Rajyotsava Award 2025 Winners List: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; ಯಾರೆಲ್ಲಾ ಆಯ್ಕೆ? ಇಲ್ಲಿದೆ ಪಟ್ಟಿ
ಬೆಂಗಳೂರು, ಅಕ್ಟೋಬರ್ 30: 2025 ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ರಾಜ್ಯ ಸರ್ಕಾರ ಗುರುವಾರ ಬಿಡುಗಡೆ ಮಾಡಿದೆ. 2025-26ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2025 ಪ್ರಕಟವಾಗಿದ್ದು, ಬಹುಭಾಷಾ ನಟ ಪ್ರಕಾಶ್ ರಾಜ್ ಸೇರಿದಂತೆ ಒಟ್ಟು 70 ಜನ ಸಾಧಕಕರನ್ನ ಆಯ್ಕೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಿ ಇಂದು (ಅಕ್ಟೋಬರ್ 30) ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿಗೆ ಆಯ್ಕೆಯಾದವರ ಹೆಸರು ಪ್ರಕಟಿಸಿದ್ದು, ಇದೇ ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೆ ಒಟ್ಟು 70 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ರಾಜ್ಯೋತ್ಸವ ಪ್ರಶಸ್ತಿ 2025ರ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, 2025ನೇ ಸಾಲಿನಲ್ಲಿ 70 ಮಂದಿಗೆ ವಿವಿಧ ಕ್ಷೇತ್ರದಲ್ಲಿನ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಎಲ್ಲಾ ಜಿಲ್ಲೆಗಳಿಗೆ ಪ್ರತಿನಿತ್ಯ ನೀಡಲಾಗಿದೆ.

ವಿವಿಧ ವಲಯಗಳ ಅರ್ಹರಿಗೆ ನಾಡಿನ ಅತ್ಯುನ್ನತ ಗೌರವ ನೀಡಲಾಗುತ್ತಿದೆ. ಪ್ರಶಸ್ತಿ ನೀಡಿಕೆಯಲ್ಲಿ ಜಿಲ್ಲಾವಾರು, ಸಾಮಾಜಿಕ ಪರಿಪಾಲನೆಯಡಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆಯ್ಕೆ ಸಲಹಾ ಸಮಿತಿ ಸದಸ್ಯರು ಶಿಫಾರಸ್ಸು ಮಾಡಿದ್ದವರನ್ನು ಬಹುತೇಕ ಆಯ್ಕೆ ಮಾಡಲಾಗಿದೆ. ನಾಲ್ಕೈದು ಬಾರಿ ಸಭೆ ನಡೆಸಿದ ಸದಸ್ಯರು ಅರ್ಹರನ್ನು ಆಯ್ಕೆ ಮಾಡಲು ಸಹಕರಿಸಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ಅವರು ತಿಳಿಸಿದ್ದಾರೆ.
ಇತಿಹಾಸದಲ್ಲೇ ಮೊದಲ ಬಾರಿಗೆ ಸಮಗಾರ ಹರಳಯ್ಯ ಸಮುದಾಯಕ್ಕೆ ಸೇರಿದ ಇಬ್ಬರು ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೊದಲೇ ನಿರ್ಧರಿಸಿದಂತೆ ಈ ಬಾರಿ ಯಾವುದೇ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ. 12 ಮಂದಿ ಮಹಿಳೆಯರಿಗೆ ಈ ಬಾರಿ ಪ್ರಶಸ್ತಿ ಆಯ್ಕೆ ಮಾಡಲಾಗಿದೆ. ಈ ಪೈಕಿ ಕೆಲವರು ಸ್ವಯಂ ಮನವಿ ನೀಡಿದ್ರು, ಅಂತಹವರು ಪ್ರಶಸ್ತಿಗೆ ಅರ್ಹರಿದ್ದ ಕಾರಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ಅವರು ಮಾಹಿತಿ ನೀಡಿದ್ದಾರೆ.
ಯಾವ ಕ್ಷೇತ್ರದಿಂದ ಯಾರಿಗೆ ಪ್ರಶಸ್ತಿ?
ಸಾಹಿತ್ಯ ಕ್ಷೇತ್ರ
ಪ್ರೊ. ರಾಜೇಂದ್ರ ಚೆನ್ನಿ - ಶಿವಮೊಗ್ಗ
ತುಂಬಾಡಿ ರಾಮಯ್ಯ - ತುಮಕೂರು
ಪ್ರೊ ಅರ್ ಸುನಂದಮ್ಮ - ಚಿಕ್ಕಬಳ್ಳಾಪುರ
ಡಾ.ಎಚ್.ಎಲ್ ಪುಷ್ಪ - ತುಮಕೂರು
ರಹಮತ್ ತರೀಕೆರೆ - ಚಿಕ್ಕಮಗಳೂರು
ಹ.ಮ. ಪೂಜಾರ - ವಿಜಯಪುರ
ಜಾನಪದ
ಬಸಪ್ಪ ಭರಮಪ್ಪ ಚೌಡ್ಕಿ - ಕೊಪ್ಪಳ
ಬಿ. ಟಾಕಪ್ಪ ಕಣ್ಣೂರು - ಶಿವಮೊಗ್ಗ
ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ - ಬೆಳಗಾವಿ
ಹನುಮಂತಪ್ಪ, ಮಾರಪ್ಪ, ಚೀಳಂಗಿ - ಚಿತ್ರದುರ್ಗ
ಎಂ. ತೋಪಣ್ಣ - ಕೋಲಾರ
ಸೋಮಣ್ಣ ದುಂಡಪ್ಪ ಧನಗೊಂಡ - ವಿಜಯಪುರ
ಸಿಂಧು ಗುಜರನ್ - ದಕ್ಷಿಣ ಕನ್ನಡ
ಎಲ್. ಮಹದೇವಪ್ಪ ಉಡಿಗಾಲ - ಮೈಸೂರು
ಸಂಗೀತ
ದೇವೆಂದ್ರಕುಮಾರ ಪತ್ತಾರ್ - ಕೊಪ್ಪಳ
ಮಡಿವಾಳಯ್ಯ ಸಾಲಿ - ಬೀದರ್
ನೃತ್ಯ ಕ್ಷೇತ್ರ
ಪ್ರೊ. ಕೆ. ರಾಮಮೂರ್ತಿ ರಾವ್ - ಮೈಸೂರು
ಚಲನಚಿತ್ರ /ಕಿರುತೆರೆ
ಪ್ರಕಾಶ್ ರಾಜ್ - ದಕ್ಷಿಣ ಕನ್ನಡ
ವಿಜಯಲಕ್ಷ್ಮೀ ಸಿಂಗ್ -ಕೊಡಗು
ಆಡಳಿತ
ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ) - ಬೆಂಗಳೂರು ದಕ್ಷಿಣ (ರಾಮನಗರ)
ವೈದ್ಯಕೀಯ
ಡಾ. ಆಲಮ್ಮ ಮಾರಣ್ಣ - ತುಮಕೂರು
ಡಾ. ಜಯರಂಗನಾಥ್ - ಬೆಂಗಳೂರು ಗ್ರಾಮಾಂತರ
ಸಮಾಜ ಸೇವೆ
ಸೂಲಗಿತ್ತಿ ಈರಮ್ಮ - ವಿಜಯನಗರ
ಫಕ್ಕೀರಿ - ಬೆಂಗಳೂರು ಗ್ರಾಮಾಂತರ
ಕೋರಿನ್ ಆಂಟೊನಿಯಟ್ ರಸ್ಕೀನಾ - ದಕ್ಷಿಣ ಕನ್ನಡ
ಡಾ. ಎನ್. ಸೀತಾರಾಮ ಶೆಟ್ಟಿ - ಉಡುಪಿ
ಕೋಣಂದೂರು ಲಿಂಗಪ್ಪ - ಶಿವಮೊಗ್ಗ
ಸಂಕೀರ್ಣ
ಉಮೇಶ ಪಂಬದ - ದಕ್ಷಿಣ ಕನ್ನಡ
ಡಾ. ರವೀಂದ್ರ ಕೋರಿಶೆಟ್ಟಿರ್ - ಧಾರವಾಡ
ಕೆ.ದಿನೇಶ್ - ಬೆಂಗಳೂರು
ಶಾಂತರಾಜು - ತುಮಕೂರು
ಜಾಫರ್ ಮೊಹಿಯುದ್ದೀನ್ - ರಾಯಚೂರು
ಪೆನ್ನ ಓಬಳಯ್ಯ - ಬೆಂಗಳೂರು ಗ್ರಾಮಾಂತರ
ಶಾಂತಿ ಬಾಯಿ - ಬಳ್ಳಾರಿ
ಪುಂಡಲೀಕ ಶಾಸ್ತ್ರೀ(ಬುಡಬುಡಕೆ) - ಬೆಳಗಾವಿ
ಹೊರನಾಡು/ ಹೊರದೇಶ
ಜಕರಿಯ ಬಜಪೆ (ಸೌದಿ)
ಪಿ ವಿ ಶೆಟ್ಟಿ (ಮುಂಬೈ)
ಪರಿಸರ
ರಾಮೇಗೌಡ - ಚಾಮರಾಜನಗರ
ಮಲ್ಲಿಕಾರ್ಜುನ ನಿಂಗಪ್ಪ - ಯಾದಗಿರಿ
ಕೃಷಿ
ಡಾ.ಎಸ್.ವಿ.ಹಿತ್ತಲಮನಿ - ಹಾವೇರಿ
ಎಂ ಸಿ ರಂಗಸ್ವಾಮಿ - ಹಾಸನ
ಮಾಧ್ಯಮ ಕ್ಷೇತ್ರ
ಕೆ.ಸುಬ್ರಮಣ್ಯ - ಬೆಂಗಳೂರು
ಅಂಶಿ ಪ್ರಸನ್ನಕುಮಾರ್ - ಮೈಸೂರು
ಬಿ.ಎಂ ಹನೀಫ್ - ದಕ್ಷಿಣ ಕನ್ನಡ
ಎಂ ಸಿದ್ಧರಾಜು - ಮಂಡ್ಯ
ವಿಜ್ಞಾನ ತಂತ್ರಜ್ಞಾನ
ರಾಮಯ್ಯ - ಚಿಕ್ಕಬಳ್ಳಾಪುರ
ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್ - ದಾವಣಗೆರೆ
ಡಾ. ಆರ್. ವಿ ನಾಡಗೌಡ - ಗದಗ
ಸಹಕಾರ
ಶೇಖರಗೌಡ ವಿ ಮಾಲಿಪಾಟೀಲ್ - ಕೊಪ್ಪಳ
ಯಕ್ಷಗಾನ
ಕೋಟ ಸುರೇಶ ಬಂಗೇರ- ಉಡುಪಿ
ಐರಬೈಲ್‌ಆನಂದ ಶೆಟ್ಟಿ - ಉಡುಪಿ
ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ ಹೆಗಡೆ) - ಉತ್ತರ ಕನ್ನಡ
ಬಯಲಾಟ
ಗುಂಡೂರಾಜ್ - ಹಾಸನ
ರಂಗಭೂಮಿ
ಹೆಚ್.ಎಂ. ಪರಮಶಿವಯ್ಯ - ಬೆಂಗಳೂರು ದಕ್ಷಿಣ (ರಾಮನಗರ)
ಎಲ್.ಬಿ.ಶೇಖ್ (ಮಾಸ್ತರ್) - ವಿಜಯಪುರ
ಬಂಗಾರಪ್ಪ ಖುದಾನ್‌ಪುರ - ಬೆಂಗಳೂರು
ಮೈಮ್ ರಮೇಶ್ - ದಕ್ಷಿಣ ಕನ್ನಡ
ಡಿ.ರತ್ನಮ್ಮ ದೇಸಾಯಿ - ರಾಯಚೂರು
ಶಿಕ್ಷಣ ಕ್ಷೇತ್ರ
ಡಾ. ಎಂ.ಆರ್. ಜಯರಾಮ್ - ಬೆಂಗಳೂರು
ಡಾ. ಎನ್ ಎಸ್ ರಾಮೇಗೌಡ -ಮೈಸೂರು
ಎಸ್. ಬಿ. ಹೊಸಮನಿ - ಕಲಬುರಗಿ
ನಾಗರಾಜು - ಬೆಳಗಾವಿ
ಕ್ರೀಡೆ
ಆಶೀಶ್ ಕುಮಾರ್ ಬಲ್ಲಾಳ್ - ಬೆಂಗಳೂರು
ಎಂ ಯೋಗೇಂದ್ರ - ಮೈಸೂರು
ಡಾ. ಬಬಿನಾ ಎನ್.ಎಂ (ಯೋಗ) - ಕೊಡಗು
ನ್ಯಾಯಾಂಗ
ನ್ಯಾ. ಪಿ.ಬಿ. ಭಜಂತ್ರಿ (ಪವನ್ಕುಮಾರ್ ಭಜಂತ್ರಿ ) - ಬಾಗಲಕೋಟೆ
ಶಿಲ್ಪಕಲೆ
ಬಸಣ್ಣ ಮೋನಪ್ಪ ಬಡಿಗೇರ - ಯಾದಗಿರಿ
ನಾಗಲಿಂಗಪ್ಪ ಜಿ ಗಂಗೂರ - ಬಾಗಲಕೋಟೆ
ಚಿತ್ರಕಲೆ
ಬಿ. ಮಾರುತಿ - ವಿಜಯನಗರ
ಕರಕುಶಲ
ಎಲ್. ಹೇಮಾಶೇಖರ್ - ಮೈಸೂರು












Click it and Unblock the Notifications