ರಾಜ್ಯಸಭಾ ಚುನಾವಣೆ: ಮಧ್ಯಾಹ್ನ 12ರವರೆಗೆ 157 ಶಾಸಕರ ಮತದಾನ

ಬೆಂಗಳೂರು, ಜೂನ್ 10: ಕರ್ನಾಟಕ ರಾಜ್ಯದಲ್ಲಿ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಈವರೆಗೂ 157 ಶಾಸಕರು ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. ಬಿಜೆಪಿಯ ಅಭ್ಯರ್ಥಿ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಲೆಹರ್ ಸಿಂಗ್ , ಕಾಂಗ್ರೆಸ್‌ನ ಜೈರಾಮ್ ರಮೇಶ್, ಮನ್ಸೂರ್ ಆಲಿಖಾನ್, ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿಯವರ ಹಣೆಬರಹ ಮತಬುಟ್ಟಿಯಲ್ಲಿ ಭದ್ರವಾಗುತ್ತಿದೆ.

ಬಿಜೆಪಿಯ 105 ಶಾಸಕರು, ಕಾಂಗ್ರೆಸ್‌ನ 40, ಜೆಡಿಎಸ್‌ನ 12 ಶಾಸಕರು ಈಗಾಗಲೇ ಮತವನ್ನು ಚಲಾಯಿಸಿದ್ದಾರೆ. ಬಿಜೆಪಿಯ ಅಭ್ಯರ್ಥಿ ನಿರ್ಮಲ ಸೀತರಾಮ್ ಗೆಲುವಿಗೆ ಅಗತ್ಯವಿರುವ 45 ಮತವನ್ನು ಪಡೆದಿದ್ದಾರೆ ಎನ್ನಲಾಗಿದೆ. ಇನ್ನು ಜಗ್ಗೇಶ್ ಸಹ ಸನಿಹದ 44 ಮತವನ್ನು ಪಡೆೆದಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕಾಂಗ್ರೆಸ್‌ನ ಅಭ್ಯರ್ಥಿ ಜೈರಾಮ್ ರಮೇಶ್ ಸಹ 46 ಮೊದಲ ಪ್ರಾಶಸ್ತ್ಯದ ಮತವನ್ನು ಪಡೆದಿದ್ದಾರೆ ಎನ್ನಲಾಗಿದೆ. ನಾಲ್ಕನೇ ಸ್ಥಾನದ ಅಭ್ಯರ್ಥಿಯ ಗೆಲುವಿಗೆ ಅಗತ್ಯವಿರುವ ಮತಗಳ ಲೆಕ್ಕಾಚಾರ ಪೂರ್ಣ ಮತದಾನದ ಬಳಿಕ ತಿಳಿಯಲಿದೆ.

ಜೆಡಿಎಸ್ ಶಾಸಕ ಕೋಲಾರದ ಶ್ರೀನಿವಾಸ್ ಅಡ್ಡಮತದಾನ

ಜೆಡಿಎಸ್ ಶಾಸಕ ಕೋಲಾರದ ಶ್ರೀನಿವಾಸ್ ಅಡ್ಡ ಮತದಾನ ಮಾಡಿದ್ದಾರೆ ಎನ್ನಲಾಗಿದ್ದು. ಶ್ರೀನಿವಾಸ್ ಕಾಂಗ್ರೆಸ್ ಮತವನ್ನು ಹಾಕಿದ್ದಾರೆ. ಶಾಸಕ ಶ್ರೀನಿವಾಸ್ ಮೇಲೆ ಜೆಡಿಎಸ್‌ನ ಎಚ್‌ಡಿ ರೇವಣ್ಣ ಗರಂ ಆಗಿದ್ದಾರೆ. ಈ ಸಂಬಂಧ ಲಿಖಿತ ದೂರನ್ನು ದಾಖಲಿಸುವುದಾಗಿ ರೇವಣ್ಣ ಹೇಳಿದ್ದಾರೆ.

Rajya Sabha Election: 157 MLAs Have Cast Their Votes Till 12 PM

ಕಾಂಗ್ರೆಸ್‌ನ ಐವರು ಕಾಂಗ್ರೆಸ್ ಶಾಸಕರ ವೋಟ್ ರಿಸರ್ವ್

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಈಶ್ವರ ಖಂಡ್ರೆ, ಯುಟಿ ಖಾದರ್ ಸೇರಿದಂತೆ ಐವರು ಮತದಾನವನ್ನು ಕೊನೆಯಲ್ಲಿ ಮಾಡಲಿದ್ದು. ಗೆಲುವಿನ ಲೆಕ್ಕಾಚಾರದಲ್ಲಿ ಮತದಾನವನ್ನು ಮಾಡಲಿದ್ದಾರೆೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+