• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Video:"ಕಮಲಕ್ಕೆ ಹಾರಿದ 15 ಶಾಸಕರಿಗೆ ಬಿಜೆಪಿ ರಾಜಕೀಯ ಸಮಾಧಿ"

|

ಬೆಂಗಳೂರು, ಮಾರ್ಚ್.03: ಯುವತಿ ಜೊತೆಗಿನ ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ಬೆನ್ನಲ್ಲೇ ಬಿಜೆಪಿಗೆ ಜಿಗಿದ 15 ಶಾಸಕರ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಆಪರೇಷನ್‌ಗೊಳಪಟ್ಟು ಜಿಗಿದ "ಜಂಪಿಂಗ್ ಸ್ಟಾರ್ಸ್"ಗಳಿಗೆ ಕರ್ನಾಟಕದ ಭಾರತೀಯ ಜನತಾ ಪಕ್ಷವು ರಾಜಕೀಯ ಸಮಾಧಿ ತೊಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಅಂದೇ ಸದನದಲ್ಲಿ ಗಂಟಾಘೋಷವಾಗಿ ಭವಿಷ್ಯ ನುಡಿದಿದ್ದರು" ಎಂದು ಕಾಂಗ್ರೆಸ್ ತನ್ನ ಟ್ವೀಟ್ ನಲ್ಲಿ ಉಲ್ಲೇಖಿಸಿದೆ.

ಸಿಡಿ ಪ್ರಕರಣ: ರಮೇಶ್ ಜಾರಕಿಹೊಳಿ ರಾಜೀನಾಮೆ ಅಂಗೀಕರಿಸಿದ ಯಡಿಯೂರಪ್ಪಸಿಡಿ ಪ್ರಕರಣ: ರಮೇಶ್ ಜಾರಕಿಹೊಳಿ ರಾಜೀನಾಮೆ ಅಂಗೀಕರಿಸಿದ ಯಡಿಯೂರಪ್ಪ

ಕಾಂಗ್ರೆಸ್ ನಿಂದ ಬಿಜೆಪಿಗೆ ಜಿಗಿದ 15 ಮಂದಿ ಶಾಸಕರ ಪೈಕಿ ಒಬ್ಬೊಬ್ಬರನ್ನೇ ಮುಗಿಸುವುದಕ್ಕೆ ಹೊರಟಿದೆ. "ಇಂದು ಅದರಂತೆಯೇ ಹೆಚ್.ವಿಶ್ವನಾಥ್, ರಮೇಶ್ ಜಾರಕಿಹೊಳಿ... ಒಬ್ಬೊಬ್ಬರನ್ನಾಗಿಯೇ ಒಂದೊಂದು ರೀತಿಯಲ್ಲಿ ಮುಗಿಸುತ್ತಿದೆ ಬಿಜೆಪಿ" ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಂದು ಹೇಳಿದ್ದೇನು?:

   ಅನಾಮಿಕ ಕರೆಗೆ ಹೆದುರಿದ ಪೊಲೀಸ್ ತಂಡ!! | TAJ MAHAL in TROUBLE | Oneindia Kannada

   "ಒಬ್ಬ ಬಂದು ನಂಗೆ ಪವರ್ ಸಿಗುತ, ಅವನ್ಯಾರೋ ಒಬ್ಬ ಹೇಳ್ತಾನೆ ನಂಗೆ ಡೆಪ್ಯೂಟಿ ಸಿಎಂ, ನನಗೆ ಜಲಸಂಪನ್ಮೂಲ, ಇನ್ನೊಬ್ರಿಗೆ ಪವರ್ ಅಂತೆ, ಇನ್ನೊಬ್ಬರಿಗೆ ಗೃಹ ಖಾತೆಯಂತೆ. ನಾನ್ ಹೇಳಿದೆ ಲೇ.. ಎಲ್ಲೋ ಹಾಕತೌರೆ ಕಣೋ ಟೋಪಿ ನಿಮ್ಗೆ 15 ಜನರಕ್ಕೂ.. ನಿಮ್ 15 ಜನಕ್ಕೂ ಸಮಾಧಿ ಮಾಡ್ತಾರೆ. ರಾಜಕೀಯದ ಸಮಾಧಿ. ಹಾ ರಾಜಕೀಯವಾಗಿ ಸಮಾಧಿ ಮಾಡುತ್ತಿದ್ದಾರೆ ಇಂಥ ಮಾತಿಗೆಲ್ಲ ಬೀಳುವುದಕ್ಕೆ ಹೋಗಬೇಡಿ ಕಣ್ರೋ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿರುವ ವಿಡಿಯೋವನ್ನು ಟ್ವೀಟ್ ಮಾಡಲಾಗಿದೆ.

   English summary
   Ramesh Jarkiholi CD Row : Congress Alleges To BJP Doing Grave For 15 MLAs
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X