ಕರ್ನಾಟಕದ 6 ಜಿಲ್ಲೆಗಳಿಗೆ ರೆಡ್ ಅಲರ್ಟ್: ಗಾಳಿ ಸಹಿತ ಧಾರಾಕಾರ ಮಳೆ

ಬೆಂಗಳೂರು, ಅಕ್ಟೋಬರ್ 15: ಕರ್ನಾಟಕದ 6 ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ವಿಜಯಪುರ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ ಎರಡು ದಿನ ಈ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ.

ಈಗಾಗಲೇ ಗುಡುಗು, ಗಾಳಿ ಸಮೇತ ಮಳೆಯಾಗುತ್ತಿದೆ. ವಾಯುಭಾರ ಕುಸಿತ ಬುಧವಾರ ಬೆಳಗ್ಗೆ ಅಂತಾರಾಷ್ಟ್ರೀಯ ಕಾಲಮಾನ 11.30ರ ವೇಳೆಗೆ ಗಂಟೆಗೆ ಸುಮಾರು 20 ಕಿಲೋಮೀಟರ್ ವೇಗದಲ್ಲಿ ಸಾಗಿ, ಕರ್ನಾಟಕದ ಉತ್ತರ ಒಳನಾಡು ಮತ್ತು ಅದಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಪ್ರದೇಶಗಳನ್ನು, 40 ಕಿಲೋಮೀಟರ್ ವೇಗದಲ್ಲಿ ಕಲಬುರಗಿ ಮತ್ತು ಸೊಲ್ಲಾಪುರದಲ್ಲಿ 110 ಕಿಲೋಮೀಟರ್ ವೇಗದಲ್ಲಿ ಹಾದು ಹೋಗಿದೆ.

ವಾಯುಭಾರ ಕುಸಿತ ತೀವ್ರಗೊಳ್ಳುವ ಸಾಧ್ಯತೆ

ವಾಯುಭಾರ ಕುಸಿತ ತೀವ್ರಗೊಳ್ಳುವ ಸಾಧ್ಯತೆ

ಪಶ್ಚಿಮ-ವಾಯವ್ಯ ದಿಕ್ಕಿನತ್ತ ಅದು ಸಾಗಿದ್ದು, ಮುಂದಿನ 12 ಗಂಟೆಗಳಲ್ಲಿ ದುರ್ಬಲಗೊಳ್ಳುವ ಸಾಧ್ಯತೆ ಇದೆ. ಬಳಿಅಕ್ಟೋಬರ್ 16ರಂದು ಬೆಳಿಗ್ಗೆ ಮಹಾರಾಷ್ಟ್ರದಲ್ಲಿನ ಅರಬ್ಬಿ ಸಮುದ್ರದ ಪೂರ್ವ ಕೇಂದ್ರಿಯ ಭಾಗದತ್ತ ಮತ್ತು ಪಶ್ಚಿಮ-ವಾಯವ್ಯದತ್ತ ಸಾಗುವ ನಿರೀಕ್ಷೆ ಇದೆ. ವಾಯುಭಾರ ಕುಸಿತ ಮತ್ತಷ್ಟು ತೀವ್ರವಾಗುವ ಸಾಧ್ಯತೆಗಳೂ ಇದ್ದು, ಅದು ಅರಬ್ಬೀ ಸಮುದ್ರದ ಮೂಲಕ ಮಹಾರಾಷ್ಟ್ರ, ದಕ್ಷಿಣ ಗುಜರಾತ್ ನ ಕರಾವಳಿ ಮೂಲಕ ಹಾದು ವಾಯುವ್ಯದತ್ತ ಚಲಿಸುವ ಸಾಧ್ಯತೆ ಇದೆ. ಅಕ್ಟೋಬರ್ 13ರ ಬೆಳಿಗ್ಗೆ 8.30ರಿಂದ 14ರ ಬೆಳಿಗ್ಗೆ 8.30ವರೆಗೆ 24 ಗಂಟೆಗಳಲ್ಲಿ ಭಾರಿ ಮಳೆಯಾಗಿದೆ.

ಮಳೆಯಾಗಿರುವ ಪ್ರದೇಶಗಳು

ಮಳೆಯಾಗಿರುವ ಪ್ರದೇಶಗಳು

ಧರ್ಮಸ್ಥಳ, ಚಿಂಚೋಳಿ, ಸುಳ್ಯ, ಭಟ್ಕಳ, ಕೊಟ್ಟಿಗೆಹಾರ,ಸುಬ್ರಹ್ಮಣ್ಯ,ಉಪ್ಪಿನಂಗಡಿ, ಅರಸಳುವಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ.

ಹೊನ್ನಾವರ, ಕೊಪ್ಪ, ಇಂಡಿ, ಕಳಸ, ಸಕಲೇಶಪುರ, ಕಿರವತ್ತಿ, ಜಮಖಂಡಿ, ತ್ಯಾಗರ್ತಿ, ಕೆಂಭಾವಿ, ಜಾಲಹಳ್ಳಿ, ಸಂತೇಬೆನ್ನೂರು, ಸಂಕೇಶ್ವರ, ಹುಕ್ಕೇರಿ, ಧಾರವಾಡ, ಬಾಗಲಕೋಟೆ, ಶಿಕಾರಿಪುರ, ಸಾಗರ, ಚಿಕ್ಕಮಗಳೂರು, ಗುಡಿಬಂಡೆಯಲ್ಲಿ ಮಳೆಯಾಗಿದೆ.
ಇಂದು ಭಾರಿ ಮಳೆಯ ಮುನ್ಸೂಚನೆ

ಇಂದು ಭಾರಿ ಮಳೆಯ ಮುನ್ಸೂಚನೆ

ಅಕ್ಟೋಬರ್ 15ರಂದು ಕೆಲವು ಪ್ರದೇಶಗಳಲ್ಲಿ ಸಾಧಾರಣದಿಂದ ಕೂಡಿದ ಭಾರಿ ಮಳೆಯಾಗುವ ಸಾದ್ಯತೆ ಇದೆ. ಕರ್ನಾಟಕದ ಕರಾವಳಿಯ ಹಲವು ಪ್ರದೇಶಗಳಲ್ಲಿ, ಗೋವಾ ಮತ್ತು ಕೊಂಕಣ ಪ್ರದೇಶದಲ್ಲಿ ಭಾರಿ ಮಳೆ ಸಾಧ್ಯತೆ. ಮತ್ತು ಮಧ್ಯ ಮಹಾರಾಷ್ಟ್ರ ಹಾಗೂ ದಕ್ಷಿಣ ಗುಜರಾತ್ ನಲ್ಲೂ ಭಾರಿ ಮಳೆಯಾಗುವ ನಿರೀಕ್ಷೆ ಇದೆ.

ಬಲವಾದ ಗಾಳಿ ಬೀಸಲಿದೆ

ಬಲವಾದ ಗಾಳಿ ಬೀಸಲಿದೆ

ಮುಂದಿನ 12 ಗಂಟೆಗಳ ಕಾಲ ಕರ್ನಾಟಕದ ಉತ್ತರ ಒಳನಾಡು ಮತ್ತು ಅದಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಬಲವಾದ ಗಾಳಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಬೀಸಲಿದೆ ಮತ್ತು ಬಳಿಕ ಅದರ ವೇಗ ತಗ್ಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+