ಒಕ್ಕಲಿಗ ಸಂಘದ ಅಧ್ಯಕ್ಷರಾಗಿ ಡಾ.ಅಪ್ಪಾಜಿ ಗೌಡ ಆಯ್ಕೆ

Posted By:
Subscribe to Oneindia Kannada

ಬೆಂಗಳೂರು, ಜುಲೈ 21 : ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆ ಮುಕ್ತಾಯಗೊಂಡಿದೆ. ಡಾ.ಅಪ್ಪಾಜಿ ಗೌಡ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಯಾದರು.

ಗುರುವಾರ ಒಕ್ಕಲಿಗರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವೆಂಕಟೇಶ್ ಪಾಪಣ್ಣ ಅವರು ನೂತನ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದರು. ಒಕ್ಕಲಿಗರ ಸಂಘದ ನಿಬಂಧನೆ 7(3) (ಆ) ಪ್ರಕಾರ ಎರಡನೇ 30 ತಿಂಗಳ ಅವಧಿಗೆ ಇಂದು ಚುನಾವಣೆ ನಡೆಸಲಾಯಿತು.[ಕರ್ನಾಟಕ ಜಾತಿ ಗಣತಿ ವರದಿ]

Rajya Vokkaligara Sangha election result July 2016

ಚುನಾವಣಾ ಫಲಿತಾಂಶ
* ಡಾ.ಅಪ್ಪಾಜಿ ಗೌಡ - ಅಧ್ಯಕ್ಷರು
* ಸಿ.ಎನ್.ಶಶಿಕಿರಣ್, ಎನ್.ಪ್ರಸನ್ನ - ಉಪಾಧ್ಯಕ್ಷರು
* ಉಲ್ಲೂರು ಸಿ ಮಂಜುನಾಥ್ - ಪ್ರಧಾನ ಕಾರ್ಯದರ್ಶಿ
* ಹೆಚ್‌.ಎಂ.ನಾರಾಯಣಮೂರ್ತಿ - ಸಹಾಯಕ ಕಾರ್ಯದರ್ಶಿ
* ಡಿ.ಸಿ.ಕೆ.ಕಾಳೇಗೌಡ - ಖಜಾಂಚಿ

ಅಪ್ಪಾಜಿ ಗೌಡ ಆಯ್ಕೆಗೆ ವಿರೋಧ : ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಡಾ.ಅಪ್ಪಾಜಿ ಗೌಡ ಅವರು ಮರು ಆಯ್ಕೆ ಆಗಿರುವುದಕ್ಕೆ ಸಂಘದಲ್ಲಿಯೇ ಅಸಮಾಧಾನ ವ್ಯಕ್ತವಾಗಿದೆ. ಅಪ್ಪಾಜಿ ಗೌಡ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗುತ್ತದೆ.

ಅಪ್ಪಾಜಿ ಗೌಡ ಅವರು ಎಚ್.ಡಿ.ದೇವೇಗೌಡ, ಆರ್.ಅಶೋಕ್, ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ ಮುಂತಾದ ನಾಯಕರ ಸೂಚನೆಯನ್ನು ಧಿಕ್ಕರಿಸಿ ಮರುಆಯ್ಕೆಯಾಗಿದ್ದಾರೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಸಿದ್ದಾರೆ.

appaji gowda

ಬೆಂಗಳೂರಿನಲ್ಲಿ ಶನಿವಾರ ಒಕ್ಕಲಿಗರ ನಾಯಕರ ಸಭೆ ನಡೆಯಲಿದ್ದು, ಸಭೆಯಲ್ಲಿ ಅಪ್ಪಾಜಿ ಗೌಡ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dr. Appaji Gowda elected as president of Rajya Vokkaligara Sangha. Election held on July 21, 2016.
Please Wait while comments are loading...