Karnataka rain alert: ಇಂದಿನಿಂದ ಮಂಗಳವಾರವರೆಗೆ ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆ, ಮುನ್ಸೂಚನೆ ಇಲ್ಲಿದೆ

ಬೆಂಗಳೂರು, ಡಿಸೆಂಬರ್ 10: ಕರ್ನಾಟಕ ರಾಜ್ಯದ ಕೆಲವು ಕಡೆಗಳಲ್ಲಿ ಹಿಂಗಾರು ಮಳೆಯ ಆರ್ಭಟ ಕಂಡು ಬರುತ್ತಿದೆ. ಶನಿವಾರವು ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ. ರಾಜ್ಯದ ಒಳನಾಡು ಭಾಗದ ಕೆಲವು ಜಿಲ್ಲೆಗಳು ಸೇರಿದಂತೆ ಕರಾವಳಿ ಭಾಗಕ್ಕೆ ಇಂದು ಮತ್ತು ನಾಳೆ ಅಂದರೆ ಮಂಗಳವಾರದವರೆಗೆ ವ್ಯಾಪಕ ಮಳೆ ಮುಂದುವರಿಯುವ ಲಕ್ಷಣಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸದ್ಯಕ್ಕೆ ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ಮೈಚಾಂಗ್ ಚಂಡಮಾರುತ ಪ್ರಭಾವ ಕಡಿಮೆಯಾಗಿದೆ. ಅದು ಕರಾವಳಿ ಭಾಗದ ಭೂಮೇಲ್ಮೈ ಮೇಲೆ ಅಪ್ಪಳಿಸಿದ ಮೇಲೆ ದುರ್ಬಲಗೊಂಡಿದೆ. ಇತ್ತ ಹಿಂಗಾರು ಮಳೆ ನೇರವಾಗಿಯೇ ಕೆಲವು ಕಡೆಗಳಲ್ಲಿ ಸಕ್ರಿಯಗೊಳ್ಳುವ ನಿರೀಕ್ಷೆಗಳು ಇವೆ.

Rain Very Likely to Occur Few Places Over Coastal and South Interior Karnataka, Dry Weather in NIK

ಇಂದು ಭಾನುವಾರ ಸೇರಿ ಎರಡು ದಿನ ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲೆಗಳಾದ ದಾವಣಗೆರೆ, ಚಿತ್ರದುರ್ಗ, ತುಮಕೂರು, ವಿಜಯನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಈ ಭಾಗದಲ್ಲಿ ಸಾಧಾರಣದಿಂದ ವ್ಯಾಪಕ ಮಳೆ ಬೀಳುವ ಸಾಧ್ಯತೆಗಳು ಇವೆ.

ಇಲ್ಲಿ 3-4 ದಿನ ಮಳೆ ಸಂಭವ

ಇನ್ನುಳಿದಂತೆ ಕರಾವಳಿ ಭಾಗದ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಇಂದಿನಿಂದ ಮುಂದಿನ ಮೂರರಿಂದ ನಾಲ್ಕು ದಿನ ಉತ್ತಮ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆಯ ವರದಿ ಮಾಹಿತಿ ನೀಡಿದೆ.

ಆದರೆ ಉತ್ತರ ಒಳನಾಡಿನ ಭಾಗದ ಯಾವ ಜಿಲ್ಲೆಗಳಿಗೂ ಮಳೆ ಮುನ್ಸೂಚನೆ ನೀಡಿಲ್ಲ. ಕಾರಣ ಇಲ್ಲಿ ಮಳೆಯಾಗುವ, ಕೊನೆಯ ಪಕ್ಷ ತಂಪು ವಾತಾವರಣದ ಯಾವ ಮುನ್ಸೂಚನೆಗಳು ಇಲ್ಲ. ಮಳೆ ಬದಲಾಗಿ ಇಲ್ಲಿ ಇನ್ನೂ ಹಲವು ದಿವಸಗಳು ಅಧಿಕ ಬಿಸಿಲಿನ ಶುಷ್ಕ ವಾತಾವರಣವೇ ಮುಂದುವರಿಯಲಿದೆ ಎಂದು ಐಎಂಡಿ ತನ್ನ ವರದಿಯಲ್ಲಿ ತಿಳಿಸಿದೆ.

ಮೊದಲಿನಿಂದಲೂ ಮಳೆ ಕೊರತೆ ಕಾರಣದಿಂದ ಮುಂಗಾರು ಬೆಳೆ ಕೈಕೊಟ್ಟು ರೈತ ಪರಿತಪಿಸುತ್ತಿದ್ದ. ಇದೀಗ ಹಿಂಗಾರು ಮಳೆ ಕೈಕೊಟ್ಟಿದೆ. ಹೀಗಾಗಿ ಉತ್ತರ ಒಳನಾಡಿನ ಕೆಲವು ಭಾಗಗಳ ರೈತರು ಹಿಂಗಾರು ಹಂಗಾಮು ಬಿತ್ತಿತ್ತು, ಮಳೆಗಾಗಿ ಕಾಯುತ್ತಿದ್ದಾರೆ.

Rain Very Likely to Occur Few Places Over Coastal and South Interior Karnataka, Dry Weather in NIK

BPL ಆರೋಗ್ಯ ವಿಮೆ ಜಾರಿಗಾಗಿ ಇಂಧನ ಮೇಲೆ 'ಸೆಸ್' ವಿಧಿಸಲು ರಾಜ್ಯ ಸರ್ಕಾರ ಪ್ಲಾನ್

ಶನಿವಾರ ಕೆಲವೆಡೆ ಉತ್ತಮ ಮಳೆ ದಾಖಲು

ರಾಜ್ಯದಲ್ಲಿ ಮೀನುಗಾರರಿಗೆ ಯಾವುದೇ ಮುನ್ಸೂಚನೆಗಳಾಗಲಿ, ಎಚ್ಚರಿಕೆಗಳಾಗಲಿ ನೀಡಲಾಗಿಲ್ಲ. ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರು, ಚಿತ್ರದುರ್ಗ,ಕೊಟ್ಟಿಗೆಹಾರ, ಹೊಸಕೋಟೆ, ಹಾಸನ, ಕೊಡಗು ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ವಿವಿಧೆಡೆ ಜೋರು ಮಳೆ ದಾಖಲಾಗಿದೆ. ಈ ಮಳೆ ಇನ್ನೂ ಕೆಲವು ದಿನ ಮುಂದುವರಿಯಲಿದೆ.

ರಾಜ್ಯದ ಗರಿಷ್ಠ ತಾಪಮಾನ ಕಾರವಾಡ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಹೊನ್ನಾವರದಲ್ಲಿ 34 ಡಿ.ಸೆ, ಕಲಬರಗಿಯಲ್ಲಿ 32, ಶಿವಮೊಗ್ಗ 31, ರಾಯಚೂರು 31 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಐಎಂಡಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+