ಕುಮಾರಸ್ವಾಮಿ ಬಹಿರಂಗ ಆಫರ್ ಗೆ 'ಕೈ' ಬಾಗುತ್ತಾ ?
ಬೆಂಗಳೂರು, ಜೂ. 09: ರಾಜ್ಯಸಭೆ ಚುನಾವಣಾ ಕಣ ರಂಗೇರಿದೆ. ಒಬ್ಬ ಅಭ್ಯರ್ಥಿಯ ಗೆಲುವಿನ ಬಳಿಕ ಕಾಂಗ್ರೆಸ್‌ನ ಉಳಿಕೆ ಮತಗಳನ್ನು ಪಡೆಯಲು ಜೆಡಿಎಸ್ ನಡೆಸಿದ ಎಲ್ಲಾ ಕಸರತ್ತು- ಮಸಲತ್ತು ಕೊನೆಯಾಗಿದೆ. ಇದೀಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಮಿ "ಜಾತ್ಯತೀತ" ಹೆಸರನ್ನು ಮುಂದಿಟ್ಟು ಟ್ವೀಟ್ ಮೂಲಕ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲ ಅವರನ್ನು ಮನವಿ ಮಾಡಿದ್ದಾರೆ. ಎಚ್‌ಡಿಕೆ ಕೊನೆ ಪ್ರಯತ್ನ ಫಲ ಕೊಟ್ಟರೆ ಜೆಡಿಎಸ್ ಅಭ್ಯರ್ಥಿ ನಿರಾಳವಾಗಿ ಆಯ್ಕೆಯಾಗಿ ರಾಜ್ಯಸಭೆ ಪ್ರವೇಶ ಮಾಡಲಿದ್ದಾರೆ.
ಜೆಡಿಎಸ್ ಪಕ್ಷವು ಡಿ. ಕುಪೇಂದ್ರರೆಡ್ಡಿಯನ್ನು ರಾಜ್ಯ ಸಭೆ ಚುನಾವಣೆಗೆ ತನ್ನ ಮೊದಲ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದೆ. ಅವರು ಉದ್ಯಿಮೆದಾರರು ಸಮಾಜ ಸೇವಕರು ಮತ್ತು ಪ್ರಗತಿಪರ ಚಿಂತಕರು ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ರಾಜ್ಯಸಭೆ ಸದಸ್ಯರಾಗಿ ಅನುಭವವುಳ್ಳ ಅವರನ್ನು ಎಲ್ಲಾ ಪಕ್ಷಗಳು ಮುಕ್ತ ಮನಸ್ಸಿನಿಂದ ಬೆಂಬಲಿಸಬೇಕು. ಜಾತ್ಯತೀತ ಶಕ್ತಿಗಳನ್ನು ಬಲಪಡಿಸಲು ಕಾಂಗ್ರೆಸ್ ಪಕ್ಷವು ಕುಪೇಂದ್ರ ರೆಡ್ಡಿ ಅವರಿಗೆ ಪೂರ್ಣ ಬೆಂಬಲ ಕೊಡಬೇಕು. ಬಿಜೆಪಿಯನ್ನು ಸೋಲಿಸಲು ತನಗಿಂತ ಹೆಚ್ಚು ಮತ ಹೊಂದಿರುವ ಜೆಡಿಎಸ್ ಅನ್ನು ಕಾಂಗ್ರೆಸ್ ಬೆಂಬಲಿಸಬೇಕು.
ಈ ಚುನಾವಣೆಯ ಪರಿನಾಮಗಳ ಬಗ್ಗೆ ಇತಿಹಾಸ ಮತ್ತು ಜನತೆ ಭವಿಷ್ಯದ ದಿನಗಳಲ್ಲಿ ನಿರ್ಧರಿಸುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಮಾಜ್ಯ ಸುರ್ಜೆವಾಲ ಅವರು ಈ ಅ ಅಂಶ ಅರ್ಥಮಾಡಿಕೊಳ್ಳುತ್ತಾರೆ ಎಂದು ನಂಬಿದ್ದೇನೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಜೆಡಿಎಸ್ ನಿರಾಯಸ ಗೆಲುವಿಗೆ ಕೈ ಅಡ್ಡಿ
ಇನ್ನು 31 ಶಾಸಕರ ಬಲ ಹೊಂದಿರುವ ಜೆಡಿಎಸ್‌ಗೆ ಕಾಂಗ್ರೆಸ್ ಬೆಂಬಲ ಕೊಟ್ಟಲ್ಲಿ ನಿರಾಯಸವಾಗಿ ಗೆಲ್ಲಲಿದೆ. ಬಿಜೆಪಿಗೆ ಸೋಲುಣಿಸುವ ತಂತ್ರದ ಭಾವವಾಗಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಜತೆ ನಡೆಸಿದ ಸಂಧಾನ ವಿಫಲವಾಯಿತು. ಖರ್ಗೆ ಮೂಲಕ ನಡೆಸಿದ ಪ್ರಯತ್ನವೂ ಫಲಿಸಲಿಲ್ಲ. ನಮ್ಮ ಅಭ್ಯರ್ಥಿ ಸೋತರೂ ಪರವಾಗಿಲ್ಲ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಅವಕಾಶ ಕೊಡಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪಟ್ಟು ಹಿಡಿದು ಕೂತಿದ್ದರು. ಅಂತಿಮವಾಗಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕೂಡ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಲ್ಲ ಎಂದು ಅಧಿಕೃತವಾಗಿ ಪ್ರಕಟಿಸಿದರು.

ಎಚ್‌ಡಿಕೆ ಕೊನೆ ಟ್ವೀಟ್ ಅಸ್ತ್ರ
ಜಾತಿವಾದಿ ಬಿಜೆಪಿಯನ್ನು ದೂರ ಇಡುವ ಜಾತ್ಯತೀತ ಶಕ್ತಿಗಳು ಒಂದಾಗಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಗಿಂತ ಹೆಚ್ಚು ಮತ ಇರುವ ಜೆಡಿಎಸ್‌ಗೆ ಬೆಂಬಲ ಕೊಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕೋರಿದ್ದಾರೆ. ಜೆಡಿಎಸ್ ಈಗಾಗಲೇ 32 ಶಾಸಕರನ್ನು ಒಂದಿದೆ. ಅದರಲ್ಲಿ ನಾಲ್ಕೈದು ಶಾಸಕರು ಕೈ ಕೊಟ್ಟರು, ಕಾಂಗ್ರೆಸ್ ಮೊದಲ ಅಭ್ಯರ್ಥಿ ಜಯರಾಂ ರಮೇಶ್ ಗೆ 46 ಮತ ಕೊಟ್ಟರೂ, ಉಳಿಕೆ 24 ಮತ ಜೆಡಿಎಸ್ ಗೆ ನೀಡಿದ್ದಲ್ಲಿ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸಲೀಸಾಗಿ ರಾಜ್ಯಸಭೆ ಪ್ರವೇಶಿಸುವ ಅವಕಾಶವಿತ್ತು. ಆದರೆ ಕಾಂಗ್ರೆಸ್ 24 ಮತಗಳನ್ನು ನಂಬಿ ಕಾಂಗ್ರೆಸ್ ಎರಡನೇ ಅಭ್ಯರ್ಥಿ ಮನ್ಸೂರ್ ಆಲಿಖಾನ್ ಅವರನ್ನು ಕಣಕ್ಕೆ ಇಳಿಸಿದೆ.

ಜೆಡಿಎಸ್ ಮತಗಳನ್ನೇ ನಮಗೆ ಕೊಡಲಿ
ಜೆಡಿಎಸ್ ನವರೇ ಮತಗಳನ್ನು ನಮಗೆ ಕೊಡಲಿ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದು ಕೂತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಬೆಂಬಲದ ಗುದ್ದಾಟ ಬಿಜೆಪಿ ಪಾಲಿಗೆ ವರದಾನವಾಗಿದೆ. ಕಾಂಗ್ರೆಸ್ ಗಿಂತಲೂ ಏಳು ಮತ ಹೆಚ್ಚಿರುವ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಶತಾಯಗತಾಯ ಗೆಲ್ಲಿಸುವ ಪ್ರಯತ್ನ ಮಾಡಿದೆ. ಆದರೆ ಕಾಂಗ್ರೆಸ್ ಮತ ಪಡೆಯುವ ಜೆಡಿಎಸ್ ನ ಮನವೊಲಿಕೆ ತಂತ್ರ ಇನ್ನೂ ಫಲಿಸಲಿಲ್ಲ. ಹೀಗಾಗಿ ಈ ರಾತ್ರಿಯೊಳಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಕೈಗೊಳ್ಳುವ ತೀರ್ಮಾನ ನಾಳೆಯ ಚುನಾವಣೆ ಭವಿಷ್ಯ ನಿರ್ಧರಿಸಲಿದೆ. ರಂದೀಪ್ ಸುರ್ಜೆವಾಲ ಅವರನ್ನು ಟ್ವೀಟ್ ಮೂಲಕ ಕುಮಾರಸ್ವಾಮಿ ಬೆಂಬಲ ಕೋರಿದ್ದು , ಫಲಿಸುವ ಯಾವ ಲಕ್ಷಣವೂ ಸದ್ಯಕ್ಕೆ ಗೋಚರಿಸುತ್ತಿಲ್ಲ

ಎಚ್‌ಡಿಕೆ ಟ್ವೀಟ್ ಮರ್ಮ
ಕೇಂದ್ರದಲ್ಲಿ ಮೋದಿ ಹವಾ ಇದ್ದರೂ ರಾಜ್ಯದಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆಯಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಕನಿಷ್ಠ 20 ಸೀಟು ಮೇಲೆ ಗೆದ್ದರೂ ಜೆಡಿಎಸ್‌ನ ಬೆಂಬಲ ಬೇಕಾಗುತ್ತಾದೆ. ರಾಜಕೀಯ ಪಲ್ಲಟಣಗಳು ಯಾವ ಕ್ಷಣ ಏನು ಬೇಕಾದರೂ ಆಗಬಹುದು. ಭವಿಷ್ಯದಲ್ಲಿ ಕಾಂಗ್ರೆಸ್ ಗೆ ಜೆಡಿಎಸ್‌ನ ಬೆಂಬಲ ಅನಿವಾರ್ಯ ಆಗುವ ಕಾಲ ಬರುತ್ತೆ. ಅದನ್ನು ಮಾರ್ಮಿಕವಾಗಿ ಟ್ವೀಟ್‌ನಲ್ಲಿ ಉಲ್ಲೇಖಿಸಿಯೇ ಕುಮಾರಸ್ವಾಮಿ ಅವರು ಕಾಂಗ್ರೆಸ್ ಅನ್ನು ಎಚ್ಚರಿಸಿದ್ದಾರೆ.












Click it and Unblock the Notifications