ಕಾಂಗ್ರೆಸ್​ಗೆ ಬರ್ತಿಯೋ ಸಿಡಿ ಬಿಡ್ಲೋ ಎಂದು ಮಂತ್ರಿಗೆ ಡಿಕೆ ಶಿವಕುಮಾರ್ ಹೆದರಿಸುತ್ತಿದ್ದಾರೆ: ರಮೇಶ್​ ಜಾರಕಿಹೊಳಿ ಆರೋಪ

ಚುನಾವಣೆ ಹತ್ತಿರವಾಗುತ್ತಿದ್ದಂತೆ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಡುವೆ ಜಟಾಪಟಿ ಏರ್ಪಟ್ಟಿದೆ.

ಬೆಳಗಾವಿ,ಮಾರ್ಚ್‌ 13: ಚುನಾವಣೆ ಹತ್ತಿರವಾಗುತ್ತಿದ್ದಂತೆ ಬೆಳಗಾವಿ ರಾಜಕಾರಣ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದು, ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ನಡುವೆ ಮತ್ತೆ ಕಳಗ ಮುಂದುವರೆದಿದೆ.

ಈ ಕುರಿತು ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಮಾತನಾಡಿ, ಸಿಡಿ ಮಾಡಿ ಮಂತ್ರಿಗಳಿಗೆ ಬ್ಲಾಕ್ ಮೇಲ್ ಮಾಡುವದೇ ಡಿ.ಕೆ.ಶಿವಕುಮಾರ್‌ ಉದ್ಯೋಗವಾಗಿದೆ. ಕಾಂಗ್ರೆಸ್‌ ಗೆ ಬರ್ತಿಯೋ ಸಿಡಿ ಬಿಡ್ಲೋ ಎಂದು ಮಂತ್ರಿ ಗೆ ಡಿ ಕೆ ಶಿವಕುಮಾರ್‌ ಹೆದರಿಸುತ್ತಿದ್ದಾರೆ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹೊಸ ಬಾಂಗ್‌ ಸಿಡಿಸಿದ್ದಾರೆ.

Ramesh Jarkiholi alleges DK Shivakumar Blackmailing Ministers by CD to Join Congress Party

ಬೇರೆಯವರ ವೈಯಕ್ತಿಕ ವಿಚಾರವನ್ನು ಸಿಡಿ ಮಾಡುವುದೇ ಡಿಕೆಶಿ ಉದ್ಯೋಗ.ಈ ಸತ್ಯವನ್ನ ಸ್ವತಃ ನನ್ನ ಮಗನ ಮುಂದೆ ಸತ್ಯವನ್ನ ಡಿ ಕೆ ಶಿವಕುಮಾರ್‌ ಬಾಯಿ ಬಿಟ್ಟು ಹೇಳಿದ್ದಾನೆ. ನನ್ನ ಉದ್ದೋಗವೇ ಅದು ನಾನೇನು ಮಾಡಲಿ ಎಂದು ಹೇಳಿದ್ದಾನೆ. ಆ ಸಿಡಿಗಳನ್ನು ಮಾಡಿ ಬ್ಲಾಕ್ ಮೇಲ್ ಮಾಡುತ್ತಾನೆ ಆ ಡಿಕೆ ಶಿವಕುಮಾರ್‌ ಎಂದು ರಮೇಶ್‌ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಇನ್ನೂ ಈ ಬಾರಿ ನಾನು ಏನಾದರೂ ಮಾಡಿ ಸುಳ್ಳು ಹೇಳಿದ್ರೆ ಆ ಗ್ರಾಮ ಲಕ್ಷ್ಮಿ ತಾಯಿ ನನ್ನ ನೋಡಿಕೊಳ್ಳಲಿ ಆದರೆ, ನಾನು ಲಕ್ಷ್ಮೀ ದೇವಿ ಮೇಲೆ ಆಣೆ ಮಾಡಿ ಹೇಳುತ್ತೇನೆ ಡಿಕೆಶಿ ಉದ್ಯೋಗವೇ ಸಿಡಿ ಮಾಡುವುದು ಎಂದು ರಮೇಶ್ ಡಿ.ಕೆ. ಶಿವಕುಮಾರ್‌ ಮೇಲೆ ತೀವ್ರವಾದ ವಾಗ್ದಾಳಿ ನಡೆಸಿದರು.

Ramesh Jarkiholi alleges DK Shivakumar Blackmailing Ministers by CD to Join Congress Party

ನನ್ನ ಹತ್ತಿರ ಕಾಂಗ್ರೆಸ್ ನ ಕೆಲವು ಶಾಸಕರು ಬಂದು ಹೇಳುತ್ತಿದ್ದಾರೆ, ಅವರ ವಿರುದ್ಧ ಮಾತನಾಡಿದ್ರೆ ಸಿಡಿ ತೋರಿಸಿ ಹೆದರಿಸುತ್ತಿದ್ದಾರೆ. ನನ್ನ ಸಿಡಿ ಮಾಡಿದ್ರು ಆದರೆ, ನಮ್ಮ ಧರ್ಮಪತ್ನಿ ನನ್ನ ಸಹೋದರರು ನನ್ನ ಮಕ್ಕಳು ನನಗೆ ನೈತಿಕ ಬೆಂಬಲ ನೀಡಿದ್ರು ಆದ್ದರಿಂದ ನಾನು ಹೆದರಿಲಿಲ್ಲ ಆದರೆ, ಬೇರೆಯವರ ಕಥೆ ಏನೂ..? ಎಂದು ರಮೇಶ್ ಜಾರಕಿಹೊಳಿ‌ ಪ್ರಶ್ನೆ ಮಾಡಿದರು.

ನನ್ನ ಸಿಡಿ ರೆಡಿಯಾಗಿದ್ದು ಕನಕಪುರದಲ್ಲಿ ಆದ್ರೆ ಆ್ಯಕ್ಟಿಂಗ್ ಮಾಡಿದ್ದು ಬೆಳಗಾವಿ ನಾಯಕಿ ಎಂದು ಪರೋಕ್ಷವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಮೇಲೆ ಮೇಲೆ ಹರಿಹಾಯ್ದ ಅವರು, ಏನಾದರೂ ಮಾಡಿಯಾದ್ರೂ ಸರಿಯೇ ನಾವು ಮತ್ತೆ ಬಿಜೆಪಿ ಸರ್ಕಾರ ತರುತ್ತೇವೆ. ಯಾವುದೇ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ಅಧಿಕಾರ ಮಾಡಲು ನಾನು ಬಿಡುವುದಿಲ್ಲ, ನಾ‌ನು ಶಪತ ಮಾಡಿದ್ದೇನೆ ಎಷ್ಟೇ ಖರ್ಚಾದರೂ ಸರಿ, ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುತ್ತೇನೆ ಎಂದು ರಮೇಶ್ ಜಾರಕಿಹೊಳಿ ಮತ್ತೊಮ್ಮೆ ಪುನರುಚ್ಚಿಸಿದ್ದಾರೆ.

ನಾನು ಯಾವ ರೀತಿ ಅಧಿಕಾರಕ್ಕೆ ತರುತ್ತೇನೆ ಎಂದು ಬಹಿರಂಗವಾಗಿ ಹೇಳಲು ಆಗುವುದಿಲ್ಲ, ಆದರೆ ರಾಜ್ಯದಲ್ಲಿ 2023ಕ್ಕೆ ಬಿಜೆಪಿಯನ್ನು ಅಧಿಕಾರಕ್ಕೆ ಬರೋದು ಶತಸಿದ್ದ ಹಾಗೂ 2024ರಲ್ಲಿ ಕೇಂದ್ರದಲ್ಲಿ ಬಿಜೆಪಿ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಯಾಗುತ್ತಾರೆ. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾದ್ರೆ, ಆಗ ನಮ್ಮ ದೇಶ ವಿಶ್ವದ ದೊಡ್ಡಣ್ಣಾ ನಾವು ಆಗುತ್ತೇವೆ. ಮೋದಿ ಪ್ರಧಾನಿಯಾದ ನಂತರದಲ್ಲಿ ಹೊರದೇಶಗಳಲ್ಲಿ ಭಾರತಿಯರನ್ನು ನೋಡುವ ದೃಷ್ಟಿಕೋನ ಬದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನ ಹಾಡಿ ಹೊಗಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+