪಘಾತ ಸ್ಥಳ ಎಂದು ಗುರುತಿಸಿದೆ. ಇಂತಹ ಪ್ರದೇಶಗಳ ಬಲಿ 'ರಾಸ್ತಾ' ಮೂಲಕ ಪ್ರತಿ ಪ್ರಮುಖ ಅಪಘಾತ ಸ್ಥಳಗಲ್ಲಿ 160 ನುರಿತ ಪ್ರತಿಸ್ಪಂದಕರು ಮತ್ತು 60 ತರಬೇತಿ ಪಡೆದ ಆಸ್ಪತ್ರೆ ಸಿಬ್ಬಂದಿ ಸದಾ ಸಜ್ಜಾಗಿರುತ್ತಾರೆ. ವಿವಿಧ ಅವಧಿಗೆ ಅವರು ಕಾರ್ಯ ನಿರ್ವಹಿಸಿರುತ್ತಾರೆ ಎಂದು ಅವರು ಮಾಹಿತಿ ನೀಡಿದರು.
ಲಭ್ಯ ಮಾಹಿತಿ ಪ್ರಕಾರ, ಕರ್ನಾಟಕ ರಾಜ್ಯದಲ್ಲಿ ವಾರ್ಷಿಕವಾಗಿ ಅಪಘಾತದಿಂದ 4,000 ಜೀವ ಹಾನಿ ಸಂಭವಿಸುತ್ತಿವೆ. ಮುಂದಿನ ದಿನಗಳಲ್ಲಿ ಅಪಘಾತ ಸಂಭವಿಸಿದಾಗ ಕೂಡಲೇ ಹತ್ತಿರದ ಆಸ್ಪತ್ರೆಗೆ ಮಾಹಿತಿ ನೀಡಲಾಗುತ್ತದೆ. ಸ್ಥಳಕ್ಕೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಸಾವಿನ ಸಂಖ್ಯೆ ಇಳಿಕೆ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.












Click it and Unblock the Notifications