ಮೇಲ್ಮೈ ಸುಳಿಗಾಳಿ: ಜನವರಿ 8ರವರೆಗೂ ರಾಜ್ಯದಲ್ಲಿ ಭಾರಿ ಮಳೆ

ಬೆಂಗಳೂರು, ಜನವರಿ 06: ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಕಾರಣ ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಜನವರಿ 8ರವರೆಗೂ ಮಳೆಯಾಗಲಿದೆ.

Recommended Video

      ಜನವರಿ 9ರವರೆಗೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ , BESCOM ಎಚ್ಚರಿಕೆ | Oneindia Kannada

      ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಬುಧವಾರ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಗುಡಗು, ಸಿಡಿಲು ಹೆಚ್ಚಾಗಲಿದೆ.

      ಜನವರಿ 8 ರಂದು ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, 9ರಿಂದ ಮಳೆ ದಿಢೀರ್ ತಗ್ಗಲಿದೆ. ಉತ್ತರ ಒಳನಾಡಿನ ಕೆಲವೆಡೆ ಚದುರಿದ ಮಳೆಯಾಗಲಿದೆ.

      ಮಳೆಯಾಗಿರುವ ಪ್ರದೇಶಗಳು ಯಾವುವು?

      ಮಳೆಯಾಗಿರುವ ಪ್ರದೇಶಗಳು ಯಾವುವು?

      ಕಿರವತ್ತಿ, ಹಳಿಯಾಳ, ಮಂಚಿಕೆರೆ, ಬೈಲಹೊಂಗಲ, ಹುಂಚದ ಕಟ್ಟೆ, ಕಲಘಟಗಿ, ಕಳಸ, ಸಾಗರದಲ್ಲಿ ಮಳೆಯಾಗಿದೆ.

      ಎಲ್ಲಿ ಮಳೆಯಾಗಲಿದೆ?

      ಎಲ್ಲಿ ಮಳೆಯಾಗಲಿದೆ?

      ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗದಲ್ಲಿ ಮಳೆಯಾಗಲಿದೆ.

      ತಮಿಳುನಾಡಿನಲ್ಲೂ ಭಾರಿ ಮಳೆ

      ತಮಿಳುನಾಡಿನಲ್ಲೂ ಭಾರಿ ಮಳೆ

      ಚೆನ್ನೈ ನಗರ ಸೇರಿದಂತೆ ತಮಿಳುನಾಡಿನ ಹಲವಡೆ ಮಂಗಳವಾರ ಬೆಳಗ್ಗೆಯಿಂದ ಭಾರಿ ಮಳೆಯಾಗುತ್ತಿದ್ದು, ಇದು ಬುಧವಾರದವರೆಗೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
      ಚೆನ್ನೈ ಹಾಗೂ ನಗರದ ಸುತ್ತಮುತ್ತ ಸೋಮವಾರ ರಾತ್ರಿಯಿಂದ ಭಾರಿ ಮಳೆಯಾಗುತ್ತಿದ್ದು, ನುಂಗಂಬಾಕ್ಕಂ ಮತ್ತು ಮೀನಾಂಬಾಕ್ಕಂನಲ್ಲಿ 10 ಸೆಂ.ಮೀ ಗಿಂತ ಹೆಚ್ಚಿನ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
      ಹಲವು ದಿನಗಳ ಬಳಿಕ ಚೆನ್ನೈನಲ್ಲಿ ಮಳೆಯಾಗಿದೆ. ನಗರದ ಪ್ರಮುಖ ರಸ್ತೆಗಳು ನೀರಿನಿಂದ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಮುಂದಿನ ಹಲವು ಗಂಟೆಗಳಲ್ಲಿ ವಿಲ್ಲುಪುರಂ, ಚೆಂಗಲ್ಪಟ್ಟು, ಕಾಂಚೀಪುರಂ, ಕಡಲೂರು, ನಾಗಪಟ್ಟಣಂ ಮತ್ತು ತಿರುವಣ್ಣಾಮಲೈ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

      ಬೆಂಗಳೂರು ಹವಾಮಾನ ವರದಿ

      ಬೆಂಗಳೂರು ಹವಾಮಾನ ವರದಿ

      ಬೆಂಗಳೂರಲ್ಲಿ 27 ಡಿಗ್ರಿ ಗರಿಷ್ಠ ಉಷ್ಣಾಂಶ, 18 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.ಬೀದರ್‌ನಲ್ಲಿ 13.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+