ದಿ. ರಾಜೀವ್ ಗಾಂಧಿ ಕ್ರಾಸ್‌ಬೀಡ್ ಎಂದು ಸಿದ್ದರಾಮಯ್ಯ ಒಪ್ಪಿ ಕೊಳ್ಳುತ್ತಾರೋ?

ಬೆಂಗಳೂರು, ಡಿ. 07: ದಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಮದುವೆ ಆಗಿದ್ದು ಯಾರನ್ನು? ದಿ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕ್ರಾಸ್ ಬೀಡ್ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಒಪ್ಪಿಕೊಳ್ಳುತ್ತಾರಾ? ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ. ವಿಧಾನಸಭೆ ಕಲಾಪದಲ್ಲಿ ಭಾಗವಹಿಸುವ ಮುನ್ನ ವಿಧಾನಸೌಧದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ವರಿಷ್ಠರ ವೈಯಕ್ತಿಕ ವಿಚಾರಗಳನ್ನು ಕೆದಕಿ ವಾಗ್ದಾಳಿ ನಡೆಸಿದರು. ಈಶ್ವರಪ್ಪ ಅವರು ಲವ್ ಜಿಹಾದ್ ನಿಷೇಧ ಕಾನೂನು ಹಾಗೂ ಗೋಹತ್ಯೆ ನಿಷೇಧ ಕಾನೂನುಗಳನ್ನು ಮಂಡಿಸುವುದನ್ನು ಸಮರ್ಥಿಸಿಕೊಂಡು ಮಾತನಾಡಿದರು.

ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಕ್ರಾಸ್‌ಬೀಡ್ ಅಂತ ಸಿದ್ದರಾಮಯ್ಯ ಅವರು ಒಪ್ಕೊತಾರಾ? ಲವ್‌ಜಿಹಾದ್‌ನಲ್ಲಿ ನಾಟಕ ಮಾಡಿ ಮೋಸದಿಂದ ಮದುವೆ ಮಾಡಿಕೊಂಡು ವಿದೇಶಕ್ಕೆ ಹೆಣ್ಣು ಮಕ್ಕಳನ್ನು ಮಾರಾಟ ಮಾಡುತ್ತಿದ್ದಾರೆ. ಅಂತರ್ಜಾತೀಯ ವಿವಾಹಕ್ಕೆ ನಮ್ಮ ವಿರೋಧ ಇಲ್ಲ. ಆದರೆ ನಮ್ಮ ಮಕ್ಕಳನ್ನು, ಅವರ ಮಕ್ಕಳನ್ನು ಕಂಡೋರಿಗೆ ಮಾರಾಟ ಮಾಡೋದನ್ನು ಸಿದ್ದರಾಮಯ್ಯ ಒಪ್ಪಿಕೊಳ್ಳುತ್ತಾರಾ? ಪ್ರೀತಿಯ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಮಾರುತ್ತಿದ್ದಾರೆ ಎಂದು ಈಶ್ವರಪ್ಪ ಅವರು ವಾಗ್ದಾಳಿ ನಡೆಸಿದರು.

Rajiv Gandhi is a Cross-beed will Siddaramaiah accept it? Eshwarappa questioned Siddaramaiah

ಗೋಹತ್ಯೆ ನಿಷೇಧ ಕಾನೂನು: ಇನ್ನು ಗೋಹತ್ಯೆ ನಿಷೇಧವನ್ನು ನಾವು ಮಾಡಿಯೇ ತಿರುತ್ತೇವೆ. ಅಂತರ್ಜಾತೀಯ ವಿವಾಹಕ್ಕೆ ನಮ್ಮ ವಿರೋಧ ಇಲ್ಲ. ಹಿಂದಿನ 600 ವರ್ಷಗಳಿಂದ ಕ್ರಾಸ್‌ಬೀಡ್ ಇದೆ ಅಂತ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಕ್ರಾಸ್‌ಬೀಡ್ ಅನ್ನೊ ಪದವನ್ನು ಬಳಸುವುದು ನಮ್ಮ ಸಂಸ್ಕೃತಿ ಅಲ್ಲ. ಅದು ನಾಯಿಗೆ ಮಾಡೋದು ರೀ, ಮನುಷ್ಯರಿಗೆ ಅಲ್ಲ. ಅಭಿವೃದ್ಧಿ ಬಹಳ ಮಾಡಿದ್ದೇವೆ ಅಂತ ಕಿಸಿತಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಯಾಕೆ ಸೋತರು?

ಕಾಂಗ್ರೆಸ್ ಪಕ್ಷ ಗ್ರಾಮ ಪಂಚಾಯತ್ ಚುನಾವಣೆಗೆ ಪ್ರಣಾಳಿಕೆ ಮಾಡುತ್ತಾರಲ್ಲವಾ? ಹಸು ಕಡಿಯೋಕೆ ಅವಕಾಶ ಮಾಡಿ ಕೊಡುತ್ತೇವೆ ಅಂತ ಪ್ರಣಾಳಿಕೆಯಲ್ಲಿ ಹೇಳಲಿ

Recommended Video

      ಜಸ್ಟ್ ಕ್ಯಾಮರಾ ನೋಡಿ ತಬ್ಬಿಬ್ಬಾಗಿ ಘೋಷಣೆ ಕೂಗಿದ ನಾಯಕರು | Oneindia Kannada
      Rajiv Gandhi is a Cross-beed will Siddaramaiah accept it? Eshwarappa questioned Siddaramaiah

      ನೋಡೋಣ. ನಾವು ಗೋವನ್ನು ತಾಯಿ ಎಂದು ಕರೆಯುತ್ತೇವೆ. ಆದರೆ ಸಿದ್ದರಾಮಯ್ಯ ವಯಸ್ಸಾದ ಗೋವನ್ನು ಕಸಾಯಿ ಖಾನೆಗೆ ಕೊಡದೇ, ಬಿಜೆಪಿ ಆರ್‌ಎಸ್ಎಸ್ ನಾಯಕರ ಮನೆ ಮುಂದೆ ಬಿಟ್ಟುಕೊಳ್ಳಲಿ ಎಂದಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಅವರ ತಾಯಿಗೆ ವಯಸ್ಸಾಗಿದೆ ಅಂತ ಯಾರದಾದರೂ ಮನೆ ಮುಂದೆ ಬಿಟ್ಟು ಬರುತ್ತಾರಾ? ಬಹುಸಂಖ್ಯಾತರ ಮನಸ್ಸಿಗೆ ಯಾಕೆ ನೋವು ಮಾಡುತ್ತೀರಿ? ಅಂತಾ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ತೀರಾ ವೈಯಕ್ತಿಕವಾಗಿ ಮಾತನಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+