ನಾಲ್ವರ ಬಲಿ, ಇನ್ನೂ ಎರಡು ದಿನ ಮಳೆ ಆಟಕಾಟ

ಬೆಂಗಳೂರು, ಮಾರ್ಚ್ 8: ರಾಜ್ಯದಲ್ಲಿ ಅಕಾಲಿಕ ಮಳೆ ಕೃಷಿಕರನ್ನು ಹೈರಾಣಗೊಳಿಸಿದೆ. ಕೈಗೆ ಬಂದಿದ್ದ ಫಸಲು ಮಳೆಯ ಏಟಿಗೆ ನೆಲಕ್ಕೆ ಉರುಳಿರುವುದ ಕಂಡು ರೈತ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಆಲಿಕಲ್ಲು ಸಹಿತ ಮಳೆಯ ಆರ್ಭಟ ಹೇಗಿದೆಯೆಂದರೆ ಗುರುವಾರ ಮತ್ತು ಶುಕ್ರವಾರದಂದು ನಾಲ್ವರು ಸಾವಿಗೀಡಾಗಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ಗೋವಾ ಮತ್ತು ಮಹಾರಾಷ್ಟ್ರಕ್ಕೆ ಹೊಂದಿಕೊಂಡಂತೆ ಸುಳಿಗಾಳಿ ಬೀಸುತ್ತಿದ್ದು, ತೇವಾಂಶ ಹೆಚ್ಚಾಗಿದೆ. ಇದರಿಂದ ರಾಜ್ಯ ಬಹುತೇಕ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ಧಾರಾಕಾರವಾಗಿ ಸುರಿಯುತ್ತದೆ. ಮಾರ್ಚ್ 10ರವರೆಗೂ ಮಳೆ ಹೀಗೆಯೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲೂ 2-3 ದಿನದಿಂದ ಅಲ್ಲಲ್ಲಿ ಮಳೆಯಾಗುತ್ತಿದ್ದು ರಾಜಧಾನಿ ತಂಪಾಗಿದೆ. ಕಳೆದ ಮಾರ್ಚಿನಲ್ಲಿ ಬೇಸಿಗೆ ಆರಂಭದಿಂದಲೇ ಬೆಂಗಳೂರು ಜನ ಬಿಸಿಲ ಬೇಗೆಗೆ ತತ್ತರಿಸಿದ್ದರು. ಆದರೆ ಈ ಬಾರಿ ಬೇಸಿಗೆ ತಡವಾಗಿ ಕಾಲಿಡುತ್ತಿದೆ. ನಗರ ಕೂಲ್ ಕೂಲ್ ಆಗಿದೆ ಎಂದು ಬೆಂಗಳೂರಿಗರು ಹರ್ಷಚಿತ್ತರಾಗಿದ್ದಾರೆ.

Rain summer east monsoon wreak havoc in Karnataka- 4 dead

ರಾಜಧಾನಿ ಸೇರಿದಂತೆ ರಾಜ್ಯದ ಒಳನಾಡು ಪ್ರದೇಶಗಳ ಹಲವೆಡೆ ಗುಡುಗು ಸಹಿತ ಮಳೆಯಾಗಲಿದೆ. ಗರಿಷ್ಠ ಉಷ್ಣಾಂಶ ಶಿವಮೊಗ್ಗದಲ್ಲಿ (33 ಡಿಗ್ರಿ ಸೆಲ್ಸಿಯಸ್) ದಾಖಲಾಗಿದೆ.

ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕು ದೇವಲಾಪುರದಲ್ಲಿ ಪ್ರೇಮಾ (37), ಹಾಗೂ ಗುಂಡ್ಲುಪೇಟೆ ತಾಲೂಕು ಬೊಮ್ಮಲಾಪುರದ ಚಂದ್ರಮ್ಮ (30) ಸಿಡಿಲಿಗೆ ಬಲಿಯಾಗಿದ್ದಾರೆ. ಇನ್ನೂ ನಾಲ್ವರು ಗಾಯಗೊಂಡಿದ್ದಾರೆ.

ಇನ್ನು ಬಳ್ಳಾರಿ ಜಿಲ್ಲೆಯ ಕಮ್ಮಚೇಡು ಗ್ರಾಮದಲ್ಲಿ ಬಹಿರ್ದೆಸೆಗೆಂದು ಹೋಗಿದ್ದ ಲಕ್ಷ್ಮಿದೇವಿ (50) ಎಂಬುವವರ ಮೇಲೆ ದೊಡ್ಡ ಗಾತ್ರದ ಆಲಿಕಲ್ಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳ್ಳಾರಿ ನಗರದಲ್ಲಿ ಗೋಡೆ ಕುಸಿದು ರಾಜೇಶ್ (40) ಮೃತಪಟ್ಟಿದ್ದಾನೆ. ಪಕ್ಕದ ಚಿತ್ರದುರ್ಗ ಜಿಲ್ಲೆಯಾದ್ಯಂತ ಶುಕ್ರವಾರ ಭರ್ಜರಿ ಮಳೆಯಾಗಿದ್ದು, ಭಾರಿ ಗಾತ್ರದ ಆಲಿಕಲ್ಲು, ಸಿಡಿಲು ಸಹಿತ ಮಳೆಯಾಗಿರುವುದರಿಂದ ಲಕ್ಷಾಂತರ ರೂ ಮೌಲ್ಯದ ಬೆಳೆ ಹಾನಿ ಸಂಭವಿಸಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನಾದ್ಯಂತ ದೊಡ್ಡ ಗಾತ್ರದ ಹಿಮಗಡ್ಡೆ ಸಹಿತ ಆಲಿಕಲ್ಲು ಮಳೆ ಸುರಿದ ಪರಿಣಾಮ ಹಿಮಸದೃಶ ವಾತಾವರಣ ನಿರ್ಮಾಣವಾಗಿದೆ. ಚಾಮರಾಜನಗರ, ಹನೂರು, ಮೈಸೂರು, ಗುಂಡ್ಲುಪೇಟೆ, ಕೋಲಾರ, ತುಮಕೂರಿನಲ್ಲೂ ನಿನ್ನೆ ಸಂಜೆ ಮಳೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+