ಕಾವೇರಿ ಭವನದಲ್ಲಿ ಸಂಸದೆ ರಮ್ಯಾ ಕಚೇರಿ
ಮಂಡ್ಯ, ಅ.7 : ಮಂಡ್ಯ ಲೋಕಸಭಾ ಕ್ಷೇತ್ರದ ಐದು ಸಾವಿರ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಶೂಗಳನ್ನು ನೀಡಲಾಗುವುದು ಎಂದು ಸಂಸದೆ ರಮ್ಯಾ ಹೇಳಿದ್ದಾರೆ. ಈ ಕುರಿತು ಈಗಾಗಲೇ ಕಂಪನಿ ಜೊತೆಗೆ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ.
ಭಾನುವಾರ ಮಂಡ್ಯ ಕಾವೇರಿ ಭವನದಲ್ಲಿ ಲೋಕಸಭಾ ಸದಸ್ಯರ ಕಚೇರಿ ಉದ್ಘಾಟಿಸಿ ಮಾತನಾಡಿದ ರಮ್ಯಾ, ಕ್ಷೇತ್ರದ ಐದು ಸಾವಿರ ಶಾಲಾ ಮಕ್ಕಳಿಗೆ ಉಚಿತವಾಗಿ ಶೂ ವಿತರಿಸಲಾಗುವುದು ಎಂದರು.

ಈಗಾಗಲೇ ಖಾಸಗಿ ಕಂಪನಿಯೊಂದಿಗೆ ಈ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ. ಶೀಘ್ರವೇ ಶಾಲಾ ಮಕ್ಕಳಿಗೆ ಶೂ ವಿತರಿಸುವ ಕಾರ್ಯ ನಡೆಯಲಿದೆ ಎಂದು ಹೇಳಿದರು. ಸಾಧ್ಯವಾದಷ್ಟು ಶಾಲೆಗಳಿಗೆ ನಾನೇ ಹೋಗಿ ಶೂ ವಿತರಣೆ ಮಾಡುತ್ತೇನೆ ಎಂದು ರಮ್ಯಾ ಭರವಸೆ ನೀಡಿದರು.
ನಾನು ಪ್ರತಿ ದಿನವೂ ಕ್ಷೇತ್ರದ ಜಿಲ್ಲೆಯ ಒಂದೊಂದು ತಾಲೂಕು ಕೆಲವು ಗ್ರಾಮಗಳನ್ನು ಭೇಟಿ ಮಾಡುವ ಉದ್ದೇಶ ಹೊಂದಿದ್ದೇನೆ. ನಾನು ಭೇಟಿ ನೀಡುವ ಸ್ಥಳದಲ್ಲೇ ಸಾರ್ವಜನಿಕರಿಂದ ದೂರು ಸ್ವೀಕರಿಸುತ್ತಿದ್ದೇನೆ. ಅವರ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಇಲಾಖೆಯವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದರು.
ಕಚೇರಿ ಸ್ಥಳಾಂತರ : ಮಂಡ್ಯದ ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದ ಸಂಸದೆ ರಮ್ಯಾ ಕಚೇರಿಯನ್ನು ಕಾವೇರಿ ಭವನಕ್ಕೆ ಸ್ಥಳಾಂತರ ಮಾಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ರಮ್ಯಾ ಹೇಳಿದರು.
ಕಾವೇರಿ ಭವನದ ಕಚೇರಿ ಬಸ್ ನಿಲ್ದಾಣಕ್ಕೆ ಹತ್ತಿರವಿದೆ. ವಿವಿಧ ತಾಲೂಕುಗಳಿಂದ ಆಗಮಿಸುವ ಜನರು, ಇಲ್ಲಿಗೆ ಭೇಟಿ ನೀಡಲು ಸ್ಥಳ ಉತ್ತಮವಾಗಿದೆ ಎಂದರು. ಸಾರ್ವಜನಿಕರ ಅಹವಾಲುಗಳನ್ನು ಖುದ್ದಾಗಿ ನಾನೇ ಪರಿಶೀಲಿಸಿ, ಸಹಿ ಮಾಡುತ್ತೇನೆ ಎಂದರು ರಮ್ಯಾ ತಿಳಿಸಿದರು.
ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಲು 15 ದಿನಗಳಿಗೊಮ್ಮೆ ಜಿಲ್ಲಾಧಿಕಾರಿ, ಜಿಪಂ ಸಿಇಓ ಜೊತೆ ಸಭೆ ನಡೆಸುತ್ತೇನೆ ಎಂದು ರಮ್ಯಾ ಇದೇ ಸಂದರ್ಭದಲ್ಲಿ ಹೇಳಿದರು. ಹೇಳಿದರು.
ಕಚೇರಿ ಬದಲಾವಣೆ ಏಕೆ : ಲೋಕಸಭಾ ಸದಸ್ಯರ ಕಚೇರಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಇರುತ್ತದೆ. ಆದರೆ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಕು ತಂದೆ ಆರ್.ಟಿ. ನಾರಾಯಣ್ ಅವರ ನನೆಪು ಮರುಕಳಿಸುತ್ತದೆ.
ಆ ದುಃಖ ಮರೆಯುವುದು ಅಸಾಧ್ಯ. ಆದ್ದರಿಂದ ಡಿಸಿ ಕಚೇರಿ ಹೊರತುಪಡಿಸಿ ಬೇರೆ ಕಡೆ ಅವಕಾಶ ನೀಡಿ ಎಂದು ರಮ್ಯಾ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ ಇಲಾಖೆಗೆ ಸೇರಿದ ಕಾವೇರಿ ಭವನದಲ್ಲಿ ನೂತನ ಕಚೇರಿ ತೆರೆಯಲಾಗಿದೆ.
Signed up with a shoe brand company in return for shoes for school kids in my constituency :)
— Divya Spandana/Ramya (@divyaspandana) October 3, 2013












Click it and Unblock the Notifications