ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯೋತ್ಸವ ವಿಶೇಷ: ನುಡಿ ಕನ್ನಡ ಬ್ಲಾಗಿಗೆ ಸ್ವಾಗತ

By Mahesh
|
Google Oneindia Kannada News

ಬೆಂಗಳೂರು, ನ.04: ನವೆಂಬರ್ ತಿಂಗಳ ಹೊಸ್ತಿಲಲ್ಲಿ ಎಂದಿನಂತೆ ಮತ್ತೊಂದು ಸಂಭ್ರಮ ಮತ್ತು ಸಡಗರಕ್ಕೆ ಕರ್ನಾಟಕ ಸಜ್ಜಾಗುತ್ತಿದೆ. ಕನ್ನಡ, ಕರ್ನಾಟಕ ಮತ್ತು ಕನ್ನಡಿಗರ ಇತಿಹಾಸವನ್ನು ಮೆಲುಕು ಹಾಕುತ್ತಾ ಸಂಭ್ರಮದ ಆಚರಣೆಗಳು ಮತ್ತು ಕನ್ನಡವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚೆಗಳು ಈ ತಿಂಗಳಿನಲ್ಲಿ ಹೆಚ್ಚಾಗಿ ನಡೆಯುತ್ತವೆ. ಈ ಸಂದರ್ಭದಲ್ಲಿ 'ನುಡಿ ಕನ್ನಡ' ಎಂಬ ಹೆಸರಿನ ಮಿಂಬಾಗಿಲ(ಬ್ಲಾಗ್) ಕುರಿತ ಪರಿಚಯಾತ್ಮಕ ಲೇಖನ ಇದಾಗಿದೆ.

ಕನ್ನಡದ ಸುತ್ತ ನಡೆಯುವ ಚರ್ಚೆಗಳನ್ನು ಸಾಹಿತ್ಯ-ಕಲೆ-ಮನೋರಂಜನೆ-ಅಭಿಮಾನ ಎಂಬ ಕೆಲವೇ ಕೆಲವು ವಲಯಗಳಿಗೆ ಸೀಮಿತಗೊಳಿಸದೇ ಮುಂದಿನ ಹಲವಾರು ಸವಾಲುಗಳಿಗೆ ಕನ್ನಡವನ್ನು ಸಜ್ಜುಗೊಳಿಸುವ ಬಗ್ಗೆ ಗಂಭೀರ ಚಿಂತನೆಗಳು ನಡೆಯಬೇಕಾದ ಅಗತ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ.

ಯಾಕೆಂದರೆ ಜಾಗತೀಕರಣದ ಈ ಹೊತ್ತಿನಲ್ಲಿ ನುಡಿಗಳು ಎದುರಿಸುತ್ತಿರುವ ಸವಾಲುಗಳು ಹಿಂದೆಲ್ಲಾ ಎದುರಾಗಿದ್ದ ಸವಾಲುಗಳಿಗಿಂತ ಬೇರೆಯೇ ತೆರನದ್ದಾಗಿವೆ. ಈ ನಿಟ್ಟಿನಲ್ಲಿ, ಇಂತದೇ ಸವಾಲುಗಳನ್ನು ಎದುರಿಸಿ ಮೆಟ್ಟಿ ನಿಂತಿರುವ ಮುಂದುವರೆದ ನುಡಿಸಮುದಾಯಗಳು ಕೈಗೊಂಡಂತಹ ಕೆಲಸಗಳೇನು ಎಂಬ ಬಗ್ಗೆಯೂ ಕನ್ನಡ ಸಮಾಜದಲ್ಲಿ ಚರ್ಚೆ ನಡೆಯಬೇಕಿದೆ.

Karnataka Rajyotsava special : Kannada Blog to glorify our culture, Language

ನುಡಿಯನ್ನು ಕೇವಲ ಸಂಪರ್ಕ ಮಾಧ್ಯಮವಾಗಿ ನೋಡದೆ ಅದನ್ನು ಜನರ ಏಳಿಗೆಯ ಸಾಧನವನ್ನಾಗಿ ಮಾಡಿ ನುಡಿಯ ಸಾಧ್ಯತೆಗಳನ್ನು ಎಲ್ಲಾ ವಲಯಗಲ್ಲಿ ಹೆಚ್ಚಿಸಿರುವುದರಿಂದಲೇ ಹಲವಾರು ನಾಡುಗಳು ಇಂದು ಜಾಗತೀಕರಣವನ್ನು ಸಮರ್ಥವಾಗಿ ಎದುರಿಸುತ್ತಿವೆ. ತಮ್ಮ ನುಡಿಗೆ ಹೆಚ್ಚು ಬಲವನ್ನು ತುಂಬಿ, ತಮ್ಮ ನುಡಿಯ ಸುತ್ತ ಏಳಿಗೆಗೆ ಬೇಕಾಗಿರುವ ಎಲ್ಲಾ ಏರ್ಪಾಡನ್ನು ಕಟ್ಟಿಕೊಂಡಿರುವುದರಿಂದಲೇ ಆ ನಾಡುಗಳು ಮೇಲುಗೈ ಹೊಂದಲು ಸಾಧ್ಯವಾಗಿದೆ.

ಕನ್ನಡ ಸಮಾಜವೂ ಕೂಡ ಕನ್ನಡವನ್ನು ಆ ಮಟ್ಟಕ್ಕೆ ಎತ್ತರಿಸಲು ಸಾಧ್ಯವಿದೆ. ಆದರೆ ಅದು ಸಾಧ್ಯವಾಗಬೇಕೆಂದರೆ ಕನ್ನಡದ ಕೆಲವು ಮೂಲಭೂತ ವಿಷಯಗಳ ಬಗ್ಗೆ ಚರ್ಚೆ ತುಂಬಾ ಮುಖ್ಯವಾಗಿದೆ. ಕನ್ನಡದ ನಿಜವಾದ ಗುರುತು-ಲಕ್ಷಣಗಳನ್ನು ತಿಳಿಯದೆಯೇ, ಕನ್ನಡವನ್ನು ನಾಳೆಗಳಿಗೆ ಸಜ್ಜುಗೊಳಿಸುವ ಈ ಕೆಲಸ ಗೆಲುವನ್ನು ಕಾಣುವುದಿಲ್ಲ. ಹಲವಾರು ಮುಂದಿವರೆದ ನುಡಿಸಮುದಾಯಗಳಲ್ಲಿ, ತಮ್ಮ ನುಡಿಯ ನಿಜಸ್ವರೂಪದ ಬಗೆಗಿನ ಚರ್ಚೆಗಳು ಮುಖ್ಯವಾಹಿನಿಯ ಚರ್ಚೆಗಳಲ್ಲೊಂದು ಎಂಬುದನ್ನು ನಾವು ಗಮನಿಸಬೇಕಾಗಿದೆ.

ಆ ನಿಟ್ಟಿನಲ್ಲಿ ಒಂದು ಅರಿವಿನ ಕಣಜವನ್ನು ಒದಗಿಸುವ ಪ್ರಯತ್ನವೇ - "ನುಡಿಕನ್ನಡ" ಮಿಂಬಾಗಿಲು (https://nudikannada.wordpress.com).

ಕನ್ನಡದ ನಿಜ ಸ್ವರೂಪದ ಬಗ್ಗೆ, ಕನ್ನಡ ಮತ್ತು ಬೇರೆ ನುಡಿಗಳ ನಡುವಿನ ಸಂಬಂಧದ ಬಗ್ಗೆ, 'ಕನ್ನಡ ನುಡಿ' ಕುರಿತು ಸಂಶೋಧನೆಗಳು ಹೊರಗೆಡವಿರುವ ಸತ್ಯಗಳ ಬಗ್ಗೆ, ಕನ್ನಡದ ಸುತ್ತ ಇರುವ ನಂಬಿಕೆಗಳ ಬಗ್ಗೆ, ಕನ್ನಡ ಎದುರಿಸುತ್ತಿರುವ ತೊಡಕುಗಳ ಬಗ್ಗೆ, ಕನ್ನಡದ ಇತಿಹಾಸದ ಬಗ್ಗೆ, ಮುಂದುವರೆದ ನಾಡುಗಳು ತಮ್ಮ ನುಡಿಗಳಿಗೆ ಹೇಗೆ ಕಸುವನ್ನು ತುಂಬಿದವು ಎಂಬುದರ ಬಗ್ಗೆ, ಜಗತ್ತಿನ ಎಲ್ಲಾ ಕನ್ನಡಿಗರ ಮುಂದಿಡುವ ಉದ್ದೇಶ ಈ ಮಿಂಬಾಗಿಲಿನದು (web portal). ಕನ್ನಡಿಗರ ನಾಳೆಗಳನ್ನು ಕಟ್ಟಲಿಕ್ಕೆ ಬೇಕಾದ ಅಡಿಪಾಯದ ಅರಿಮೆಯನ್ನು ಈ ನುಡಿಕನ್ನಡ ಮಿಂಬಾಗಿಲು ಒದಗಿಸಬೇಕು ಮತ್ತು ಈ ಮಿಂಬಾಗಿಲಿನಲ್ಲಿ ಮೂಡಿಬರುವ ಬರಹಗಳಿಂದ ಹೆಚ್ಚು ಹೆಚ್ಚು ಕನ್ನಡಿಗರು ಕನ್ನಡದ ನಿಜಸ್ವರೂಪದ ಬಗ್ಗೆ ಅರಿವುಹೊಂದುತ್ತಾ ಕನ್ನಡವನ್ನು ಸಜ್ಜುಗೊಳಿಸುವ ಕೆಲಸಕ್ಕೆ ಮುಂದಾಗುವರು ಎಂಬ ಆಶಯ ನಮ್ಮದು.

English summary
Karnataka Rajyotsava special : Kannada Blog started by Nudi Hammuge team consists of Priyank, Kiran Batni and other intend to glorify our culture, Language.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X