ನಿರ್ಲಕ್ಷದಿಂದಾಗುವ ಅಪಘಾತಕ್ಕೆ ವಿಮೆ ಇಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ನವದೆಹಲಿ, ಸೆಪ್ಟೆಂಬರ್ 04: ವಾಹನ ಚಾಲಕನ ನಿರ್ಲಕ್ಷತನದಿಂದ ಹಾಗೂ ಅತಿ ವೇಗದಿಂದ ವಾಹನ ಚಲಾಯಿಸಿ ಆಗುವ ಅಪಘಾತಕ್ಕೆ ವಿಮೆ ನೀಡಲಾಗದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ವಾಹನ ಚಾಲಕರು, ಮೊಬೈಲ್ ನಲ್ಲಿ ಮಾತನಾಡುತ್ತಾ ಅಪಘಾತವಾದರೆ, ಹೆಲ್ಮೆಟ್ ಧರಿಸದೆ ಅಥವಾ ಅತಿ ವೇಗವಾಗಿ ವಾಹನ ಚಲಾಯಿಸಿ ಅಪಘಾತವಾದರೆ ಆ ವ್ಯಕ್ತಿಗೆ ವಿಮಾ ಸಂಸ್ಥೆಗಳು ವಿಮಾ ಮೊತ್ತವನ್ನು ಪಾವತಿಸುವುದಿಲ್ಲ.
ಆರು ವರ್ಷದ ಹಿಂದೆ ಕಾರು ಅಪಘಾತದಲ್ಲಿ ಮೃತಪಟ್ಟ ಕಾರು ಚಾಲಕ ದಿಲಿಪ್ ಭೌಮಿಕ್ ಅವರ ಕುಟುಂಬಕ್ಕೆ ವಿಮಾ ಮೊತ್ತ 10.57 ಲಕ್ಷ ಪಾವತಿಸುವಂತೆ ಆದೇಶ ಮಾಡಿತ್ತು. ಆದರೆ ವಿಮಾ ಸಂಸ್ಥೆಯು ಆದೇಶ ಪ್ರಶ್ನಿಸಿ ಸುಪ್ರಿಂ ಕೋರ್ಟ್ ಮೊರೆ ಹೋಗಿತ್ತು.

ಕಾರು ಚಾಲಕ ದಿಲಿಪ್ ಭೌಮಿಕ್ ಅತಿ ವೇಗದಿಂದ, ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿದ್ದಕ್ಕೆ ಮೃಪಟ್ಟಿದ್ದಾರೆ ಎಂದು ಸುಪ್ರಿಂ ಕೋರ್ಟ್‌ನಲ್ಲಿ ಸಾಬೀತಾದ ಕಾರಣ ಸುಪ್ರೀಂ ಕೋರ್ಟ್ ಈ ರೀತಿಯ ತೀರ್ಪು ನೀಡಿದೆ.
ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸಿ ಅಪಘಾತವಾದರೆ, ಚಾಲಕನ ಅಜಾಗರೂಕತೆಯಿಂದ ಅಪಘಾತವಾದರೆ, ಅಪಘಾತವಾದ ಸಮಯದಲ್ಲಿ ಹೆಲ್ಮೆಟ್ ಧರಿಸದಿದ್ದರೆ ವಿಮೆ ಸಂಸ್ಥೆಗಳು ವಿಮೆ ಹಣವನ್ನು ನೀಡುವಂತಿಲ್ಲ. ಚಾಲಕರೂ ಆದಷ್ಟು ಜಾಗರೂಕರಾಗಿ ವಾಹನ ಚಲಾಯಿಸುವುದು ಉತ್ತಮ. ಇಲ್ಲಿದಿದ್ದರೆ ಜೀವವೂ ಹೋಗುತ್ತದೆ, ವಿಮೆಗೆ ಕಟ್ಟಿದ ಹಣವೂ ಹೋಗುತ್ತದೆ.












Click it and Unblock the Notifications