ಸ್ಟಿಂಗ್ ಆಪರೇಶನ್: ರಾಜ್ಯಸಭಾ ಚುನಾವಣೆಗೆ ತಡೆ ಇಲ್ಲ

Written By:
Subscribe to Oneindia Kannada

ನವದೆಹಲಿ, ಜೂನ್, 09: ಕರ್ನಾಟಕ್ಕೆ ಸಂಬಂಧಿಸಿದ ರಾಜ್ಯಸಭಾ ಚುನಾವಣೆ ನಿಗದಿಯಂತೆ ಜೂನ್ 11 ರಂದು ನಡೆಯಲಿದೆ. ಶಾಸಕರ ಹಣ ಬೇಡಿಕೆ ಸ್ಟಿಂಗ್ ಆಪರೇಶನ್ ಸಂಬಂಧ ಕೇಂದ್ರ ಚುನಾವಣಾ ಆಯೋಗ ನಡೆಸಿದ ಸಭೆಯಲ್ಲಿ ಚುನಾವಣೆ ಮೊದಲಿನಂತೆ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

ನವದೆಹಲಿಯಲ್ಲಿ ಗುರುವಾರ ಮುಖ್ಯ ಚುನಾವಣಾ ಆಯುಕ್ತ ಡಾ.ನಸಿಮ್ ಜೈದಿ ನೇತೃತ್ವದಲ್ಲಿ ಸಭೆ ನಡೆಯಿತು. ಕುಟುಕು ಕಾರ್ಯಾಚರಣೆ ಬಗ್ಗೆ ವರದಿ ನೀಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚನೆ ನೀಡಲಾಗಿತ್ತು. ಅಂತಿಮವಾಗಿ ಶಾಸಕರ ಹಣದ ಬೇಡಿಕೆ ಬಗ್ಗೆ ಸಾಕ್ಷಿ ಆಧಾರಗಳು ಲಭ್ಯವಾಗದ ಕಾರಣ ಚುನಾವಣೆ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.[ಸ್ಟಿಂಗ್ ಆಪರೇಷನ್: ಮೂರು ಕಾಸಿಗೆ ಹರಾಜಾದ ರಾಜ್ಯ ಶಾಸಕರ ಮರ್ಯಾದೆ!]

karnataka

ರಾಜ್ಯಕ್ಕೆ ಸಂಬಂಧಿಸಿದ ರಾಜ್ಯಸಭಾ ಚುನಾವಣೆಯನ್ನು ಮುಂದೂಡಬೇಕೋ? ಬೇಡವೋ? ಎಂಬ ವಿಚಾರದ ಮೇಲೆ ಚರ್ಚೆ ನಡೆಯಿತು. ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಜೆಡಿಎಸ್, ಬಿಜೆಪಿ ತಲಾ ಒಂದು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿವೆ

ಕರ್ನಾಟಕದ ಶಾಸಕರಾದ ಜಿ ಟಿ ದೇವೇಗೌಡ, ಮಲ್ಲಿಕಾರ್ಜುನ ಖೂಬಾ, ವರ್ತೂರು ಪ್ರಕಾಶ್ ಮತ್ತು ಬಿ ಆರ್ ಪಾಟೀಲ್ ರಾಜ್ಯಸಭೆ ಮತ ನೀಡಲು ಐದರಿಂದ ಹತ್ತು ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದಾರೆ ಎಂದು ಕುಟುಕು ಕಾರ್ಯಾಚರಣೆಯಲ್ಲಿ ಹೇಳಲಾಗಿದ್ದು ವಾಹಿನಿಗಳು ನಿರಂತರವಾಗಿ ಸುದ್ದಿ ಬಿತ್ತರಿಸಿದ್ದವು.[ಟೈಮ್ಸ್ ನೌ ವರದಿಗಾರ್ತಿಯನ್ನು 'ಸಾಲೀ' ಎಂದ ಟೀಕಿಸಿದ ಅಶೋಕ್ ಖೇಣಿ]

ಮಲ್ಲಿಕಾರ್ಜುನ ಖೂಬಾ ವಿರುದ್ಧ ಎಫ್ ಐಆರ್
ಕುಟುಕು ಕಾರ್ಯಾಚರಣೆಯಲ್ಲಿ ಕಂಡುಬಂದಿರುವ ಬಸವ ಕಲ್ಯಾಣದ ಶಾಸಕ ಮಲ್ಲಿಕಾರ್ಜುನ ಖೂಬಾ ವಿರುದ್ಧ ಎಫ್ ಐಆರ್ ದಾಖಲಿಸಿ ತನಿಖೆ ನಡೆಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಸಿಬಿಐ ತನಿಖೆ ನಡೆಯುವ ಸಾಧ್ಯತೆಗಳು ಇವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rajya Sabha elections to four seats in Karnataka on June 11 will go ahead as scheduled with the Election Commission tonight deciding against cancelling the polls, saying money power has not vitiated the process so much to warrant such a step even as it asked CBI to probe the matter in detail.After Sting operation Chief Election Commissioner Nasim Zaidi conducted second meeting at New Delhi on 9 June, 2016
Please Wait while comments are loading...