ಫೇಸ್ ಬುಕ್ ನಲ್ಲಿ ವಿ.ಎಸ್ ಉಗ್ರಪ್ಪಗೆ ಜೀವ ಬೆದರಿಕೆ, ಇಬ್ಬರ ಬಂಧನ

Posted By: Ramesh
Subscribe to Oneindia Kannada

ಬೆಂಗಳೂರು, ಡಿಸೆಂಬರ್. 25 : ಕಾಂಗ್ರೆಸ್ ಮುಖಂಡ ಮತ್ತು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪಗೆ ಜೀವ ಬೆದರಿಕೆ ಹಾಕಿದ್ದ ಇಬ್ಬರನ್ನು ಶನಿವಾರ ವಿಧಾನ ಸೌಧ ಪೊಲೀಸರು ಬಂಧಿಸಿದ್ದಾರೆ.

ತಮಗೆ ಜೀವ ಬೆದರಿಕೆ ಇರುವ ಬಗ್ಗೆ ಉಗ್ರಪ್ಪ ಅವರು ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದರು. ಗುರುವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ವಿ.ಎಸ್.ಉಗ್ರಪ್ಪ ಅವರು, 'ರಾಮಚಂದ್ರಾಪುರ ಮಠದ ಶ್ರೀಗಳ ವಿಚಾರದಲ್ಲಿ ಮಹಿಳೆ ಪರವಾದ ನನ್ನ ನಿಲುವಿಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ಫೇಸ್ ಬುಕ್ ನಲ್ಲಿ 'ಸ್ವಚ್ಛ ಬ್ರಾಹ್ಮಣರ ಗ್ರೂಪ್' ನಲ್ಲಿ ರಾಜೇಶ್ವರಿ ಸುವಿಘ್ನ ಎಂಬಾತ ಬೆದರಿಕೆ ಸಂದೇಶ ಕಳಿಸಿದ್ದಾನೆ' ಎಂದು ಹೇಳಿದ್ದರು. [ವಿ ಎಸ್ ಉಗ್ರಪ್ಪನವರಿಗೆ ಭಕ್ತರ ಬೆದರಿಕೆ: ಮಠದ ಸ್ಪಷ್ಟೀಕರಣ]

ramachandrapura mutt devotees threatened in facebook to mlc vs ugrappa 2 arrested

'ಇಂಥವರನ್ನು ಕೊಲ್ಲಬೇಕು, ಆಗ ಮಠದ ತಂಟೆಗೆ ಬರಲ್ಲ' ಎನ್ನುವ ಸಂದೇಶವನ್ನು ಫೇಸ್ ಬುಕ್ ನಲ್ಲಿ ಹಾಕಲಾಗಿತ್ತು.

ಇದರ ವಿರುದ್ಧ ಉಗ್ರಪ್ಪ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ವಿಧಾನಸೌಧ ಪೊಲೀಸರು ಶನಿವಾರ ಇಬ್ಬರನ್ನು ಬಂಧಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vidhana Soudha police on Saturday arrested two men including a teacher of a private college on charges of making vulgar and derogatory comments against MLC V S Ugrappa, chairman of the Committee on Atrocities on Women and Children.
Please Wait while comments are loading...