ರಾಜ್ಯಸಭೆ ಚುನಾವಣೆ: ಎಚ್‌ಡಿಕೆ- ಸುರ್ಜೇವಾಲಾ ಮಾತುಕತೆ

ಬೆಂಗಳೂರು, ಜೂ.8: ರಾಜ್ಯಸಭೆಗೆ ಎರಡು ದಿನಗಳ ಬಾಕಿ ಇರುವಾಗಲೇ ರಾಜ್ಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಬಿಜಪಿಗೆ ಮೂರನೇ ಸ್ಥಾನ ತಪ್ಪಿಸುವ ಉದ್ದೇಶದಿಂದ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಮೈತ್ರಿ ಮಾಡಿಕೊಳ್ಳುವತ್ತ ಹೆಜ್ಜೆ ಇಡುತ್ತಿವೆ. ಅದರೆ, ಎರಡೂ ಪಕ್ಷಗಳು ಯಾರನ್ನು ಒಮ್ಮತ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಇನ್ನೂ ಗೊಂದಲ್ಲಿದಲ್ಲಿಯೇ ಇವೆ.

ಕೋಮುವಾದಿ ಪಕ್ಷಕ್ಕೆ ಒಂದು ಹೆಚ್ಚುವರಿ ಸ್ಥಾನವನ್ನು ತಪ್ಪಿಸಬೇಕಾದರೆ ಕಾಂಗ್ರೆಸ್ ನಿಲ್ಲಿಸಿರುವ ಅಲ್ಪಸಂಖ್ಯಾತ ಅಭ್ಯರ್ಥಿಗೆ ಜೆಡಿಎಸ್ ಹಾಗೂ ಬಿಜೆಪಿಯ ಆತ್ಮಸಾಕ್ಷಿಯ ಮತಗಳು ಬರುತ್ತವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ, ಶುಕ್ರವಾ ನಡೆಯುವ ಚುನಾವಣೆಯಲ್ಲಿ ಯಾವುದು ಯಾರ ಕೈ ಹಿಡಿಯುತ್ತದೆ ಎಂಬುದು ಇನ್ನೂ ನಿಗೂಢವಾಗಿದೆ.

ಈ ಮಧ್ಯೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ದೂರವಾಣಿ ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೋರಿದ್ದಾರೆ. ಆದರೆ, ಕುಮಾರಸ್ವಾಮಿ ಅವರಿಂದ ಯಾವುದೆ ನಿರ್ಧಾರ ಪ್ರಕಟವಾಗಿಲ್ಲ.

ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರನ್ನು ಹೇಗಾದರೂ ಮಾಡಿ ಗೆಲ್ಲಿಸಲೇಬೇಕು ಎಂಬ ಹಠಕ್ಕೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಸಹ ಕಣಕ್ಕಿಳಿದದಿದ್ದಾರೆ. ಈ ಸಂಬಂಧ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ರೇವಣ್ಣ, "ಕೋಮುವಾದಿ ಪಕ್ಷ ಬಿಜೆಪಿಯನ್ನು ದೂರ ಇಡಬೇಕಾದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಂದಾಗುವುದು ಅಗತ್ಯ ಇದೆ,' ಎಂಬ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ.

ಹಿಂದೆ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಕೆಲವು ವ್ಯತ್ಯಾಸಗಳು ಆಗಿರಬಹುದು ನಿಜ. ರಾಜಕಾರಣದಲ್ಲಿ ಅದು ಸಹಜವಾಗಿ ಆಗಿರುತ್ತದೆ. ಆದರೆ, ಕಾಂಗ್ರೆಸ್ ನಾಯಕರಾಗಲೀ ಅಥವಾ ಕುಮಾರಸ್ವಾಮಿ ಆಗಲೀ ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಮುನ್ನಡೆಯಬೇಕು. ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಕಾಂಗ್ರೆಸ್ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಈ ಮಧ್ಯೆ ಧಾರೆವಾಡದಲ್ಲಿ ಮಾತನಾಡಿರುವ ಸಿದ್ದರಾಮಯ್ಯ, "ಜೆಡಿಎಸ್‌ಗಿಂತ ಮುಂಚಿತವಾಗಿ ತೀರ್ಮಾನ ಮಾಡಿ ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಹಾಕಿದ್ದೆವೆ. ಜೆಡಿಎಸ್ ಒಂದು ದಿನದ ನಂತರ ತಮ್ಮ ಅಭ್ಯರ್ಥಿಯನ್ನು ಹಾಕಿದ್ದೇವೆ. ಅವರಿಗೆ ಕೋಮುವಾದಿಗಳನ್ನು ಸೋಲಿಸಬೇಕು ಎಂಬ ನಿಜವಾದ ಕಾಳಜಿ ಇದ್ದರೆ ಅವರ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಅಗತ್ಯ ಇರಲಿಲ್ಲ," ಎಂದು ಹೇಳಿದ್ದಾರೆ.

ಕೋಮುವಾದಿ ಸೋಲಬೇಕು ಎಂದರೆ ಕಾಂಗ್ರೆಸ್ ಬೆಂಬಲಿಸಿ

ಕೋಮುವಾದಿ ಸೋಲಬೇಕು ಎಂದರೆ ಕಾಂಗ್ರೆಸ್ ಬೆಂಬಲಿಸಿ

ಈ ಮಧ್ಯೆ ಧಾರವಾಡದಲ್ಲಿ ಮಾತನಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, "ನಾವೂ ನಮ್ಮ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರನ್ನು ಹಾಕಿದ್ದೇವೆ. ಹಿಂದೆ ದೇವೇಗೌಡರು ರಾಜ್ಯಸಭೆಗೆ ಆಯ್ಕೆ ಮಾಡಬೇಕಾದರೆ ನಾವು ಅಭ್ಯರ್ಥಿಯನ್ನು ಹಾಕಿರಲಿಲ್ಲ. ಅವರಿಗೆ ಬೆಂಬಲ ಕೊಟ್ಟಿರಲಿಲ್ಲವೇ? ಕುಮಾರಸ್ವಾಮಿ ಅವರು ಕೇವಲ 37 ಶಾಸಕರನ್ನು ಹೊಂದಿದ್ದರೂ, ನಾವು 80 ಶಾಸಕರನ್ನು ಹೊಂದಿದ್ದರೂ ಅವರನ್ನು ಮುಖ್ಯಮಂತ್ರಿ ಮಾಡಲಿಲ್ಲವೇ? ಕೋಮುವಾದಿಗಳನ್ನು ಸೋಲಿಸಬೇಕು ಎಂದಾದರೆ ನಮಗೇ ಬೆಂಬಲ ಕೊಡಲಿ. ನಾವೇ ಸೋಲಿಸುತ್ತೇವೆ ಎಂದು ಹೇಳಿದ್ದಾರೆ,".

ಸುರ್ಜೇವಾಲಾ ಮಾತನಾಡಿದ್ದಾರೆ:

ಸುರ್ಜೇವಾಲಾ ಮಾತನಾಡಿದ್ದಾರೆ:

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, "ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಜೆಡಿಎಸ್‌ನವರು ಏನು ಬೇಕಾದರೂ ಮಾತನಡಬಹುದು. ನಾನು ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕಾಗುತ್ತದೆ. ಸರ್ಕಾರ ಕಳೆದುಕೊಂಡಿದ್ದು, ಅವರ ಅಸಮಾಧಾನದ ಮಾತುಗಳ ಬಗ್ಗೆ ನಾನು ವ್ಯಾಖ್ಯಾನ ಮಾಡುವುದಿಲ್ಲ,' ಎಂದರು.

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮನವಿ ಮಾಡಿದ್ದಾರೆ. ಸುರ್ಜೇವಾಲಾ ಮನವಿ ಮಾಡಿದ್ದಾರೆ ಎಂದರೆ ಅದು ಹೈಕಮಾಂಡ್ ಪರವಾಗಿ ಮನವಿ ಮಾಡಿದಂತೆ. ನನ್ನ ವೈಯಕ್ತಿಕ ತೀರ್ಮಾನಗಳು ಬೇರೆ. ಇಲ್ಲಿ ಪಕ್ಷ ಮುಖ್ಯವಾಗುತ್ತದೆ,' ಎಂದು ಹೇಳಿದರು.

ಕಣದಿಂದ ಹಿಂದೆ ಸರಿಯಲ್ಲ:

ಕಣದಿಂದ ಹಿಂದೆ ಸರಿಯಲ್ಲ:

"ನಾನು ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ. ಕೊನೆಯ ಕ್ಷಣದವರೆಗೂ ನಾನು ಹೋರಾಟಕ್ಕೆ ಬದ್ಧನಾಗಿರುತ್ತೇನೆ,' ಎಂದು ಜೆಡಿಎಸ್ ರಾಜ್ಯಸಭಾ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಹೇಳಿದ್ದಾರೆ.

ಜೆಡಿಎಸ್ ಪಕ್ಷದಿಂದ ಅಧಿಕೃತ ಅಭ್ಯರ್ಥಿಯಾಗಿದ್ದೇನೆ. ಯಾವುದೇ ತೀರ್ಮಾನಗಳಿಗೂ ನಾನು ಹಿಂದೆ ಜಗ್ಗುವುದಿಲ್ಲ. ಕೊನೆಯವರೆಗೂ ಹೋರಾಡುತ್ತೇನೆ ಎಂದು ಹೇಳಿದರು.

ನಮಗೆ ಯಾರ ಅಗತ್ಯವೂ ಇಲ್ಲ:

ನಮಗೆ ಯಾರ ಅಗತ್ಯವೂ ಇಲ್ಲ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರಿನಲ್ಲಿ ಮಾತನಾಡುತ್ತಾ, ಬಿಜೆಪಿಯ ಮೂರನೇ ಅಭ್ಯರ್ಥಿ ಗೆಲುವಿಗೆ ನಮಗೆ ಯಾರ ಬೆಂಬಲವೂ ಅಗತ್ಯವಿಲ್ಲ. ಬಿಜೆಪಿಯ ಮತಗಳಿಂದಲೇ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಬಗ್ಗೆ ಮಾತನಾಡುತ್ತಿದ್ದರೆ ಅದು ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.

Recommended Video

      CT Raviಗೆ ಹಾಸನದ ಶಾಲಾ ವಿದ್ಯಾರ್ಥಿಗಳು ಹೀಗೆ ಕೇಳಿದ್ದೇಕೆ | OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+