Rain Alert: ಮಳೆ ಅಬ್ಬರ ಶುರು.. ಬೇಸಿಗೆಯಲ್ಲೂ ಭಾರಿ ಮಳೆ!
ಮಳೆಗಾಗಿ ಜನರು ಕಾದು ಕೂತಿದ್ದಾರೆ, ಆದಷ್ಟು ಬೇಗ ಮಳೆ ಬರಲಿ ದೇವರೆ ಅಂತಾ ಪ್ರಾರ್ಥನೆ ಮಾಡುತ್ತಿದ್ದಾರೆ. ಆದರೂ ಮಳೆಯ ಸುಳಿವೆ ಇಲ್ಲ, ಮಳೆ ಬರಬೇಕಾದ ಸಮಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿ ಮಳೆಯ ಮೋಡಗಳು ಮರೆಯಾಗಿ ಹೋಗುತ್ತಿವೆ. ಹೀಗಿದ್ದಾಗಲೇ ಮಳೆಯ ವಿಚಾರವಾಗಿ ಭರ್ಜರಿ ಸುದ್ದಿಯೊಂದು ಇಲ್ಲಿದೆ, ಮುಂದೆ ಓದಿ.
ಕರ್ನಾಟಕದ ಬಹುತೇಕ ಕಡೆ ಇದೀಗ ನೆತ್ತಿ ಸುಡವ ಬಿಸಿಲು ಆವರಿಸಿದ್ದು, ಜನರು ಕುಡಿಯುವ ನೀರಿಗಾಗಿ ಟ್ಯಾಂಕರ್ ನೀರನ್ನೇ ಆಶ್ರಯಿಸಿದ್ದಾರೆ. 3000ದಿಂದ 4000 ರೂಪಾಯಿ ಖರ್ಚು ಮಾಡಿ ಜನ ತೋಟ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಬೆಳೆಗೆ ಬಿಡಿ ಕುಡಿಯುವ ನೀರು ಕೂಡ ಸಿಗದ ಪರಿಸ್ಥಿತಿ ಎದುರಾಗಿದೆ. ಹೀಗಿದ್ದಾಗಲೇ ಮಳೆ ಬರಲಿ ಅಂತಾ ಹಲವು ಪ್ರದೇಶದಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಭರ್ಜರಿ ಸುದ್ದಿಯೊಂದು ಹೊರಬಿದ್ದಿದ್ದು, ಈ ಸಂಕಷ್ಟದ ನಡುವೆ ಇದೀಗ ಭಾರಿ ಮಳೆ ಸುರಿಯಲು ಆರಂಭವಿಸಿದೆ.

ಮಳೆ ಬಂತು ಮಳೆ.. ಮಳೆ ಬಂತು ಮಳೆ..!
ಮಳೆಗಾಗಿ ಭೂಮಿ ತಾಯಿ ಕಾದು ಕೂತಿದ್ದಾಳೆ ಮಳೆ ಬೀಳದೆ ಇದ್ದರೆ ಪರಿಸ್ಥಿತಿ ಕೈಮೀರಿ ಹೋಗಲಿದೆ. ಪರಿಸ್ಥಿತಿ ಹೀಗೆ ಹದ್ದು ಮೀರಿ ಹೋಗಿರುವ ಸಮಯದಲ್ಲೇ, ಭರ್ಜರಿ ಸುದ್ದಿಯೊಂದು ಸಿಕ್ಕಿದೆ. ಅದು ಏನೆಂದರೆ ಈ ಪ್ರದೇಶದಲ್ಲಿ ಭರ್ಜರಿ ಮಳೆ ಬೀಳುವ ಎಲ್ಲಾ ಮುನ್ಸೂಚನೆ ಇದೀಗ ಸಿಕ್ಕಿದೆ. ಹಾಗಾದ್ರೆ ಎಲ್ಲೆಲ್ಲಿ ಮಳೆ ಬೀಳಲಿದೆ? ಕನ್ನಡಿಗರ ನೀರಿನ ಸಮಸ್ಯೆಗೆ ಮುಕ್ತಿ ಸಿಗಲಿದೆಯಾ? ಮಳೆ ಬೀಳುವ ಬಗ್ಗೆ ಭರ್ಜರಿ ಸುದ್ದಿ ತಿಳಿಯಲು ಮುಂದೆ ಓದಿ.
ಯಾವ ಯಾವ ಜಾಗದಲ್ಲಿ ಮಳೆ?
ಈಗಿನ ಮಾಹಿತಿಯ ಪ್ರಕಾರ ಏಪ್ರಿಲ್ ಮೊದಲ ವಾರದ ಆರಂಭದಲ್ಲಿ ಜಮ್ಮು & ಕಾಶ್ಮೀರ, ಲಡಾಖ್, ಗಿಲ್ಗಿಟ್ ಬಾಲ್ಟಿಸ್ತಾನ್, ಮುಜಫರಾಬಾದ್, ಹಿಮಾಚಲ ಪ್ರದೇಶ, ಉತ್ತರಾಖಂಡದ ಕೆಲ ಭಾಗಗಳಲ್ಲಿ ಗುಡುಗು & ಮಿಂಚು ಸಮೇತ ವ್ಯಾಪಕವಾದ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದ್ದು, ಹಾಗೇ ಭಾರಿ ಹಿಮಪಾತದ ಎಚ್ಚರಿಕೆ ಕೂಡ ನೀಡಲಾಗಿದೆ. ಈ ಮೂಲಕ ಉತ್ತರ ಭಾರತದಲ್ಲಿ ಮತ್ತೆ ಮಳೆಯ ಅಬ್ಬರ ಶುರುವಾಗಲಿದೆ. ಕರ್ನಾಟಕದಲ್ಲಿ ಕೂಡ ಇನ್ನೇನು ಸಿಹಿಸುದ್ದಿ ಸಿಗಲಿದೆ. ಹಾಗಾದ್ರೆ ಏಪ್ರಿಲ್ ಮೊದಲ ವಾರದಲ್ಲಿ ಕರ್ನಾಟಕದ ಯಾವ ಭಾಗದಲ್ಲಿ ಮಳೆಯಾಗಲಿದೆ? ಬನ್ನಿ ಪೂರ್ತಿ ಮಾಹಿತಿಗೆ ಮುಂದೆ ಓದೋಣ.
ಕರ್ನಾಟಕದಲ್ಲೂ ಮಳೆ ಗ್ಯಾರಂಟಿ!
ಹವಾಮಾನ ತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಶಿವಮೊಗ್ಗ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ ಮೊದಲ ವಾರದಿಂದ ಮಳೆಯಾಗಲಿದೆ ಅಂತಾ ಇದೀಗ ಹವಾಮಾನ ತಜ್ಞರಿಂದ ಮುನ್ಸೂಚನೆ ಸಿಕ್ಕಿದೆ. ಪೂರಕವಾಗಿ ಈಗಾಗಲೇ, ಕಾವೇರಿ ನದಿಯ ತವರು ಜಿಲ್ಲೆ ಕೊಡಗು ಸೇರಿದಂತೆ ಚಿಕ್ಕಮಗಳೂರು, ಹುಬ್ಬಳ್ಳಿ & ಧಾರವಾಡ ಸೇರಿ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲೂ ಮಳೆ ಬಿದ್ದಿದೆ. ಹಾಗೇ ವಿಜಯಪುರ ಜಿಲ್ಲೆಯಲ್ಲಿ ಭಾರಿ ಮಳೆ & ಗಾಳಿ ಬಂದು ಸಂತಸ ತಂದಿದೆ. ಈ ನಡುವೆ ದೇಶದ ಇನ್ನೂ ಹಲವು ಕಡೆ ಭಾರಿ ಮಳೆ ಶುರುವಾಗಿದೆ.
ಸರ್ಕಾರಕ್ಕೂ ರಿಲೀಫ್ ಸಿಗಲಿದೆ
ಒಟ್ನಲ್ಲಿ ಮಳೆ ಬರದೇ ಇದ್ದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗಲಿದೆ, ಹಾಗೇ ಚುನಾವಣೆಯ ವೇಳೆ ಇದು ಸರ್ಕಾರಗಳಿಗೂ ಸಮಸ್ಯೆ ತಂದೊಡ್ಡಿದೆ. ಹೀಗಾಗಿ ನೀರಿನ ಕೊರತೆ ನೀಗಿಸಲು ಸರ್ಕಾರದ ಕಡೆಯಿಂದ ಕೂಡ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಮತ್ತೊಂದು ಕಡೆ ಪ್ರಕೃತಿಯ ಕಡೆಯಿಂದ ಕೂಡ ಅನುಮತಿ ಸಿಗಬೇಕಿದ್ದು, ಈ ಮೂಲಕ ಭರ್ಜರಿ ಮಳೆಯಾದರೆ ನೀರಿನ ಬಗ್ಗೆ ಎದ್ದಿರುವ ಸಮಸ್ಯೆ ಸುಖಾಂತ್ಯ ಕಾಣಲಿದೆ.
ಕರುಣೆ ತೋರಿಸೋ ಮಳೆರಾಯ...
ಮಳೆಯೇ ಇಲ್ಲ, ಮಳೆ ಬಾರದೆ ಭೂಮಿ ಒಣಗಿ ಹೋಗಿದೆ. ಅದ್ರಲ್ಲೂ ನಮ್ಮ ಬೆಂಗಳೂರು ಹನಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿಗೆ ತಲುಪಿದೆ. ಹೀಗಿದ್ದಾಗ ಮಳೆ ಬರಲೇಬೇಕಿದೆ ಇಲ್ಲವಾದರೆ ಪರಿಸ್ಥಿತಿ ಕೈಮೀರಿ ಹೋಗುವ ಲಕ್ಷಣ ಕಾಣುತ್ತಿದ್ದು. ಇಂತಹ ಸಮಯದಲ್ಲೇ ಜನರಿಗೆ ಗುಡ್ ನ್ಯೂಸ್ ಸಿಗುತ್ತಿದೆ. ಶೀಘ್ರದಲ್ಲೇ ಮಳೆ ಬರಲಿದೆ ಅಂತಿದ್ದಾರೆ ಹವಾಮಾನ ಇಲಾಖೆ ತಜ್ಞರು. ಅಲ್ಲದೆ ಏಪ್ರಿಲ್‌ನಲ್ಲಿ ಈ ಮಾಹಿತಿ ನಿಜವಾಗದೆ ಹೋದರೆ, ಅಂದ್ರೆ ಮಳೆ ಬಾರದೆ ಹೋದರೆ ಪರಿಸ್ಥಿತಿ ಮತ್ತಷ್ಟು ಹೀನಾಯ ಆಗಲಿದೆ. ಈಗಾಗಲೇ ಬಹುತೇಕ ನೀರಿನ ಮೂಲಗಳು ಒಣಗಿ ಹೋಗಿದ್ದು, ಹನಿ ಹನಿ ನೀರಿಗೂ ಪರಿತಪಿಸುತ್ತಿದ್ದಾರೆ ಜನ. ಹೀಗಾಗಿ ವರುಣ ದೇವ ಒಂದಷ್ಟು ಕರುಣೆ ತೋರಿಸಬೇಕಿದೆ.
ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ!
ಹವಾಮಾನ ಮುನ್ಸೂಚನೆ ಮಾಹಿತಿ ನೀಡುವಂತೆ ಶಿವಮೊಗ್ಗ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ 2ನೇ ವಾರದಿಂದಲೇ ಮಳೆಯಾಗಲಿದೆ ಅಂತಾ ಹೇಳಲಾಗಿದೆ. ಇದು ಒಂದು ಕಡೆಯಾದರೆ ಈಗಾಗಲೇ, ಕಾವೇರಿ ನದಿ ತವರು ಕೊಡಗು ಸೇರಿದಂತೆ ಚಿಕ್ಕಮಗಳೂರು, ಹುಬ್ಬಳ್ಳಿ & ಧಾರವಾಡ ಸೇರಿ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲೂ ಮಳೆ ಬಿದ್ದಿದೆ. ನಿನ್ನೆ ಕೂಡ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಮಳೆ ಬಿದ್ದಿದ್ದು ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಮತ್ತೊಂದು ಕಡೆ ಮುಂದಿನ ಕೆಲವೇ ದಿನದಲ್ಲಿ ಭರ್ಜರಿ ಮಳೆ ಶುರುವಾಗುವ ಮುನ್ಸೂಚನೆ ಕೂಡ ಸಿಗುತ್ತಿದೆ.
ತಕ್ಷಣ ಭರ್ಜರಿ ಮಳೆ ಬರಬೇಕು!
ಕರ್ನಾಟಕದಲ್ಲಿ ಮಳೆ ಇಲ್ಲದೆ ಭೀಕರ ಬರಗಾಲ ಎದುರಾದ ಕಾರಣಕ್ಕೆ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವು ಶುರುವಾಗಿದೆ. ಯಾಕಂದ್ರೆ ಪರಿಸ್ಥಿತಿ ಇದೇ ರೀತಿ ಮುಂದುವರಿದು, ಈ ಬರ ಇನ್ನೂ ಹಲವು ತಿಂಗಳು ಮುಂದುವರಿಯುತ್ತೆ ಎಂಬ ಭಯ ಆವರಿಸಿತ್ತು. ಈ ಕಾರಣಕ್ಕೆ, ತಕ್ಷಣವೇ ಮಳೆ ಬರಬೇಕು ಅಂತಾ ಹೇಳಿದ್ದರು ತಜ್ಞರು. ಅದೇ ರೀತಿ ಈಗ ಮಳೆಯ ಆಗಮನ ಆಗ್ತಿದೆ. ಅದರಲ್ಲೂ ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ಭರ್ಜರಿ ಮಳೆ ಬೀಳೋದು ಗ್ಯಾರಂಟಿ ಆಗಿದೆ. ಹೀಗೆ ಬೆಂಗಳೂರಲ್ಲಿ ಮಳೆ ಬರಲಿದೆ ಅಂತಾ, ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ನೀಡಿದೆ. ಏಪ್ರಿಲ್ 9ರಿಂದ ಬೆಂಗಳೂರಿನಲ್ಲಿ ಭರ್ಜರಿ ಮಳೆ ಬೀಳುವ ನಿರೀಕ್ಷೆ ಇದೆ.
ಮಳೆ ಬರುತ್ತಾ? ಮಳೆ ಬರಲ್ವಾ?
ಹೌದು, ಮಳೆ ಬರದೇ ಇದ್ದರೆ ಕನ್ನಡಿಗರ ಪರಿಸ್ಥಿತಿ ವ್ಯತಿರಿಕ್ತ ಆಗಲಿದೆ. ಯಾಕಂದ್ರೆ ಇದೀಗ ಕರ್ನಾಟಕದ ಬಹುತೇಕ ನದಿ & ಕೆರೆ ಸೇರಿದಂತೆ ಜಲ ಮೂಲಗಳು ಬತ್ತಿ ಹೋಗಿವೆ. ಹೀಗಾಗಿ ಮಳೆ ಬರಲೇಬೇಕು ದೇವರೆ ಅಂತಾ ಕಾಯುತ್ತಿದ್ದಾರೆ ಕನ್ನಡಿಗರು. ಹೀಗಿದ್ದಾಗ ಭರ್ಜರಿಯಾದ ಸುದ್ದಿಯನ್ನ ಹವಾಮಾನ ಇಲಾಖೆ ಕೊಟ್ಟಿದೆ. ಈಗಾಗಲೇ ಕೊಡಗು, ಚಿಕ್ಕಮಗಳೂರು ಸೇರಿ ಶಿವಮೊಗ್ಗ, ದಾವಣಗೆರೆ, ಬೆಳಗಾವಿ ಜಿಲ್ಲೆಗಳಲ್ಲಿ ಒಂದೊಂದು ಭಾರಿ ಮಳೆ ಬಿದ್ದಿದೆ. ಈಗ, ಇಡೀ ಕರ್ನಾಟಕದಲ್ಲಿ ಮಳೆ ಅಬ್ಬರಿಸಲಿದೆ ಎನ್ನಲಾಗುತ್ತಿದೆ. ಈ ನಡುವೆ ಕಳೆದ ತಿಂಗಳು ಕೂಡ ಇದೇ ರೀತಿ ಮಳೆ ಬೀಳುವ ಮುನ್ಸುಚನೆ ಹವಾಮಾನ ತಜ್ಞರಿಂದ ಸಿಕ್ಕಿತ್ತು. ಆದರೂ ಮಳೆ ಬೀಳಲೇ ಇಲ್ಲ! ಈ ಬಾರಿ ಕೂಡ ಹಂಗೆ ಆಗುತ್ತಾ? ಕಾದು ನೋಡಬೇಕು.
ಕನ್ನಡಿಗರ ಆಸೆಯನ್ನ ವರುಣ ದೇವ...
ಕರ್ನಾಟಕದಲ್ಲಿ ಮಳೆ ಇಲ್ಲದೆ ಭೀಕರ ಬರಗಾಲ ಎದುರಾದ ಕಾರಣಕ್ಕೆ ರಾಜ್ಯ ಸರ್ಕಾರಕ್ಕೂ ದೊಡ್ಡ ತಲೆನೋವು ಶುರುವಾಗಿದೆ. ಯಾಕಂದ್ರೆ ಪರಿಸ್ಥಿತಿ ಇದೇ ರೀತಿ ಮುಂದುವರಿದು, ಈ ಬರ ಇನ್ನೂ ಹಲವು ತಿಂಗಳು ಮುಂದುವರಿಯುತ್ತೆ ಎಂಬ ಭಯ ಆವರಿಸಿತ್ತು. ಈ ಕಾರಣಕ್ಕೆ ತಕ್ಷಣಕ್ಕೆ ಮಳೆ ಬರಬೇಕು ಅಂತಾ ಹೇಳಿದ್ದರು ತಜ್ಞರು. ಅದೇ ರೀತಿ ಈಗ ಮಳೆಯ ಆಗಮನ ಆಗಿದೆ. ಅದರಲ್ಲೂ ಕಾವೇರಿ ನದಿಯ ತವರು ಕೊಡಗು ಜಿಲ್ಲೆಯಲ್ಲಿ ಭರ್ಜರಿ ಮಳೆ ಬಂದು, ಭೂಮಿ ಕೆಸರಾಗಿದೆ. ಕಾವೇರಿ ತಾಯಿಯ ಒಡಲಿಗೂ ಭರ್ಜರಿ ನೀರು ಸೇರ್ಪಡೆಯಾಗಿದೆ. ಈ ರೀತಿ ಕರ್ನಾಟಕದ ವಿವಿಧ ಪ್ರದೇಶದಲ್ಲೂ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಮಳೆ ಬಂದ್ರೆ ಸಾಕಪ್ಪಾ ಅಂತಿದ್ದಾರೆ ಜನ. ಕನ್ನಡಿಗರ ಆಸೆಯನ್ನ ವರುಣ ದೇವ ಈಡೇರಿಸುತ್ತಾನಾ? ಅನ್ನೋದನ್ನ ಕಾದು ನೋಡಬೇಕಿದೆ.
ಹಲವು ಜಿಲ್ಲೆಗಳಲ್ಲಿ ಮಳೆ ಆರ್ಭಟ!
ಕರ್ನಾಟಕದ ಕರಾವಳಿ ಜಿಲ್ಲೆ ಸೇರಿ ಬೆಂಗಳೂರು ನಗರ, ಬೆಂಗಳೂರು ಗ್ರಾಂ. ರಾಮನಗರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು & ಹಾಸನ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮಳೆಯ ಸಿಂಚನ ಖುಷಿ ಕೊಟ್ಟಿದೆ. ಹಾಗೇ ಇಂದು ಕೂಡ ಭರ್ಜರಿ ಮಳೆ ಬಿದ್ದಿದ್ದು, ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ ಬೀಳುತ್ತೆ ಎಂಬ ಮುನ್ಸೂಚನೆ ನೀಡಲಾಗಿದೆ. ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಮಳೆ ಬೀಳಲಿದೆ ಎನ್ನಲಾಗಿದೆ. ಹೀಗಾಗಿ ಜನರು ಕೂಡ ಫುಲ್ ಖುಷ್ ಆಗಿದ್ದಾರೆ.












Click it and Unblock the Notifications