Get Updates
Get notified of breaking news, exclusive insights, and must-see stories!

ಶುಕ್ರವಾರ ರಾಜ್ಯಸಭೆ ಚುನಾವಣೆ : ಅಂಕಿ-ಸಂಖ್ಯೆಗಳ ಲೆಕ್ಕಾಚಾರ

ಬೆಂಗಳೂರು, ಮಾರ್ಚ್ 22 : ಕರ್ನಾಟಕ ವಿಧಾನಸಭೆಯಿಂದ 4 ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಶುಕ್ರವಾರ ಮತದಾನ ನಡೆಯಲಿದೆ. 4 ಸ್ಥಾನಕ್ಕೆ ಐವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಯಾರಿಗೆ ಗೆಲುವು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಎಲ್ಲಾ ಶಾಸಕರಿಗೆ ವಿಪ್ ಜಾರಿ ಮಾಡಿದೆ. ಜೆಡಿಎಸ್ ಪಕ್ಷದ ಸಚೇತಕ ಮಧು ಬಂಗಾರಪ್ಪ ಜೆಡಿಎಸ್‌ ಪಕ್ಷದಿಂದ ಅಮಾನತುಗೊಂಡಿರುವ 7 ಶಾಸಕರಿಗೂ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ವಿಪ್ ಜಾರಿ ಮಾಡಿದ್ದಾರೆ.

ಜೆಡಿಎಸ್‌ನಿಂದ ಅಮಾನತುಗೊಂಡ 7 ಶಾಸಕರು ಯಾವ ಅಭ್ಯರ್ಥಿಗೆ ಮತ ಹಾಕಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಸ್ಪೀಕರ್ ಕೆ.ಬಿ.ಕೋಳಿವಾಡ ಮತ್ತು ಹೈಕೋರ್ಟ್ ಬಂಡಾಯ ಶಾಸಕರ ಮತದಾನದ ವಿಚಾರದಲ್ಲಿ ಇನ್ನೂ ಅಂತಿಮ ನಿರ್ಧಾರವನ್ನು ಕೈಗೊಂಡಿಲ್ಲ.

ಬಿಜೆಪಿಯಿಂದ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್‌ನಿಂದ ಡಾ.ಎಲ್.ಹುನುಂತಯ್ಯ, ಡಾ.ಸೈಯದ್ ನಾಸಿರ್ ಹುಸೇನ್, ಜಿ.ಸಿ.ಚಂದ್ರಶೇಖರ್ ಮತ್ತು ಜೆಡಿಎಸ್ ಪಕ್ಷದಿಂದ ಬಿ.ಎಂ.ಫಾರೂಕ್ ಅಭ್ಯರ್ಥಿಗಳಾಗಿದ್ದಾರೆ. ಶುಕ್ರವಾರ ಸಂಜೆ ಮತದಾನ ಮುಗಿಯುತ್ತಿದ್ದಂತೆ ಫಲಿತಾಂಶ ಪ್ರಕಟವಾಗಲಿದೆ...

ಮೂರು ಅಭ್ಯರ್ಥಿಗಳು ಕಣಕ್ಕೆ

ಮೂರು ಅಭ್ಯರ್ಥಿಗಳು ಕಣಕ್ಕೆ

ಕಾಂಗ್ರೆಸ್ ಪಕ್ಷದಿಂದ ಮೂರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ವಿಧಾನಸಭೆಯ ಸದ್ಯದ ಬಲ 217. ವಿಧಾನಸಭೆಯ ದೊಡ್ಡ ಪಕ್ಷವಾದ ಕಾಂಗ್ರೆಸ್ 2 ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದು. ಮೂರನೇ ಅಭ್ಯರ್ಥಿಯಾಗಿ ಜಿ.ಸಿ.ಚಂದ್ರಶೇಖರ್ ಕಣಕ್ಕಿಳಿದಿದ್ದಾರೆ.

ಎರಡು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡ ಬಳಿಕ ಕಾಂಗ್ರೆಸ್ ಬಳಿ 31 ಮತ ಉಳಿಯುತ್ತದೆ. ಜೆಡಿಎಸ್‌ ಪಕ್ಷದ 7 ಬಂಡಾಯ ಶಾಸಕರು, ಕೆಜೆಪಿಯ ಬಿ.ಆರ್.ಪಾಟೀಲ, ಕೆಲವು ದಿನಗಳ ಹಿಂದೆ ಪಕ್ಷ ಸೇರಿದ ಕೂಡ್ಲಗಿಯ ನಾಗೇಂದ್ರ ಮತಗಳು ಕಾಂಗ್ರೆಸ್‌ಗೆ ಸಿಗಲಿವೆ. ಕೆಲವು ಪಕ್ಷೇತರ ಅಭ್ಯರ್ಥಿಗಳ ಮತಗಳನ್ನು ಕಾಂಗ್ರೆಸ್ ನೆಚ್ಚಿಕೊಂಡಿದೆ.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗುವುದು ಕಷ್ಟ ಎಂದು ತಿಳಿದಿರುವ ಶಾಸಕರು ಪಕ್ಷದ ಅಭ್ಯರ್ಥಿಗೆ ಮತ ಹಾಕುತ್ತಾರೆ ಎಂಬ ಬಗ್ಗೆ ಖಚಿತತೆ ಇಲ್ಲ. ಅಡ್ಡ ಮತದಾನ ನಡೆದರೆ ಮೂರನೇ ಅಭ್ಯರ್ಥಿ ಗೆಲ್ಲುವುದು ಕಷ್ಟವಾಗಬಹುದು.

ಬಿ.ಎಂ.ಫಾರೂಕ್ ಗೆಲ್ಲುವರೇ?

ಬಿ.ಎಂ.ಫಾರೂಕ್ ಗೆಲ್ಲುವರೇ?

ಜೆಡಿಎಸ್ ಪಕ್ಷದಿಂದ ಬಿ.ಎಂ.ಫಾರೂಕ್ ಅಭ್ಯರ್ಥಿಯಾಗಿದ್ದಾರೆ. ಫಾರೂಕ್ ಗೆಲ್ಲಲು 45 ಮತಗಳು ಬೇಕು. ಏಳು ಶಾಸಕರ ಬಂಡಾಯ, ಇಬ್ಬರ ರಾಜೀನಾಮೆ ಮತ್ತು ಚಿಕ್ಕಮಾದು ಅವರ ನಿಧನದಿಂದಾಗಿ ಜೆಡಿಎಸ್ ಬಲ 30ಕ್ಕೆ ಕುಸಿದಿದೆ.

ಬಿ.ಎಂ.ಫಾರೂಕ್ ಗೆಲ್ಲಲು ಬೇರೆ ಪಕ್ಷ, ಪಕ್ಷೇತರ ಅಭ್ಯರ್ಥಿಗಳ ಸಹಕಾರ ಅಗತ್ಯ. ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಬಿಜೆಪಿ ಸೇರುವುದಾಗಿ ಹೇಳಿದ್ದಾರೆ. ಆದ್ದರಿಂದ, ಫಾರೂಕ್ ಅವರ ಗೆಲುವು ಸುಲಭವಾಗಿಲ್ಲ.

ಬಿಜೆಪಿಯಿಂದ ಒಬ್ಬ ಅಭ್ಯರ್ಥಿ

ಬಿಜೆಪಿಯಿಂದ ಒಬ್ಬ ಅಭ್ಯರ್ಥಿ

ಬಿಜೆಪಿಯಿಂದ ರಾಜೀವ್ ಚಂದ್ರಶೇಖರ್ ಅಬ್ಯರ್ಥಿ. ಪಕ್ಷದ ಬಳಿ 42 ಮತಗಳಿವೆ. ಬಿಎಸ್‌ಆರ್‌ ಕಾಂಗ್ರೆಸ್‌ನ 2, ಕೆಜೆಪಿಯ 1, ಸಿ.ಪಿ.ಯೋಗೇಶ್ವರ ಮತ್ತು ಎ.ಎಸ್.ಪಾಟೀಲ ನಡಹಳ್ಳಿ ಮತಗಳು ಬಿಜೆಪಿಗೆ ಸಿಗುತ್ತವೆ.

ಬಿಜೆಪಿಯಲ್ಲಿನ ಎಲ್ಲಾ ಶಾಸಕರು ಪಕ್ಷದ ಅಭ್ಯರ್ಥಿಗೆ ಮತ ಹಾಕಲಿದ್ದಾರೆಯೇ?. ಅಡ್ಡ ಮತದಾನ ನಡೆಯುವುದಿಲ್ಲವೇ? ಎಂಬ ಪ್ರಶ್ನೆ ಇದ್ದೇ ಇದೆ.

ಮಾ.23ರಂದೇ ಫಲಿತಾಂಶ

ಮಾ.23ರಂದೇ ಫಲಿತಾಂಶ

ಮಾ.23ರ ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ವಿಧಾನಸೌಧದಲ್ಲಿ ಮತದಾನ ನಡೆಯಲಿದೆ. ಸಂಜೆ 5 ಗಂಟೆಗೆ ಮತದಾನ ಮುಕ್ತಾಯಗೊಳ್ಳಲಿದ್ದು, ನಾಳೆಯೇ ಫಲಿತಾಂಶ ಘೋಷಣೆಯಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+