ಮಂಗಳೂರು, ಕಾರವಾರದಲ್ಲಿ ಜೋರು ಮಳೆಯ ಎಚ್ಚರಿಕೆ
ಬೆಂಗಳೂರು, ಜೂನ್ 23: ಮಂಗಳೂರು ಹಾಗೂ ಕಾರವಾರದಲ್ಲಿ ಗಾಳಿಯಿಂದ ಕೂಡಿದ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
Recommended Video
ಪ್ರತಿ ನಿತ್ಯವು ಹವಾಮಾನದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಒಂದು ದಿನ ಬಿಸಿಲಿದ್ದರೆ ಮತ್ತೊಂದು ದಿನ ಮಳೆ ಹೀಗೆ ಬದಲಾಗುತ್ತಿದೆ.
ಬೆಂಗಳೂರಿನಲ್ಲಿ ಜೂನ್ 22 ರಂದು ಮಧ್ಯಾಹ್ನದವರೆಗೂ ಸ್ವಲ್ಪ ಬಿಸಿಲು, ಉಳಿದಂತೆ ಮೋಡಕವಿದ ವಾತಾವರಣವಿತ್ತು, ಸಂಜೆ 5 ಗಂಟೆ ಸುಮಾರಿಗೆ ಮಳೆಯಾಗಿತ್ತು.

ದಕ್ಷಿಣ ಒಳನಾಡನಲ್ಲಿ ಮುಂಗಾರು ದುರ್ಬಲವಾಗಿದೆ. ಕದ್ರ, ಸುಬ್ರಹ್ಮಣ್ಯ, ಕೊಲ್ಲೂರು, ಉಪ್ಪಿನಂಗಡಿ, ಕಾರ್ಕಳದಲ್ಲಿ ಹೆಚ್ಚು ಮಳೆಯಾಗಿದೆ.ಸುಳ್ಯ, ಮಾಣಿ, ಧರ್ಮಸ್ಥಳ, ಭಾಗಮಂಡಲ, ಕಮ್ಮರಡಿ, ತಿಪಟೂರು, ಪಣಂಬೂರು, ಗೋಕರ್ಣ, ಮಡಿಕೇರಿ, ವಿರಾಜಪೇಟೆ, ಶೃಂಗೇರಿ, ಕುಣಿಗಲ್, ಮುಲ್ಕಿ, ಶಿರಾಲಿ, ತ್ಯಾಗರ್ತಿ, ತಾಳಗುಪ್ಪ, ಸಿದ್ದಾಪುರ, ಹಾರಂಗಿ, ಹೊಸನಗರ, ಕೊಟ್ಟಿಗೆಹಾರ, ಎಚ್‌ಡಿ ಕೋಟೆ, ಚನ್ನಗಿರಿ,ಹೊಳಲ್ಕೆರೆಯಲ್ಲಿ ಸಾಧಾರಣ ಮಳೆಯಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಜೂನ್ 27ರವರೆಗೂ ಮಳೆ ಮುಂದುವರೆಯಲಿದೆ. ಬೆಂಗಳೂರಿನಲ್ಲಿ ಬಿಸಿಲು ಕಾಣಿಸಿಕೊಂಡಿದ್ದು, ಒಣಹವೆ ಮುಂದುವರೆದಿದೆ. ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಮಳೆಯಾಗಲಿದೆ.
ಬೆಂಗಳೂರಿನಲ್ಲಿ 29 ಡಿಗ್ರಿ ಗರಿಷ್ಠ ಉಷ್ಣಾಂಶ, 21 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.












Click it and Unblock the Notifications